ಬಣ್ಣಗಳು ಮತ್ತು ಮೆರುಗೆಣ್ಣೆಗಳು - 

ವಸ್ತುಗಳ ಮೇಲ್ಮೈಗೆ ಸಾಪೇಕ್ಷವಾಗಿ ತೆಳುಪೂರೆಯಲ್ಲಿ ಹಚ್ಚಬಹುದಾದ ಮತ್ತು ಕಾಲ ಸಂದಂತೆ ಗಟ್ಟಿ ಪದರವಾಗಿ ಬದಲಾವಣೆಹೊಂದಬಲ್ಲ ದ್ರವ ಅಥವಾ ಅರ್ಧ ದ್ರವ ಪದಾರ್ಥವೇ ಬಣ್ಣ (ಪೇಂಟ್), ರಂಗುಪರ್ಯಾಯ ಪದ; ವಸ್ತುಗಳ ಮೇಲ್ಮೈಗೆ ದ್ರವಾಗಿ ಹಚ್ಚಿದಾಗ ಕ್ರಮೇಣ ಗಟ್ಟಿ ಪದರವಾಗಿ ಮಾರ್ಪಡುವ ಪಾರದರ್ಶಕ ಪದಾರ್ಥವೇ ಮೆರುಗೆಣ್ಣೆ (ವಾರ್ನಿಷ್). ಬಣ್ಣಗಳು ಅಥವಾ ರಂಗುಗಳು ಸಂಕೀರ್ಣ ಸಂಯೋಜನೆಗಳು. ಮಾರುಕಟ್ಟೆಯಲ್ಲಿ ಸಿಕ್ಕುವ ಸಾವಿರಾರು ಕಚ್ಚಾ ಪದಾರ್ಥಗಳ ಪೈಕಿ ನಮಗೆ ಬೇಕಾದ್ದನ್ನು ಆಯ್ದುಕೊಂಡು ಅವನ್ನು ಇಷ್ಟಾನುಸಾರ ಸಂಯೋಜಿಸಿ ಅಸಂಖ್ಯಾತ ರಂಗುಗಳನ್ನು ತಯಾರಿಸಬಹುದು. ನಿರ್ದಿಷ್ಟ ಬಗೆಯ ರಂಗಿನ ರೂಪಣೆ ತಂತ್ರವಿದರ ಕೆಲಸ. ಇವರಿಗೆ ಸೂತ್ರಕಾರರು ಎಂದು ಹೆಸರು. ಬಳಕೆಯಲ್ಲಿರುವ ಸಾವಿರಾರು ಬಗೆಯ ರಂಗುಗಳ ವಾರ್ಷಿಕ ಉತ್ಪಾದನೆ ಅಮೆರಿಕ ಸಂಯುಕ್ತ ಸಂಸ್ಧಾನ ಒಂದರಲ್ಲೇ ಸುಮಾರು 2,727,600.000 ಲೀಟರುಗಳೆಂದು ಅಂದಾಜು. ಇದರಲ್ಲಿ ಅಧಿಕಾಂಶ ಲೋಹರಕ್ಷಣೆಗೂ ಉಳಿದ ಸ್ವಲ್ಪ ಭಾಗ ಕಟ್ಟಡಗಳ ರಕ್ಷಣೆ ಮತ್ತು ಅಲಂಕರಣಕ್ಕೂ ವಿನಿಯೋಗವಾಗುತ್ತವೆ.

	ವಸ್ತುಗಳ ಮೇಲ್ಮೈಗೆ ಬಣ್ಣ ಹಚ್ಚುವುದರಿಂದ ನಾನಾ ಅನುಕೂಲತೆಗಳುಂಟು, ವಸ್ತು ಸವೆದು ಜೀರ್ಣವಾಗುವುದನ್ನು ತಪ್ಪಿಸಬಹುದು. ವಿನಾಶಕಾರಿ ಜೀವಾಣುಗಳ ಕಾಟವಿರದು. ಮೇಲ್ಮೈಯನ್ನು ಸ್ವಚ್ಛಮಾಡುವುದು ಸುಲಭ. ಅಲ್ಲದೆ ಅದಕ್ಕೆ ಆಕರ್ಷಕ ಬಣ್ಣ ನೀಡಿ ಅಂದವಾಗಿ ಕಾಣುವಂತೆ ಮಾಡಲು ಸಾಧ್ಯ. ಪ್ರತಿಯೊಂದು ಬಣ್ಣದಲ್ಲೂ ಒಂದು ಆಧಾರವಸ್ತು (ಬೇಸ್) ಮತ್ತು ವಾಹ (ವಿಹಿಕಲ್) ಇರುತ್ತವೆ. ಆಧಾರವಸ್ತು ಸೂಕ್ಷ್ಮಕಣ ಸ್ಥಿತಿಯಲ್ಲಿರುವ ಅಪಾರದರ್ಶಕ ಘನ, ಇದರಕಣ ಗಾತ್ರ 0.01-1 ಮೈಕ್ರಾನ್ ಮಿತಿಯಲ್ಲಿರುತ್ತದೆ. ವಾಹಕ ಒಣಗುವ ಒಂದು ತೈಲ. ವಾಹಕದಲ್ಲಿ ಆಧಾರವಸ್ತು ನಿಲಂಬಿತವಾಗಿರುವುದು. ಮಿಶ್ರಣದ ಗುಣಗಳನ್ನು ಬೇಕಾದಂತೆ ಮಾರ್ಪಡಿಸಲು ಅಥವಾ ಅದರ ಬೆಲೆಯನ್ನು ಇಳಿಸಲು ಅದಕ್ಕೆ ಒಂದೊ ಅಥವಾ ಅದಕ್ಕಿಂತ ಹೆಚ್ಚೊ ಇತರ ಘಟಕಗಳನ್ನು ಕೂಡಿಸುವುದು ವಾಡಿಕೆ. ಆಧಾರವಸ್ತುವನ್ನು ವರ್ಣದ್ರವ್ಯ (ಪಿಗ್ಮೆಂಟ್) ಅಥವಾ ಕಾಯ (ಬಾಡಿ) ಎಂದೂ ಕರೆಯುವುದುಂಟು. ಆಧಾರವಸ್ತುವಿನ ಬಿಳುಪು ಅಥವಾ ಬಣ್ಣ, ಜಡತೆ ಅಪಾರ ದರ್ಶಕತೆ ಮತ್ತು ಪರಿವೇಷ್ಟನ ಸಾಮಥ್ರ್ಯ (ಕವರಿಂಗ್ ಪವರ್) ಇವನ್ನು ಅವಲಂಬಿಸಿ ಅದನ್ನು ಆಯ್ಕೆ ಮಾಡಲಾಗುತ್ತದೆ. ಸರ್ವಸಾಮಾನ್ಯವಾಗಿ ಬಣ್ಣಗಳಲ್ಲಿ ಬಳಸುವ ಆಧಾರವಸ್ತುಗಳೆಂದರೆ ಟೈಟೇನಿಯಮ್ ಡೈಆಕ್ಷೈಡ್ , ವೈಟ್‍ಲೆಡ್  . ಸತುವಿನ ವೈಟ್ ಮತ್ತು ಲಿಥೋಪೋನ್ . ಇವೆಲ್ಲ ಬಿಳುಪು. ಬಣ್ಣಗಾರ ಆಧಾರ ವಸ್ತುವನ್ನು ಆಯುವಾಗ ಲಭ್ಯವಾಗುವ ಬಣ್ಣದ ಬೆಲೆಯನ್ನು ಅದರ ಗುಣಗಳೊಂದಿಗೆ ತುಲನೆ ಮಾಡಿ ನೋಡುವುದು ವ್ಯಾವಹಾರಿಕ. ಉದಾಹರಣೆಗೆ ಸತುವಿನ ವೈಟ್, ವೈಟ್‍ಲೆಡ್ಡಿಗಿಂತ ಬಿಳುಪು, ವಿಷಪದಾರ್ಥವಲ್ಲ, ವಾಯು ಸಂಪರ್ಕದಲ್ಲಿ ಕಪ್ಪಾಗದು. ಆದರೆ ವೈಟ್‍ಲೆಡ್ಡಿನ ಪರಿವೇಷ್ಟನ ಸಾಮಥ್ರ್ಯ ಇದಕ್ಕಿಲ್ಲ. ಅಲ್ಲದೆ ಅದು ಬೇಗ ಎಡೆದು ಹೋಗುತ್ತದೆ ಕೂಡ. ಅದೇ ವೈಟ್‍ಲೆಡ್ ಬಣ್ಣಗಳಾದರೊ ಬಲುಬೇಗ ಮಲಿನವಾಗುತ್ತವೆ. ಇವನ್ನು ಧರಿಸಿರುವ ಮೇಲ್ಮೈಯನ್ನು ಸ್ವಚ್ಛ ಮಾಡುವುದು ಪ್ರಯಾಸ. ಇದರ ಮೇಲೆ ಪುನಃ ಬಣ್ಣ ಹಾಕಬಹುದು. ಇವುಗಳ ಪರಿವೇಷ್ಟನ ಸಾಮಥ್ರ್ಯ ಅಧಿಕ. ಅಂದರೆ ಸ್ವಲ್ಪ ರಂಗಿನಿಂದ ಅಧಿಕ ಪ್ರದೇಶವನ್ನು ಮುಚ್ಚಬಹುದು. ಇವು ಹೊರಾಂಗಣ ಕೆಲಸಗಳಿಗೆ ಮಾತ್ರ ಯುಕ್ತ.

	ಆಧಾರವಸ್ತು ದುಬಾರಿಯಾಗಿದ್ದ ಪಕ್ಷದಲ್ಲಿ ಅದನ್ನು ರಿಕ್ತಗೊಳಿಸಿ ಬಣ್ಣದ ಬೆಲೆ ಇಳಿಸುವುದಕ್ಕಾಗಿ ಅದಕ್ಕೆ ವ್ಯಾಪಕಗಳನ್ನು (ಎಕ್‍ಸ್ಟೆಂಡರ್ಸ್) ಸೇರಿಸುವುದು ವಾಡಿಕೆ, ಇವುಗಳಿಗೆ ಪೂರಕಗಳು (ಫಿಲ್ಲರ್ಸ್) ಎಂದು ಹೆಸರು. ಬೇರಿಯಮ್ ಸಲ್ಫೇಟ್ (ಃಚಿSಔ4), ಚಾಕ್ (ಅಚಿಅಔ3), ಕೇಯೊಲಿನ್ (ಇದರ ಸರಿಸುಮಾರು ಸಂಯೋಜನೆ ಇಂತಿದೆ: ಂ1203. 2Siಔ2 ,  2ಊ20) ಮತ್ತು ಸಿಲಿಕಾ (Siಔ-2) ಸಾಮಾನ್ಯ ಬಳಕೆಯಲ್ಲಿರುವ ಪೂರಕಗಳು.

	ಬಣ್ಣದ ರಂಗುಗಳು ಬೇಕಾದರೆ ಆಧಾರವಸ್ತುವಾಗಿ ಯುಕ್ತವಾದ ಒಂದು ಬಣ್ಣವನ್ನು ಉಪಯೋಗಿಸಬಹುದು. ಇಲ್ಲವೇ ಸಾಂಪ್ರದಾಯಿಕ ಬಿಳಿ ಆಧಾರ ವಸ್ತುವಿಗೆ ಅಲ್ಪ ಪರಿಮಾಣ ಬಣ್ಣ ಸೇರಿಸಿ ಅಪೇಕ್ಷಿತ ವರ್ಣಛಾಯೆ ಸಾಧಿಸಬಹುದು. ಉದಾಹರಣೆಗೆ ಗ್ರ್ಯಾಫೈಟ್, ದೀಪದ ಮಸಿ ಅಥಾವ ಕಾರ್ಬನ್ ಕಪ್ಪುಗಳನ್ನು ಸೇರಿಸಿದರೆ ಬೂದುಬಣ್ಣದ ರಂಗು ದೊರೆಯುತ್ತದೆ. ರೆಡ್‍ಲೆಡ್ (Pb3o4), ವರ್ಮಿಲಿಯನ್ (ಊgS) ಅರ್ಥಾತ್ ಸಿಂಧೂರ, ಹೆಮಟೈಟ್ (ಈe203), ವೆನಿಷಿಯನ್ ರೆಡ್ (ಕ್ಯಾಲ್ಸಿಯಮ್ ಸಲ್ಫೇಟ್ ಮಿಶ್ರಿತ ಹೆಮಟೈಟ್), ಅಲಿಜಾರಿನ್ ಕ್ರಿಮ್ಸನ್ (ಬಂಧಕದ ಮೇಲೆ ಆಧಿಶೋಷಿತ ಅಲಿಜಾರಿನ್‍ರಂಗು), ಕಾರ್ಮಿನ್ (ಅಧಿಶೋಷಿತ ಕೊಚಿನೀಲ್) ಮತ್ತು ಜರೇನಿಯಮ್ (ಅಧಿಶೋಷಿತ ಇಯೋಸೀನ್) ಮೊದಲಾದವನ್ನು ಕೂಡಿಸುವುದರಿಂದ ವಿವಿಧ ಛಾಯೆಯ ಕೆಂಪು ರಂಗುಗಳು ಉಂಟಾಗುತ್ತವೆ. ಕ್ರೋಮ್ ಆರೆಂಜ್ (Pb2ಔ ಅಡಿಔ4) ಅಥವಾ ಕೆಂಪು ಮತ್ತು ಹಳದಿ ಬಣ್ಣಗಳನ್ನು ಗೊತ್ತಾದ ಪ್ರಮಾಣಗಳಲ್ಲಿ ಬೆರೆಸಿ ಕಿತ್ತಳೆ ಬಣ್ಣದ ರಂಗುಗಳನ್ನು ಮಾಡಿಕೊಳ್ಳಬಹುದು. ಹೀಗೆ ರಂಗುಗಳನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ಅಗತ್ಯ. ಆಯ್ಕೆ ಮಾಡಿದ ರಂಗುಗಳು ಪರಸ್ಪರ ಮತ್ತು ಆಧಾರ ವಸ್ತುವಿನೊಡನೆ ಹೊಂದಿಕೊಳ್ಳುವಂತಿರಬೇಕು. ಉದಾಹರಣೆಗೆ ಅಲ್ಟ್ರಾಮ್ಯಾರೈನ್ ಮತ್ತು ಸಿಂಧೂರ ಎರಡರಲ್ಲೂ ಗಂಧಕಾಂಶವಿದೆಯಷ್ಟೆ. ಇವನ್ನು ವೈಟ್‍ಲೆಡ್ ಮತ್ತು ಕ್ರೋಮ್ ಹಳದಿಗಳ ಜೊತೆ ಎಂದೂ ಬೆರೆಸಬಾರದು. ಏಕೆಂದರೆ ಇವೆರಡರಲ್ಲಿರುವ ಸೀಸದೊಡನೆ ಗಂಧಕ ವರ್ತಿಸಿ ಕಪ್ಪಾಗುತ್ತದೆ.

	ಹಳದಿ ಓಕರ್ ಎಂಬುದು ಜಲಸಂಯೋಜಿತ ಫೆರಿಕ್ ಆಕ್ಸೈಡುಳ್ಳ ಒಂದು ನೈಸರ್ಗಿಕ ಮಣ್ಣು. ಇದನ್ನಾಗಲೀ ಕ್ಯಾಡ್ಮಿಯಮ್ ಹಳದಿ (ಅಜS) ಅಥವಾ ಕ್ರೋಮ್ ಹಳದಿಯನ್ನಾಗಲೀ (Pbಅಡಿಔ4) ನಿಗದಿಪಡಿಸಿದ ಪ್ರಮಾಣಗಳಲ್ಲಿ ಸೇರಿಸಿದರೆ ವಿವಿಧ ಹಳದಿ ಛಾಯೆಯ ರಂಗುಗಳು ಉಂಟಾಗುತ್ತವೆ. ಕ್ರೋಮ್ ಹಸಿರು (ಅಡಿ2ಔ3) ವರ್ಡಿಗ್ರಿಸ್ (ಅu(ಔಊ)2. 2ಅu(ಅ2ಊ3ಔ2)2). ಪ್ಯಾರಿಸ್ ಹಸಿರು (ಅu(ಅ2ಊ3ಔ2)2. ಅu3(ಂSಔ3)2 ಮತ್ತು ಷೀಲೆಯ ಹಸಿರು (ಅu ಊಂs03) ಬಳಕೆಯಲ್ಲಿರುವ ಮುಖ್ಯ ಹಸಿರು ವರ್ಣದ್ರವ್ಯಗಳು. ಪ್ರಷ್ಯನ್ ನೀಲಿ (ಈe4 (ಈe (ಅಓ)6)3] ಮತ್ತು ಅಲ್ಟ್ರಾಮ್ಯಾರೈನ್ ಪರಿಚಿತ ನೀಲಿ ಬಣ್ಣಗಳು. ಲೇಪಿಸ್ ಲಸೂಲಿ ಎಂಬುದು ಮನೋಹರವಾದ ನೀಲಿ ಖನಿಜ. ಇದು ಅಲ್ಯೂಮಿನಿಯಮ್ ಮತ್ತು ಸೋಡಿಯಮ್ಮುಗಳ ಸಲ್ಪೈಡ್ ಮತ್ತು ಸಿಲಿಕೇಟುಗಳ ಮಿಶ್ರಣ. ಸೋಡಿಯಮ್ ಸಲ್ಫೈಟ್, ಇದ್ದಲು ಮತ್ತು ಕೇಯೊಲಿನ್ನುಗಳ ಮಿಶ್ರಣವನ್ನು ಕಾಸಿ ಇದನ್ನು ಕೃತಕವಾಗಿಯೂ ತಯಾರಿಸಬಹುದು. ನೈಸರ್ಗಿಕ ಖನಿಜವನ್ನಾಗಲೀ ಕೃತಕ ಉತ್ಪನ್ನವನ್ನಾಗಲೀ ಚೆನ್ನಾಗಿ ಪುಡಿ ಮಾಡಿದರೆ ಬರುವುದೇ ಅಲ್ಟ್ರಾಮ್ಯಾರೈನ್. ಕೋಬಾಲ್ಟ್ ವಯೊಲೆಟ್ ರಾಸಾಯನಿಕವಾಗಿ ಕೋಬಾಲ್ಟ್ ಫಾಸ್ಫೇಟ್ [ಅಔ3(Pಔ4)]2 ಉತ್ತಮ ನೇರಿಳೆ ಬಣ್ಣ ಇದೊಂದೇ. ಊದಾ ಬಣ್ಣ ಉಂಟಾಗಲು ಕೆಂಪು ಮತ್ತು ನೀಲಿ ಬಣ್ಣಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಕೂಡಿಸಬೇಕು. ಕಂದು ಬಣ್ಣಗಳೆಲ್ಲ ಮೃತ್ತಿಕೆಗಳು. ಅಂದರೆ ಬಣ್ಣದ ಆಕ್ಸೈಡುಗಳುಳ್ಳ ನೈಸರ್ಗಿಕ ಜೇಡಿ ಮಣ್ಣುಗಳು. ಅವುಗಳಲ್ಲಿ ಮುಖ್ಯವಾದವೆಂದರೆ ಕಚ್ಚಾ ಅಂಬರ್ (ಜಲಸಂಯೋಜಿತ ಫೆರಿಕ್ ಆಕ್ಸೈಡ್ ಮತ್ತು ಮ್ಯಾಂಗನೀಸ್ ಡೈಆಕ್ಸ್ಸೆಡುಗಳ ಮಿಶ್ರಣ). ಸುಟ್ಟ ಅಂಬರ್, ಕಚ್ಚಾಸಿಯೆನ್ನ (ಅಂಬರಿಗಿಂತ ಕಡಿಮೆ ಪ್ರಮಾಣ ಮ್ಯಾಂಗನೀಸ್ ಡೈಆಕ್ಸೈಡುಳ್ಳ ಜಲಸಂಯೋಜಿತ ಫೆರಿಕ್ ಆಕ್ಸೈಡ್), ಸುಟ್ಟ ಸಿಯೆನ್ನ ಮತ್ತು ಕಂದು ಓಕರ್ (ಜಲಸಂಯೋಜಿತ ಫರಿಕ್ ಆಕ್ಸೈಡ್.)

	ವಾಹಕ ಅಥವಾ ರಂಗಿನ ಮಾಧ್ಯಮ ಒಂದು ಎಣ್ಣೆ. ಇದು ಒಣಗಿ ಗಡಸು ಪದರ ಮೂಡುವುದು ಉತ್ಕರ್ಷಣದಿಂದಲೇ ವಿನಾ ಆವೀಕರಣದಿಂದಲ್ಲ. ಇದರ ಸಲುವಾಗಿ ಹೆಚ್ಚು ಬಳಕೆಯಲ್ಲಿರುವುದು ನಾರಗಸೆ ಬೀಜದ (ಲಿನ್ಸೀಡ್) ಎಣ್ಣೆ. ಗಸಗಸೆ ಎಣ್ಣೆ ಮತ್ತು ಚೀನಿ ಮರದೆಣ್ಣೆಗಳನ್ನೂ ವಾಹಕಗಳಾಗಿ ಬಳಸುವುದುಂಟು. ನಾರಗಸೆ ಬೀಜದ ಎಣ್ಣೆಯಲ್ಲಿ ಪ್ರಧಾನವಾಗಿ ಅಪರ್ಯಾಪ್ತ ಆಮ್ಲಗಳ ಗ್ಲಿಸರೈಡುಗಳಿರುತ್ತವೆ. ಇವುಗಳಲ್ಲಿ ದ್ವಿಬಂಧ ಮತ್ತು ತ್ರಿಬಂಧಗಳಿರುವುದರಿಂದ ಇವು ವಾಯುಮಂಡಲದಿಂದ ಆಕ್ಸಿಜನ್ನನ್ನು ಹೀರಿಕೊಂಡು ಗಡಸಾಗುತ್ತವೆ. ಹೀಗೆ ಒಣಗುವ ಎಣ್ಣೆಗಳಿಂದ ಉಂಟಾಗುವ ಅಂಟಿನ ಗಡಸು ಪದರವೇ ರಂಗು ನೀಡುವ ರಕ್ಷಣೆಗೆ ಕಾರಣ.

	ನಾರಗಸೆ ಬೀಜದ ಎಣ್ಣೆಯನ್ನು ಮ್ಯಾಂಗನೀಸ್ ಡೈಆಕ್ಸೈಡ್ ಅಥವಾ ಲಿಥಾರ್ಜಿನೊಡನೆ (ಸೀಸದ ಮಾನಾಕ್ಸೈಡಿನ ವ್ಯಾವಹಾರಿಕ ಹೆಸರು) ಸುಮಾರು 150(ಅ ಗೆ ಕಾಸಿದರೆ ಬರುವ ಉತ್ಪನ್ನ ಕ್ಷಿಪ್ರವಾಗಿ ಒಣಗುತ್ತದೆ. ಇದಕ್ಕೆ ಕುದಿಸಿದ ಎಣ್ಣೆ ಎಂದು ಹೆಸರು. ಈ ಲೌಹಿಕ ಆಕ್ಸೈಡುಗಳು ಎಣ್ಣೆಯ ಮಂದಗತಿಯ ಉತ್ಕರ್ಷಣವನ್ನು ಚುರುಕುಗೊಳಿಸುವ ಕ್ರಿಯಾವರ್ಧಕಗಳು. ಬಹುತೇಕ ರಂಗುಗಳಿಗೆ ಇಂಥ ಶುಷ್ಕಕಾರಿಗಳನ್ನು ಅಲ್ಪ ಪರಿಮಾಣಗಳಲ್ಲಿ ಸೇರಿಸಿರುತ್ತಾರೆ.

	ಕೆಲವು ವೇಳೆ ಬಣ್ಣಗಳ ಸ್ನಿಗ್ಧತೆಯನ್ನು ಕಡಿಮೆ ಮಾಡಿದ ಹೊರತು ಅವನ್ನು ಹಚ್ಚುವುದು ಕಷ್ಟ. ಇದಕ್ಕೋಸ್ಕರ ಕೆಲವು ವಿರಳಕಗಳನ್ನು (ಥಿನ್ನರ್ಸ್) ಸೇರಿಸುವುದು ರೂಢಿ. ಟರ್ಪೆಂಟೈನ್ ಜನಪ್ರಿಯವಾದ ಒಂದು ವಿರಳಕ. ಆದರೆ ನ್ಯಾಫ್ತ, ಗುಣಗೆಡಿಸಿದ ಆಲ್ಕೊಹಾಲ್ ಮತ್ತಿತ್ತರ ಅಗ್ಗದ ದ್ರಾವಕಗಳನ್ನೂ ಬಳಸುವುದುಂಟು.

	ಅಂಟುಗಳನ್ನು ಒಣಗುವ ಎಣ್ಣೆಗಳಲ್ಲಿ ವಿಲೀನಿಸಿ ದೊರೆವ ಪದಾರ್ಥಕ್ಕೆ ವಿರಳಕಗಳನ್ನೂ ಶುಷ್ಕಕಾರಿಗಳನ್ನೂ ಸೇರಿಸಿ ಮರುಗೆಣ್ಣೆಗಳನ್ನು ತಯಾರಿಸುತ್ತಾರೆ. ಪಳೆಯುಳಿಕೆ ಅಂಟುಗಳಾದ ಕೋಪಾಲ್ ಮತ್ತು ಅಂಬರ್, ಡಾಮರ್, ಮ್ಯಾಸ್ಟಿಕ್ ಮತ್ತು ರೋಸಿನುಗಳು ಬಳಕೆಯಲ್ಲಿರುವ ಮುಖ್ಯ ಅಂಟುಗಳು. ಆಲ್ಕೊಹಾಲಿನಲ್ಲಿ ಅರಗನ್ನು ವಿಲೀನಿಸಿ ಷೆಲ್ಯಾಕ್ ಎಂಬ ಸ್ಪರಿಟ್ ವಾರ್ನಿಷ್ ತಯಾರಿಸುವರು. ಎನಾಮೆಲ್ ರಂಗುಗಳಲ್ಲಿ ಅಂಟುಗಳು ವಿಲೀನವಾಗಿರುತ್ತವೆ. ಆದ್ದರಿಂದ ಅವು ಮೆರುಗೆಣ್ಣೆಗಳಂತೆಯೆ ಗಡಸಾಗಿ ಥಳಥಳಿಸುವ ನುಣುಪಾದ ಲೇಪ ಒದಗಿಸುತ್ತವೆ.

	ತೈಲ ರಂಗುಗಳ ಮತ್ತು ಮೆರುಗೆಣ್ಣೆಗಳ ಬದಲು ಪೈರಾಕ್ಸಿಲಿನ್ ಮೆರುಗೆಣ್ಣೆಗಳ ಬಳಕೆ ಜನಪ್ರಿಯವಾಗುತ್ತಿವೆ. ಇವನ್ನು ಹಚ್ಚುವುದು ಸುಲಭ. ಲೇಪನ ಕ್ಷಿಪ್ರವಾಗಿ ಒಣಗುತ್ತದೆ. ಹೀಗಾಗಿ ಉಪಯುಕ್ತತೆ ಅಧಿಕ. ಉದಾಹರಣೆಗೆ ಮೋಟರ್ ವಾಹನಗಳಿಗೆ ಲೇಪಿಸಲು ಇವು ಪ್ರಶಸ್ತ. ಇಲ್ಲಿ ಆಧಾರವಸ್ತು ಪೈರಾಕ್ಸಿಲಿನ್. ಇದನ್ನು ಈಥೈಲ್ ಅಸಿಟೇಟ್, ಬ್ಯೂಟೈಲ್ ಅಸಿಟೇಟ್ ಅಥವಾ ಅಮೈಲ್ ಅಸಿಟೇಟಿನಲ್ಲಿ ವಿಲೀನಿಸಿರುತ್ತಾರೆ. ಮೆರುಗೆಣ್ಣೆಗೆ ಬಣ್ಣ ಮತ್ತು ಅಪಾರದರ್ಶಕತೆ ನೀಡಲು ವರ್ಣದ್ರವ್ಯಗಳನ್ನು ಅಳವಡಿಸುವುದು ವಾಡಿಕೆ. ವಿರಳಕಗಳಾಗಿ ಆಲ್ಕೊಹಾಲ್ ನ್ಯಾಫ್ತ ಮತ್ತು ಇತರ ಅಗ್ಗದ ದ್ರಾವಕಗಳನ್ನು ಸೇರಿಸುವರು. ಡೈಈಥೈಲ್ ಫ್ತಾಲೇಟ್ ಅ6ಊ4 (ಅಔ. ಔ. ಅ2ಊ5)2, ಬ್ಯೂಟೈಲ್ ಸ್ಟಿಯರೇಟ್ (ಅ17 ಊ35 ಅಔಔಅ4ಊ9). ಟ್ರೈಫೀನೈಲ್ ಫಾಸ್ಫೇಟ್ [(ಅ6ಊ5)3Pಔ4] ಮತ್ತಿತರ ಸದೃಶ ಎಸ್ಟರುಗಳನ್ನು ಪ್ಲ್ಯಾಸ್ಟಿಸೈಸರುಗಳಾಗಿ ಮತ್ತು ಮ್ಯಾಸ್ಟಿಕ್ ಮತ್ತು ರೋಸಿನುಗಳಂಥ ಅಂಟುಗಳನ್ನು ಹೊಳಪು ಕೊಡಲೋಸ್ಕರವಾಗಿ ಅದಕ್ಕೆ ಸೇರಿರುತ್ತಾರೆ.

	ಜಲೀಯ ರಂಗುಗಳಲ್ಲಿ ವರ್ಣದ್ರವ್ಯದ ಜೊತೆಗೆ ಕೇಸೀನ್, ಜಿಲೆಟಿನ್ ಅಥವಾ ಗೋಂದಿನಂಥ ಬಂಧಕವಿರುತ್ತದೆ. ಇಲ್ಲಿ ಎಣ್ಣೆಯ ಬದಲು ನೀರು ವಾಹಕ. ಕ್ಯಾಲ್ಸಿಮೈನ್ ಇಂಥ ಒಂದು ಜಲೀಯ ರಂಗು. ಗ್ಲೂ ಇರುವ ನೀರಿನಲ್ಲಿ ಕ್ಯಾಲ್ಸಿಯಮ್ ಕಾರ್ಬೂನೇಟನ್ನು ನಿಲಂಬಿಸಿ ಇದನ್ನು ತಯಾರಿಸುವರು. ಬೇಕಾದರೆ ಅಪೇಕ್ಷಿತ ಬಣ್ಣವನ್ನು ಸೇರಿಸಬಹುದು. ಒಳಾಂಗಣದ ಬಳಕೆಗೆ ಇದು ಉಪಯುಕ್ತ. ಅರಳಿದ ಸುಣ್ಣ, ಹಿಟ್ಟಿನ ಸರಿ ಮತ್ತು ಗ್ಲೂಗಳನ್ನು ನೀರಿನಲ್ಲಿ ನಿಲಂಬಿಸಿ ಗೋಡೆಗೆ ಸುಣ್ಣ ಬಳಿಯುತ್ತಾರೆ. ನೀರಿನಲ್ಲಿ ವರ್ಣದ್ರವ್ಯದೊಡನೆ ಕೇಸೀನ್ ಮಿಶ್ರಿತವಾಗಿದ್ದರೆ ಕೇಸೀನ್ ರಂಗುಗಳು ಉಂಟಾಗುತ್ತವೆ. ಇವು ಒಣಗಿದ ಮೇಲೆ ನೀರಿನಿಂದ ತೊಳೆದರೂ ಬಾಧಕವಿಲ್ಲ.

	ಒಂದು ರಂಗು ಲೇಪದ ರಕ್ಷಣ ಸಾಮಥ್ರ್ಯ ಅದರಲ್ಲಿರುವ ಬಂಧಕದ ಗುಣಗಳನ್ನು ಅವಲಂಬಿಸಿದೆ. ಪ್ರಾಚೀನ ರಂಗು ಉದ್ಯಮಿಗಳಿಗೆ ತಿಳಿದಿದ್ದ ಬಂಧಕಗಳೆಂದರೆ ಒಣಗುವ ಎಣ್ಣೆಗಳು, ಮೆರುಗೆಣ್ಣೆ ಮತ್ತು ಟಾರೆಣ್ಣೇಗಳು, ಕಳೆದ ಐವತ್ತು ವರ್ಷಗಳಲ್ಲಿ ರಾಸಾಯನಿದ ಮತ್ತು ಪ್ಲ್ಯಾಸ್ಟಿಕ್ ಕೈಗಾರಿಕೆಗಳು ನಮಗೆ ಅನೇಕಾನೇಕ ಸಂಶ್ಲೇಷಿತ ಬಂಧಕಗಳನ್ನು ಒದಗಿಸಿವೆ. ಇವುಗಳಿಂದ ಉತ್ತಮ ರಕ್ಷಣೆ ಮತ್ತು ಅಲಂಕರಣ ನೀಡುವ ರಂಗುಗಳ ತಯಾರಿಕೆ ಸಾಧ್ಯವಾಗಿದೆ. ಇಂಥ ಸಂಶ್ಲೇಷಿತ ಬಂಧಕಗಳ ಹೆಸರು ಮತ್ತು ಪ್ರಪ್ರಥಮವಾಗಿ ರಂಗು ಸಂಯೋಜನೆಯಲ್ಲಿ ಅವನ್ನು ಬಳಸಿದ ವರ್ಷಗಳನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು:

1910-19
ಫೀನಾಲಿಕ್ ಅಂಟುಗಳು

1920-25
ತೈಲರೂಪಿತ ಆಲ್ಕಿಡ್ ಅಂಟುಗಳು, ಸೈಲ್ಯುಲೋಸ್ ನೈಟ್ರೀಟ್ ಮತ್ತು ಅಸಿಟೇಟ್

1925-37
ವೀನೈಲ್ ಪಾಲಿಮೆರುಗಳು (ಕ್ಲೋರೈಡ್-ಅಸಿಟೇಟ್), ಅಕ್ರಿಲೇಟ್ ಅಂಟುಗಳು, ಸೆಲ್ಯುಲೋಸ್ ಅಸಿಟೂ ಬ್ಯುಟಿರೇಟ್, ಯೂರಿಯಾ ಅಂಟುಗಳು

1932-37
ಈಥೈಲ್ ಸೆಲ್ಯುಲೋಸ್, ಪಾಲಿಸ್ಟೈರೀನ್, ಸಂಶ್ಲೇಷಿತ ರಬ್ಬರ್, ವೀನೈಲ್ ಅಸಿಟಾಲುಗಳು

1938-43
ವೀನೈಲ್ ಅಂಟುಗಳು (ಅಕ್ರಿಲೋ-ನೈಟ್ರೀಲ್-ವಿನಿಲಿಡೀನ್-ಕ್ಲೋರೈಡ್), ನೈಲಾಮ್ ಮತ್ತು ಪಾಲಿಯೂರಿಥೇನ್ ಅಂಟುಗಳು, ಮೆಲಮೈನ್ ಅಂಟುಗಳು, ಅಲ್ಲೈಲ್ ಮತ್ತು ಅಪರ್ಯಾಪ್ತ ಪಾಲಿಎಸ್ಟರ್ ಅಂಟುಗಳು, ಸೈಕ್ಲೊಹೆಕ್ಸನೋನ್ ಅಂಟುಗಳು

1943-51
ಈಪಾಕ್ಸಿ ಅಂಟುಗಳು, ಪಾಲಿಎಥಿಲೀನ್, ಫಾಲಿಪ್ಲೂರೊ (ಅಥವಾ ಫ್ಲೂರೊಕ್ಲೋರೊ) ಎಥಿಲೀನ್, ಸಿಲಿಕೋನುಗಳು

	ವ್ಯಾವಹಾರಿಕ ರಂಗುಗಳಲ್ಲಿ ಎರಡು ಅಥವಾ ಹೆಚ್ಚು ಅಂಟುಗಳ ಸಂಕೀರ್ಣ ಮಿಶ್ರಣವನ್ನು ಬಂಧಕವಾಗಿ ಸೇರಿಸಿರುತ್ತಾರೆ. ಹೀಗೆ ಅಂಟುಗಳ ಸಂದರ್ಭೋಚಿತ ಸಂಯೋಜನೆಗಳನ್ನು ರೂಪಿಸಿ ಸೂತ್ರಕಾರ ನಿರ್ದಿಷ್ಟ ಬಂಧಕವನ್ನು ತಯಾರಿಸಿ ಲೋಹ ರಕ್ಷಣೆ ಮಾಡಬಲ್ಲರಂಗನ್ನು ಕಂಡುಹಿಡಿಯುತ್ತಾನೆ.

.'	ವಿರಳಕಗಳಲ್ಲಿ ವಿಲೀನ ಮಾಡಲಾಗದ ಅಂಟುಗಳನ್ನು ದ್ರವಿಸಿ ಹಚ್ಚುವ ನೂತನ ವಿಧಾನವೊಂದನ್ನು ಕಂಡುಹಿಡಿಯಲಾಗಿದೆ. ಇದೇ ಬಿಸಿದ್ರವ ತಂತ್ರ. ಲೋಹದ ಮೈಮೇಲೆ ಅದು ತಣಿದು ಘನೀಭವಿಸಿ ಪದರ ಮೂಡಿಸುತ್ತದೆ. ಇಲ್ಲಿ ಲೋಹವನ್ನು ಬಿಸಿಯಾದ ದ್ರವ ರಂಗಿನಲ್ಲಿ ಅದ್ದಿ ತೆಗೆಯಬಹುದು. ಇಲ್ಲವೇ ಉರುಳೆಯಿಂದ ಅದರ ಮೇಲೆ ಲೇಪಿಸಬಹುದು ಅಥವಾ ಸಿಂಪಡಿಸಬಹುದು. ಈಗ ಜ್ವಾಲಾಸೇಚನ (ಫ್ಲೇಮ್ ಸ್ಪ್ರೇಯಿಂಗ್) ವಿಧಾನ ಬಳಕೆಗೆ ಬಂದಿದೆ. ಇದರಲ್ಲಿ ಪುಡಿಮಾಡಿದ ಅಂಟನ್ನು ಅಥವಾ ವರ್ಣದ್ರವ್ಯ ಮತ್ತು ಅಂಟುಗಳ ಪುಡಿ ಮಿಶ್ರಣವನ್ನು ಸೇಚನ ಕೋವಿಯ ಮೂಲಕ ತೂರಲಾಗುತ್ತದೆ. ಕೋವಿಯ ಮೊನೆಮೂತಿಯನ್ನು ಆವರಿಸಿಕೊಂಡು ಜ್ವಾಲೆ ಆ ಪುಡಿಯನ್ನು ತತ್‍ಕ್ಷಣ ದ್ರವಿಸಿ ದ್ರವಸ್ಥಿತಿಯಲ್ಲೇ ಪದಾರ್ಥದ ಮೈಮೇಲೆ ಎರಚುತ್ತದೆ. ಅಲ್ಲಿ ಅದು ತಣಿಯುವಾಗ ಅಂತರರಹಿತ ಪದರ ಏರ್ಪಡುವುದು.	
(ಎಚ್.ಜಿ.ಎಸ್.)

	ಬಣ್ಣಗಳ ತಯಾರಿಕೆ: ಒಣಗಿದ ಬಿಳೀ ಸೀಸವನ್ನು ಅಗಸೆ ಎಣ್ಣೆಯ ಜೊತೆಗೆ ಬೆರೆಸಿ ಗಿರಣಿಯಲ್ಲಿ ಅರೆದು ಲೆಪ್ಪದಂಥ ಅಂಟಾದ ಪದಾರ್ಥವನ್ನು ತಯಾರಿಸುತ್ತಾರೆ. ಬಿಳೀ ಸೀಸವೆಂದರೆ ಸೀಸದಕಾರ್ಬೋನೇಟ್ ಮತ್ತು ಜಲಸಂಯುಕ್ತ ಸೀಸದ ಆಕ್ಸೈಡುಗಳ ಮಿಶ್ರಣವಾದ ವರ್ಣದ್ರವ್ಯ. ಈ ಲೆಪ್ಪದ ಜೊತೆಗೆ ಭರ್ತಿ ಸಾಮಾನುಗಳನ್ನೂ ಬಣ್ಣಗಳನ್ನೂ ಒಂದು ಗಿರಣಿಯಲ್ಲಿ ಬೆರೆಸುತ್ತಾರೆ. ಮರದ ಮೇಲೆ ಮೊದಲು ಬಳಿಯುವ ಬಣ್ಣಗಳು ಮರದೊಳಕ್ಕೆ ಹೊಕ್ಕು ಮೇಲಿನ ಬಣ್ಣಗಳು ಚೆನ್ನಾಗಿ ಹಿಡಿಯುವುದಕ್ಕೆ ಸಹಾಯ ಮಾಡುತ್ತವೆ. ಬೇಗ ಒಣಗಬೇಕಾಗಿರುವುದರಿಂದ ಇವುಗಳಲ್ಲಿ ಸಿಂಧೂರವನ್ನು ಸೇರಿಸುತ್ತಾರೆ. ಸಿಂಧೂರ ಸೀಸದ ಆಮ್ಲಜನಕ ಸಂಯುಕ್ತ. ಶುಭ್ರವಾದ ಕಬ್ಬಿಣಕ್ಕೆ ತುಕ್ಕು ಹಿಡಿಯುದಂತೆ ಬಳಿಯುವ ಬಣ್ಣಗಳಲ್ಲಿ ಕಬ್ಬಿಣದ ಆಕ್ಸೈಡ್, ಸೀಸದ ಕ್ರೋಮೇಟ್, ಅಭ್ರಕವಿರುವ ಕಬ್ಬಿಣದ ಅದುರು, ಪುಡಿ ಮಾಡಿದ ಸತುವು, ಸೀಸ ಇರುತ್ತವೆ. ಆಗಲೇ ಕೊಂಚ ತುಕ್ಕು ಹಿಡಿದ ಕಬ್ಬಿಣಕ್ಕೆ ಸಿಂಧೂರವನ್ನು ಬಳಿಯುತ್ತಾರೆ. ಅಲ್ಯೂಮಿನಿಯಮ್ ಮತ್ತು ಮ್ಯಾಗ್ನೀಸಿಯಮ್ ಲೋಹಗಳಿಗೆ ಸತುವಿನ ಕ್ರೋಮೇಟನ್ನು ಹಚ್ಚುತ್ತಾರೆ.

	ಆಮ್ಲಗಳನ್ನೂ ನೀರನ್ನೂ ತಡೆಯಬೇಕಾದ ಬಣ್ಣಗಳಲ್ಲಿ ಬಿಟ್ಯುಮೆನ್ ಇರುತ್ತದೆ. ಇದು ಪ್ರಕೃತಿಯಲ್ಲಿ ದೊರೆಯುವ ನ್ಯಾಫ್ತ. ಇದೊಂದು ಹೈಡ್ರೊಕಾರ್ಬನ್. ಹಡಗುಗಳಿಗೆ ಹೊರಗಡೆ ಬಿಳಿಯುವ ಬಣ್ಣಗಳಲ್ಲಿ ಕಡಲ ಜೀವಿಗಳಿಗೆ ವಿಷವಾಗಿರುವ ತಾಮ್ರ, ಪಾದರಸ ಮೊದಲಾದ ಲೋಹಗಳ ಸಂಯುಕ್ತಗಳಿರುತ್ತವೆ. ಗಟ್ಟಿಯಾದ ಹೊಳಪಾದ ಬಣ್ಣಗಳಲ್ಲಿ ಎಣ್ಣೆ ಕಡಿಮೆ. ಇದಕ್ಕೆ ದಲಾಗಿ ಅಗ್ಗವಾದ ಕರ್ಪೂರಾಳವನ್ನು ಸೇರಿಸುತ್ತಾರೆ. ಇವು ಬೇಗ ಒಣಗುತ್ತವೆ. ಆದರೆ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ.

	ಮೆರುಗೆಣ್ಣೆಗಳು; ಕೋಪಾಲ್ ರಾಳವನ್ನು ಮೆತ್ತಗಾಗುವ ಕಾವಿಗಿಂತಲೂ ಹೆಚ್ಚಾಗಿ ಕಾಸಿ ಮೊದಲೇ ಸುಮಾರು 260( ಅ ವರೆಗೂ ಕಾಸಿದ ಎಣ್ಣೆಯನ್ನು ಎರಡು ಮಜಲುಗಳಲ್ಲಿ ಸೇರಿಸಿ ಮಿಶ್ರಣವನ್ನು 210 ಅ ಉಷ್ಣತೆಯಲ್ಲಿ ಒಂದರಿಂದ ಐದು ಗಂಟೆಗಳ ತನಕ ಇಟ್ಟಿರುತ್ತಾರೆ. ಒಣಗಿಸುವ ಸಾಮಾನುಗಳನ್ನು ಸೇರಿಸಿ ಮಿಶ್ರಣವನ್ನು ಕಲಕಿ ಶೋಧಿಸಿ ಕೆಲವು ತಿಂಗಳ ತನಕ ಮಾಗುವುದಕ್ಕೆ ಬಿಡುತ್ತಾರೆ. ಈ ಕೆಲಸದ ಉಪಕರಣಗಳನ್ನು ಅಲ್ಲಿರತಕ್ಕ ರಾಸಾಯನಿಕಗಳಿಂದಾಗಲಿ ಉತ್ಪಾದನೆಯಾಗುವ ಆಮ್ಲಗಳಿಂದಾಗಲಿ ಕೊರೆದು ಹೋಗದೆಯೂ ಬಣ್ಣ ಬದಲಾಗದೆಯೂ ಇರತಕ್ಕ ತುಕ್ಕು ಹಿಡಿಯುವ ಉಕ್ಕು, ನಿಕ್ಕಲ್, ಮನೆಲ್ ಮುಂತಾದ ಸಾಮಗ್ರಿಯಿಂದ ಮಾಡಬೇಕಾಗುತ್ತದೆ. ಕಲ್ಲಿದ್ದಲಿನ ಕಿಟ್ಟ, ಅನಿಲ, ಇಲ್ಲವೆ ವಿದ್ಯುತ್ತಿನಿಂದ ಬಣ್ಣಗಳನ್ನು ಕಾಸಬಹುದು. ಇಂದಿನ ಯಂತ್ರಗಳಲ್ಲಿ ಎಲ್ಲವೂ ಸ್ವಯಂಚಲಿಯಾಗಿ ನಿಯಮನವಾಗುತ್ತದೆ.

	ಹೊರಗಡೆ ಹಚ್ಚುವ ಮೆರುಗೆಣ್ಣೆಯಲ್ಲಿ ಒಂದು ಲೀಟರ್ ಎಣ್ಣೆಗೆ 0.4 ಕೆಜಿ ರಾಳ ಮತ್ತು 1 ಲೀಟರ್ ವಿರಳಕ ಸೇರಿರುತ್ತವೆ. ಗಟ್ಟಿಯಾದ ಸ್ಥಿತಿಸ್ಧಾಪಕ ಎಣ್ಣೆಗಳಲ್ಲಿ ಒಂದು ಲೀಟರ್ ಎಣ್ಣೆಗೆ 0.6 ಕೆಜಿ ರಾಳ ಮತ್ತು 1.25 ಲೀಟರ್ ವಿರಳಕವನ್ನು ಮೆರುಗುಕೊಡುವ ಎಣ್ಣೆಗಳಲ್ಲಿ 2 ಕೆಜಿ ರಾಳ ಮತ್ತು 1 ಲೀಟರ್ ವಿರಳಕವನ್ನೂ ಸೇರಿಸುತ್ತಾರೆ. ಎಣ್ಣೆಯ ಪ್ರಮಾಣ ಹೆಚ್ಚಿದಷ್ಟೂ ಮೆರುಗೆಣ್ಣೆಯನ್ನು ಹೆಚ್ಚಾಗಿ ಹಿಗ್ಗಿಸಬಹುದು. ಆಗ ಅದು ಬಿರಿಯುವುದಿಲ್ಲ. ರಾಳ ಹೆಚ್ಚಾದಷ್ಟೂ ಒಣಗುವುದು ಸಾವಕಾಶ. ಹೊಳಪು ಹೆಚ್ಚು.

	ದೋಣಿಗಳಿಗೆ ಹಚ್ಚುವ ಮೆರುಗೆಣ್ಣೆಗಳು ನೀರನ್ನೂ ಗಾಳಿಯನ್ನೂ ತಡೆಯುವಂತಿರಬೇಕು. ಅದಕ್ಕಾಗಿ ಹೆಚ್ಚು ಟಂಗ್ ಎಣ್ಣೆಯನ್ನು ಬಳಸುತ್ತಾರೆ. ಸ್ಟಿರಿಟ್ ಮೆರುಗೆಣ್ಣೆಗಳನ್ನು ರಾಳ ಮತ್ತು ದ್ರಾವಕವನ್ನು ಒಟ್ಟಿಗೆ ಕಡೆದು ತಯಾರಿಸುತ್ತಾರೆ. ಮನಿಲ ಕೋಪಾಲ್ ರಾಳದಿಂದ ಗಟ್ಟಿಯಾದ ಬಿಳಿ ಮೆರುಗೆಣ್ಣೆಯನ್ನೂ ಕೋಪಾಲಿಗೆ ಅರಗನ್ನು ಬೆರೆಸಿ ಕಂದು ಬಣ್ಣದ ಗಟ್ಟಿಯಾದ ಮೆರುಗೆಣ್ಣೆಯನ್ನೂ ತಯಾರಿಸುತ್ತಾರೆ. ಮೆರುಗೆಣ್ಣೆಗಳನ್ನು ಜಿಗಟಾಗಿ ಮಾಡುವುದಕ್ಕಾಗಿ ಹರಳೆಣ್ಣೆ ಮತ್ತು ಸಂಶ್ಲೇಷಿತ ಜೈವಿಕ ದ್ರಾವಕಗಳನ್ನು ಬೆರೆಸುತ್ತಾರೆ.

	ಸೆಲ್ಯುಲೋಸಿನ ಮೆರುಗುಗಳು (ಲಾಕ್ವರ್ಸ್): ಇವುಗಳಲ್ಲಿ ನೈಟ್ರೂಸೆಲ್ಯು ಲೋಸ್, ಸೆಲ್ಯುಲೋಸ್ ಆ್ಯಸಿಟೇಟ್ ಮೊದಲಾದ ಸೆಲ್ಯುಲೋಸಿನ ಎಸ್ಟರ್. ಇಲ್ಲವೆ ಈಥರ್ ಮುಖ್ಯವಾದ ಭಾಗ, ಎಸ್ಟರ್ ಎಂದರೆ ಆಮ್ಲ ಮತ್ತು ಮದ್ಯ ಸಾರ ಸೇರಿದ ಪದಾರ್ಥದಲ್ಲಿ ಜಲಾಂಶವನ್ನು ತೆಗೆದು ದಪ್ಪವಾಗಿ ಮಾಡಿದ ಸಂಯುಕ್ತ. ಈಥರ್ ಎಂದರೆ ಆಮ್ಲಕ್ಕೂ ಮದ್ಯಸಾರಕ್ಕೂ ರಾಸಾಯನಿಕ ಕ್ರಿಯೆಯಾದಾಗ ದೊರೆಯುವ ನಿರ್ವರ್ಣವಾದ ಬಾಷ್ಪಶೀಲ ದ್ರವ. ಮೆರುಗಿಗೆ ಹೊಳಪನ್ನು ಕೊಡುವುದಕ್ಕಾಗಿ ಸಂಶ್ಲೇಷಿತ ರಾಳವನ್ನೂ ಗೋಡೆಗೆ ಅಂಟಿಕೊಳ್ಳುವುದಕ್ಕಾಗಿ ಜಿಗಟಾದ ಪದಾರ್ಥಗಳನ್ನು ಸೇರಿಸುತ್ತಾರೆ. ಈ ಮೆರುಗುಗಳು ಬೇಗ ಒಣಗುತ್ತವೆ. ಕೆರೆದರೆ ಕಿತ್ತೂ ಬರುವುದಿಲ್ಲ. ಚೆನ್ನಾಗಿ ಉಜ್ಜಿದರೆ ಹೊಳಪು ಬರುತ್ತದೆ. ಇವನ್ನು ಮೋಟರ್‍ಕಾರ್ ಮುಂತಾದ ಲೋಹದ ಸಾಮಾನುಗಳಿಗೆ ವಿಶೇಷವಾಗಿ ಬಳಸುತ್ತಾರೆ. ಈಚೆಗೆ ಕೆಲವು ಸಂಶ್ಲೇಷಿತ ಮೆರುಗುಗಳನ್ನು ಸೆಲ್ಯುಲೋಸಿನ ಮೆರುಗುಗಳಿಗೆ ಬದಲಾಗಿ ಉಪಯೋಗಿಸುತ್ತಿದ್ದಾರೆ.

	ಲೇಪಗಳು (ಎನಾಮಲ್ಸ್): ಬಣ್ಣಬಣ್ಣದ ಹೊಳಪಾದ ಲೇಪಗಳನ್ನು ಸಂಶ್ಲೇಷಿತ ರಾಳಗಳಿಂದ ಮಾಡುತ್ತಾರೆ. ಇವು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ತೊಳೆಯುವುದು ಸುಲಭ. ಎಂದೇ ಇವನ್ನು ಮೋಟರ್ ಕಾರುಗಳಲ್ಲಿಯೂ ಕೈಗಾರಿಕೆಗಳಲ್ಲಿ ಲೋಹದ ಸಾಮಾನುಗಳಲ್ಲಿಯೂ ಬಳಸುವುದಾಗಿದೆ. ಕೆಲವು ಲೇಪಗಳು ಒಲೆಯ ಮೇಲೆ ಕೊಂಚ ಹೊತ್ತು ಇಟ್ಟ ಮೇಲೆ ಗಟ್ಟಿಯಾಗುತ್ತವೆ. ಇಂಥ ಕರಿಯ ಲೇಪಗಳನ್ನು ಬಿಟ್ಯುಮೆನ್ನಿನಿಂದ ಮಾಡುತ್ತಾರೆ. ಹೆಚ್ಚು ಉಷ್ಣವನ್ನು ತಡೆಯಬೇಕಾದ ವಿಶಿಷ್ಟವಾದ ಬಣ್ಣಗಳನ್ನು ಅಲ್ಯುಮಿನಿಯಮ್ ಬಣ್ಣ ಮತ್ತು ಎಣ್ಣೆಯ ವಾಹಕ ದ್ರ್ರವದಿಂದ ಮಾಡುತ್ತಾರೆ; ಅಥವಾ ಸೋಡಿಯಮ್ ಸಿಲಿಕೇಟಿನಂಥ ಅಜೈವಿಕ ವಾಹಕ ದ್ರವದಿಂದಲೂ ಮಾಡಬಹುದು; ಹೊಳಪಾದ ಬಣ್ಣಗಳನ್ನೂ ಕ್ರಿಮಿಗಳು ಮುಟ್ಟುದಂಥ ಬಣ್ಣಗಳನ್ನೂ ವಿಶೇಷ ಕ್ರಮಗಳಿಂದ ತಯಾರಿಸಬೇಕಾಗುತ್ತದೆ.

	ಡಿಸ್ಟೆಂಪರ್ ಅಥವಾ ನೀರಿನ ಬಣ್ಣ: ಎಣ್ಣೆಗೆ ಬದಲಾಗಿ ಬಣ್ಣವನ್ನು ಗೋಡೆಗೆ ಅಂಟಿಸುವುದಕ್ಕೆ ಡಿಸ್ಟೆಂಪರಿನಲ್ಲಿ, ಅಥವಾ ನೀರಿನಲ್ಲಿ ಮರವಜ್ರದಂಥ ಅಂಟಿನ ದ್ರಾವಣವನ್ನು ಉಪಯೋಗಿಸುತ್ತಾರೆ. ಈ ಲೇಪಗಳಲ್ಲಿ ಹೊಳಪಿರುವುದಿಲ್ಲ. ನೀರು ಆವಿಯಾದ ಮೇಲೆ ಇವು ಒಣಗುತ್ತವೆ. ಇವನ್ನು ನೀರಿನಿಂದ ತೊಳೆಯುವುದಕ್ಕಾಗುವುದಿಲ್ಲ. ತೊಳೆಯಬಹುದಾದ ಡಿಸ್ಟೆಂಪರುಗಳನ್ನು ನೀರಿನಲ್ಲಿ ಎಣ್ಣೆ ಇಲ್ಲವೆ ಬಿಟ್ಯುಮೆನ್ನಿನ ಎಮಲ್ಷನ್ನನ್ನು ಉಪಯೋಗಿಸಿ ತಯಾರಿಸುತ್ತಾರೆ. ಕೇಸೀನ್ ಫಾರ್ಮಾಲ್ಡಿಹೈಡನ್ನು ಉಪಯೋಗಿಸುವುದೂ ಉಂಟು. ಹಾಲಿನಂತೆ ಕಾಣುವ ಈ ಎಮಲ್ಷನ್ನುಗಳು ನೀರು ಆವಿಯಾಗಿ ಹೋಗುವುದರಿಂದಲೂ ಎಣ್ಣೆಯ ಬಣ್ಣದ ಹಾಗೆ ಆಮ್ಲಜನಕವನ್ನು ಹೀರಿಯೂ ಒಣಗುತ್ತವೆ. ಇವು ಸುಮಾರಾಗಿ ಹೊಳಪಾಗಿರುತ್ತವೆ. ನೀರು ಬಿದ್ದರೆ ಕೆಡುವುದಿಲ್ಲ. ಎಣ್ಣೆಯ ಬಣ್ಣಗಳಿಗಿಂತ ಅಗ್ಗವಾಗಿರುತ್ತವೆ.

	ಕಚ್ಚಾ ಮಾಲುಗಳೆಲ್ಲ ಹೊರದೇಶಗಳಿಂದ ಆಮದಾಗಬೇಕಾಗಿರುವುದರಿಂದ ಬಣ್ಣಗಳು ಮತ್ತು ಮೆರುಗೆಣ್ಣೆಗಳ ಕೈಗಾರಿಕೆಗಳನ್ನು ಸಾಮಾನ್ಯವಾಗಿ ರೇವುಪಟ್ಟಣಗಳ ಹತ್ತಿರ ಸ್ಧಾಪಿಸುತ್ತಾರೆ. ಹಡುಗುಗಳ ನಿರ್ಮಾಣದಲ್ಲಿಯೂ ರಿಪೇರಿಯಲ್ಲಿಯೂ ಈ ಬಣ್ಣಗಳು ವಿಶೇಷವಾಗಿ ಬಳಕೆಯಾಗುತ್ತವೆ.		
			(ಎಚ್.ಸಿ.ಕೆ.)
ಬಣ್ಣಗೊಡುವಿಕೆ: ಇತರ ಪದಾರ್ಥಗಳಿಗೆ ಹೆಚ್ಚು ಕಡಿಮೆ ಶಾಶ್ವತವಾದ ಬಣ್ಣ ಕೊಡುವ ವಸ್ತುವಿನ ರಂಗು ಎಂದು ಹೆಸರು. ಬಣ್ಣವುಳ್ಳ ಪದಾರ್ಥಗಳೆಲ್ಲ ರಂಗುಗಳಲ್ಲ. ಬಿಳಿ ಸಕ್ಕರೆಯೊಡನೆ ಕೆಂಪಗಿರುವ ಕಬ್ಬಿಣದ ತುಕ್ಕನ್ನು ಕೂಡಿಸಿ ಅರೆದರೆ ಬರುವ ಮಿಶ್ರಣ ಒಟ್ಟಾರೆ ಕೆಂಚಗೆ ಕಾಣುವುದು. ಕಬ್ಬಿಣದ ತುಕ್ಕು ಒಂದು ವರ್ಣದ್ರವ್ಯವೆಂದೂ ಮತ್ತು ಸಕ್ಕರೆ ವರ್ಣಿಕರಣ ಹೊಂದಿದೆಯೆಂದೂ ಹೇಳುವುದು ವಾಡಿಕೆ. ಮಿಶ್ರಣವನ್ನು ಸೂಕ್ಷ್ಮದರ್ಶದಲ್ಲಿ ಪರೀಕ್ಷಿಸಿದರೆ ಬಿಳಿ ಮತ್ತು ಕೆಂಪು ಕಣಗಳು ಎದ್ದು ಕಾಣುವುವು. ಅದರಲ್ಲಿರುವ ಸಕ್ಕರೆಯ ಕಣಗಳನ್ನು ನೀರಿನಲ್ಲಿ ವಿಲೀನ ಮಾಡಿ ಪ್ರತ್ಯೇಶಿಸಬಹುದು. ಅದೇ ಕಬ್ಬಿಣದ ತುಕ್ಕನ್ನು ನೀರಿನಲ್ಲಿರುವ ಬಿಳಿ ಬಟ್ಟಿಗೆ ಹಾಕಿದರೆ ಕೆಲವು ಕೆಂಪು ಕಣಗಳು ಬಟ್ಟೆಗೆ ಅಂಟಿಕೂಳ್ಳಬಹುದು. ಆದರೆ ಅವನ್ನು ಉಜ್ಜಿ ಅಥವಾ ಸಾಬೂನಿನಿಂದ ತೊಳೆದು ತೆಗೆದು ಹಾಕಬಹುದು. ಕೆಲವು ಬಣ್ಣವುಳ್ಳ ಪದಾರ್ಥಗಳನ್ನು (ಇವು ಸಾಮಾನ್ಯವಾಗಿ ಆಗ್ರ್ಯಾನಿಕ್ ರಾಸಾಯನಿಕಗಳೂ) ನೀರಿನಲ್ಲಿರುವ ಬಟ್ಟಿಗೆ ಹಾಕಿ ನೆನೆಯಲು ಬಿಟ್ಟು, ಏಕಕಾಲದಲ್ಲಿ ಅದನ್ನು ಕಾಸುತ್ತ ಜಾಲಾಡುತ್ತಿದ್ದರೆ ಬಟ್ಟಿಗೆ ಬಣ್ಣ ಬರುತ್ತದೆ. ಈಗ ಅದನ್ನು ಸೂಕ್ಷ್ಮದರ್ಶಕದಿಂದ ಪರೀಕ್ಷಿಸಿದರೆ ಬಣ್ಣದ ಕಣಗಳು ಪ್ರತ್ಯೇಕವಾಗಿ ಗೋಚರಿಸುವುದಿಲ್ಲ ಸಾಬೂನಿನಿಂದ ತೊಳೆದರೂ  ಬಣ್ಣ ಹೋಗದು. ಈಗ ಬಟ್ಟೆಗೆ ಬಣ್ಣ ಕೊಡಲಾಗಿದೆ. ಎಂದೇ ಆ ಬಣ್ಣವುಳ್ಳ ವಸ್ತು ಒಂದು ರಂಗು.

	ಸಾಮಾನ್ಯವಾಗಿ ನೀರಿನಲ್ಲಿ ಅದ್ರಾವ್ಯವಾದ ಬಣ್ಣವುಳ್ಳ ಪದಾರ್ಥಗಳಿಗೆ ವರ್ಣದ್ರವ್ಯಗಳೂ (ಪಿಗ್ಮೆಂಟ್ಸ್) ಎಂದು ಹೆಸರು. ಆದರೆ ರಂಗುಗಳು ನೀರಿನಲ್ಲಿ ದ್ರಾವ್ಯ. ಕೆಲವು ರಂಗುಗಳು ಬಣ್ಣಗೊಡುವಾದ ದ್ರಾವ್ಯವಾಗಿದ್ದು ಅನಂತರ ಅದ್ರಾವ್ಯವಾಗುವುದಂಟು. ದ್ರಾವ್ಯವಾದ ರಂಗುಗಳು ಹೇಗೆ ನೂಲುಗಳ ಅಂತರ್ಗತವಾಗಿ ಅಲ್ಲಿ ಸ್ಥಿರಗೊಳ್ಳುವುವು ಎಂಬುದನ್ನು ವಿವರಿಸಲು ಕಾಲಕಾಲಕ್ಕೆ ವಿಜ್ಞಾನಿಗಳು ಆಯಾಕಾಲದಲ್ಲಿ ಪ್ರಚಲಿತವಾಗಿದ್ದ ಭೌತ ಹಾಗೂ ರಾಸಾಯನಿಕ ಸಿದ್ಧಾಂತಗಳ ನೆರವಿನಿಂದ ನಾನಾ ಕಾರಣಗಳನ್ನು ನೀಡುತ್ತ ಬಂದಿದ್ದಾರೆ. ಅದೊಂದು ಅಧಿಶೋಷಣ ವಿದ್ಯಮಾನ, ಲವಣ ರೂಪಣೆ ಈಥರ್‍ಬಂದ, ಹೈಡ್ರೋಜನ್ ಬಂಧದಿಂದ ಉಂಟಾದ ಅರ್ಧರಾಸಾಯನಿಕ ಸಂಯೋಗ ಅಥವಾ ನಿಜದ್ರಾವಣ ಪರಿಣಾಮ ಎಂದು ಭಾವಿಸಲಾಗಿದೆ. ಏನಾದರೂ ಅಂತಿಮವಾಗಿ ನೂಲಿಗೆ ರಂಗು ಬಣ್ಣ ಕೊಟ್ಟಿದೆ ಮತ್ತು ಅದನ್ನು ತೊಳೆದಾಗಲಿ ಇನ್ನಾವುದೇ ಯಾಂತ್ರಿಕ ವಿಧಿಪ್ರಯೋಗಿಸಿಯಾಗಲಿ ತೆಗೆದು ಹಾಕುವುದು ಕಷ್ಟ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆಗ ರಂಗಿಗೂ ಅದು ಬಣ್ಣ ನೀಡಿರುವ ನೂಲಿಗೂ ಒಲವುಂಟು. ಆದ್ದರಿಂದ ರಂಗು ಅದರಲ್ಲಿ ನೆಲೆನಿಂತಿದೆ ಎನ್ನುವುದು ವಾಡಿಕೆ. ಬಣ್ಣ ಪಡೆಯುವ ಪದಾರ್ಥಕ್ಕೆ ವರ್ಣಗ್ರಾಹಿ (ಸಬ್‍ಸ್ಟ್ರ್ಯಾಟೆ) ಎಂದು ಹೆಸರು. ಒಗೆದಾಗ ಅಥವಾ ಬೆಳಕಿಗೆ ಒಡ್ಡಿದಾಗ ಬಣ್ಣ ಸ್ಥಿರವಾಗಿದ್ದರೆ ಅದು ಗಟ್ಟಿ, ಬಣ್ಣ ಹೋದರೆ ಅಥವಾ ಮಾಸಿದರೆ ಅದೊಂದು ಚಂಚಲ ರಂಗು (ಫ್ಯುಗಿಟಿವ್ ಡೈ).

	ನೀರಿನಲ್ಲಿ ದ್ರಾವ್ಯವಾದ ಬಣ್ಣವುಳ್ಳ ಪದಾರ್ಥಗಳೆಲ್ಲ ರಂಗುಗಳಲ್ಲವಾದ್ದರಿಂದ ಪದಾರ್ಥದ ಬಣ್ಣಕ್ಕೂ ಅದರ ರಾಸಾಯನಿಕ ಅಂತಾರಚನೆಗೂ ಸಂಬಂಧ ಕಲ್ಪಿಸುವ ಪ್ರಯತ್ನಗಳು ನಡೆದಿವೆ. 1876ರಲ್ಲಿ ಒ.ಎನ್. ವಿಜ್ ಮಂಡಿಸಿದ. ಇಂದಿಗೂ ಉಪಯುಕ್ತ ಎನಿಸಿಕೊಂಡಿರುವ, ಒಂದು ಸಿದ್ಧಾಂತದ ಪ್ರಕಾರ ಬಣ್ಣವುಳ್ಳ ಎಲ್ಲ ಆಗ್ರ್ಯಾನಿಕ್ ಪದಾರ್ಥಗಳಲ್ಲಿ (ಇವನ್ನು ವರ್ಣಜನ್ಯಗಳು ಎಂದು ಕರೆಯುತ್ತಾರೆ) ಕೆಲವು ವರ್ಣಕಾರಕ ಅಪರ್ಯಾಪ್ತ ಪುಂಜಗಳಿರುತ್ತವೆ. ಇವುಗಳ ಜೊತೆಗೆ ವರ್ಣಬಂಧಕ ಪುಂಜಗಳೂ ಇದ್ದ ಪಕ್ಷದಲ್ಲಿ ಅವು ರಂಗುಗಳಾಗಿ ವರ್ತಿಸಬಲ್ಲವು. ನೈಟ್ರೊ (-ಓ02) ಆಜೊ (-ಓ=ಓ-). ನೈಟ್ರೊಸೊ (-ಓ=0), ಕಾರ್ಬೊನಿಲ್ (=ಅಔ) ದ್ವಿಬಂಧಿತ ಕಾರ್ಬನುಗಳು (ಅ=ಅ-) ಇತ್ಯಾದಿ ಪುಂಜಗಳು ವರ್ಣಕಾರಕಗಳು ಕ್ರೋಮೊಫೋರ್ಸ್), ಅಮೈನೊ (-ಓಊ2),  ಹೈಡ್ರಾಕ್ಸಿಲ್ (-ಔಊ) ಮೊದಲಾದ ಪುಂಜಗಳು ವರ್ಣಬಂಧಕಗಳು (ಆಕ್ಸೊಕ್ರೋಮ್ಸ್). ಪ್ರಾಪ್ತವಾಗುವ ಬಣ್ಣದ ಛಾಯೆ ವರ್ಣಬಂಧಕದ ಸ್ವಭಾವ, ಸಂಖ್ಯೆ ಮತ್ತು ವರ್ಣಜನ್ಯ (ಕ್ರೋಮೊಜನ್) ಅಣುವಿನಲ್ಲಿ ಅದರ ಸ್ಧಾನ ಮುಂತಾದ ಅಂಶಗಳನ್ನು ಅವಲಂಬಿಸಿರುತ್ತದೆ.

	1888ರಲ್ಲಿ ಎಚ್.ಇ. ಆರ್ಮ್‍ಸ್ಟ್ರಾಂಗ್ ಈ ಸಿದ್ಧಾಂತವನ್ನೇ ವಿಸ್ತರಿಸಿ ವರ್ಣಕಾರಕಗಳಲ್ಲೆಲ್ಲ ಕ್ವಿನಾಯ್ಡ್ ರಚನೆ (=ಖ=) ಇರುವುದೆಂದು ಸಲಹೆಮಾಡಿದ. ಮುಂದೆ ನಡೆದ ಸಂಶೋಧನೆಗಳು ಆಗ್ರ್ಯಾನಿಕ್ ಸಂಯುಕ್ತಗಳಲ್ಲಿ ಉಂಟಾಗುವ ವರ್ಣ ವೈವಿಧ್ಯಕ್ಕೆ ನಾನಾ ವಿವರಣೆಗಳನ್ನು ನೀಡಿವೆಯಾದರೂ ವಿಟ್ ಪ್ರತಿಪಾದಿಸಿದ ಮೂಲ ಸಿದ್ಧಾಂತದ ಚೌಕಟ್ಟಿನಲ್ಲೇ ಇಂದೂ ನಾವು ವ್ಯವಹರಿಸುತ್ತಿದ್ದೇವೆ.

ಚಿತ್ರ-1

ಬಹುತೇಕ ರಂಗುಗಳಿಗೆ ಅನ್ವಯಿಸಿದಂತೆ ಈ ಸಿದ್ಧಾಂತ ಅನುಕೂಲ, ತೃಪ್ತಿಕರ ಮತ್ತು ವ್ಯಾವಹಾರಿಕ. ಮುಂದೆ ಕೊಟ್ಟಿರುವ ಉದಾಹರಣೆಗಳಿಂದ ಇದು ವೇದ್ಯವಾದೀತು. ಆಜೋಬೆನ್‍ಜಿûೀನಿನಲ್ಲಿ ವರ್ಣಕಾರಕ ಅಜೋ ಪುಂಜವಿರುವುದರಿಂದ ಅದಕ್ಕೆ ಬಣ್ಣವುಂಟು. ಅದರಲ್ಲಿ ಯಾವ ವರ್ಣಬಂಧಕ ಪುಂಜವೂ ಇಲ್ಲ. ಆದ್ದರಿಂದ ಅದು ರಂಗಲ್ಲ. ಅದೇ ಹೈಡ್ರeóÉೂ ಬೆನ್‍ಜಿûೀವಿನಲ್ಲಿ ವರ್ಣಕಾರಕ ಪುಂಜವೂ ಇಲ್ಲ ಅeóÉೂ ಬೆನ್‍ಜಿûೀನಿನಲ್ಲಿದ್ದ ಅeóÉೂ ಪುಂಜ ಆಕರ್ಷಿತವಾಗಿದೆ. ಆದ್ದರಿಂದ ಇದಕ್ಕೆ ಬಣ್ಣವೇ ಇಲ್ಲ. ಈ ಮುಂದಿನ ರಚನೆಗಳನ್ನು ಗಮನಿಸಿದರೆ ಇವೆರಡರಲ್ಲೂ ವರ್ಣಕಾರಕ ಮತ್ತು ವರ್ಣಬಂಧಕ ಪುಂಜಗಳಿರುವುದು ಕಾಣುತ್ತವೆ. ಆದ್ದರಿಂದ ಇವು ರಂಗುಗಳು.

	ರಂಗುಗಳನ್ನು ಅವುಗಳು ಬಣ್ಣ (ನೀಲಿ, ಕೆಂಪು ಇತ್ಯಾದಿ) ಮೂಲ (ನೈಸರ್ಗಿಕ ಪ್ರಾಣಿ ಮತ್ತು ಸಸ್ಯಜನ್ಯ, ಅಥವಾ ಸಂಶ್ಲೇಷಿತ) ರಾಸಾಯನಿಕ ರಚನೆ, ವರ್ಣಗ್ರಾಹಿಗಳ ಬಗೆ ಮತ್ತು ಬಣ್ಣ ಹಾಕುವ ವಿಧಾನಗಳಿಗೆ ಅನುಗುಣವಾಗಿ ನಾನಾ ರೀತಿಗಳಲ್ಲಿ ವರ್ಗೀಕರಿಸಬಹುದು. ಇವುಗಳಲ್ಲಿ ಒಂದೊಂದನ್ನೂ ಸ್ಥೂಲವಾಗಿ ಪರಿಶೀಲಿಸೋಣ.

	ವರ್ಣಛಾಯೆ: ವಸ್ತುವಿಗೆ ಅವು ನೀಡುವ ಬಣ್ಣದ ಆಧಾರದ ಮೇಲೆ ವಾಣಿಜ್ಯ ರಂಗುಗಳನ್ನು ಹೆಸರಿಸಲಾಗುವುದು. ಉಂಟಾದ ಬಣ್ಣ ಘನರಂಗಿನ ಬಣ್ಣವಾಗಿರಬೇಕೆಂಬ ನಿಯಮವಿಲ್ಲ. ಆದರೆ ಯಾವ ರಂಗಿನ ದ್ರಾವಣದಿಂದ ಬಣ್ಣ ಹಾಕುತ್ತೇವೆಯೋ ಆ ದ್ರಾವಣದ ಬಣ್ಣವೇ ವಸ್ತುವಿಗೂ ಪ್ರಾಪ್ತವಾಗುವುದಂತೂ ಖರೆ.

ಮೂಲ: ಮೊತ್ತಮೊದಲು ಬಳಕೆಗೆ ಬಂದ ರಂಗುಗಳೆಲ್ಲ ಸಸ್ಯ ಮತ್ತು ಪ್ರಾಣಿ ಮೂಲಗಳಿಂದ ಪಡೆದ ನೈಸರ್ಗಿಕ ಪದಾರ್ಥಗಳು. ಉದಾಹರಣೆಗೆ ಮದರಂಗಿ, (ಹೆನ್ನ), ಕೇಸರಿ (ಸ್ಯಾಫ್ರನ್), ಕಿರುಮಂಜಿ (ಕೊಜಿನೀಲ್) ಮತ್ತು ಲಾಗ್‍ವುಡ್ ವಿವಿಧ ಸಸ್ಯಗಳ ಜಲಸಂಸ್ಕರಣದಿಂದ ಹಳದಿ ಮತ್ತು ಕಂದುಬಣ್ಣದ ದ್ರಾವಣಗಳು ಉಂಟಾದುವು. ನಿದರ್ಶನವಾಗಿ ಮ್ಯೂರೆಕ್ಸ್ ಬ್ರ್ಯಾಂಡಾರಿಸ್ ಎಂಬ ಹುಳುವಿನಿಂದ ಉಂಟಾದ ಟಿರಿಯನ್ ಪರ್ಸಲ್ ಎಂಬು ರಂಗು. ಇದು ಜನಸಾಮಾನ್ಯಕ್ಕೆ ಎಟುಕದಷ್ಟು ದುಬಾರಿಯಾಗಿದ್ದುದರಿಂದ ರಾಜಮಾಹಾರಾಜರುಗಳು ಮಾತ್ರ ಇದನ್ನು ಉಪಯೋಗಿಸುತ್ತಿದ್ದರು. ಅನಂತರ ಇಂಡಿಗೊಫೆರ ಜಾತಿಯ ಸಸ್ಯಗಳಿಂದ ಇಂಡಿಗೊ ಎಂಬ ನೀಲಿ ರಂಗು ದಕ್ಕಿತು. ಬಹುತೇಕ ನೈಸರ್ಗಿಕ ರಂಗುಗಳು ವರ್ಣಸ್ಧಾಪಕದ ನೆರವಿಲ್ಲದ ನೇರವಾಗಿ ನೂಲಿಗೆ ಅಂಟಿಕೊಳ್ಳಲಾರವು.

	ಸಂಶ್ಲೇಷಿತ ರಂಗುಗಳ ಆಗಮನದಿಂದ ನೈಸರ್ಗಿಕ ರಂಗುಗಳ ಉತ್ಪಾದನೆ ಬಿದ್ದು ಹೋಗಿದೆ. ಏಕೆಂದರೆ ನಮಗೆ ಬೇಕಾದ ಬಣ್ಣದ ಛಾಯೆ ಮತ್ತು ಗುಣಗಳುಳ್ಳ ಸಂಶ್ಲೇಷಿತ ರಂಗುಗಳ ಈಗ ದೊರೆಯುತ್ತವೆ. ಅವು ಹೆಚ್ಚು ಕಾಂತಿಯುತವಾಗಿಯೂ ಇರುತ್ತವೆ. ಈ ಕಾರಣಗಳಿಂದ ನೈಸರ್ಗಿಕ ರಂಗುಗಳ ಉಪಯೋಗ ತೊಗಲಿಗೆ ಬಣ್ಣಹಾಕುವುದಕ್ಕೆ ಮಾತ್ರ ಸೀಮಿತವಾಗಿದೆ. ರಸಾಯನವಿಜ್ಞಾನದ ಪ್ರಗತಿಯಾದಂತೆ ರಂಗುಗಳ ಸಂಶ್ಲೇಷಣೆಗೆ ಉತ್ತೇಜನ ಸಿಕ್ಕಿದ್ದರಿಂದ 1857ರಲ್ಲಿ ವಿಲಿಯಮ್ ಹೆನ್ಸಿ ಪರ್ಕಿನ್ ಪ್ರಪ್ರಥಮವಾಗಿ ವಾಣಿಜ್ಯ ಪ್ರಮಾಣದಲ್ಲಿ ಮಾವ್‍ರಂಗನ್ನು ತಯಾರಿಸಿದ. ವಾಸ್ತವವಾಗಿ ಅಂದಿನ ಆಗ್ರ್ಯಾನಿಕ್ ರಸಾಯನ ವಿಜ್ಞಾನಿಗಳ ಗಮನವೆಲ್ಲ ರಂಗುಗಳ ಸಂಶ್ಲೇಷಣೆಯಲ್ಲಿ ಕೇಂದ್ರೀಕೃತವಾಗಿತ್ತು. ಈ ಸಂಶ್ಲೇಷಣೆಗಳಲ್ಲಿ ವಿಶೇಷವಾಗಿ ಬಳಸುತ್ತಿದ್ದ ರಾಸಾಯನಿಕವೆಂದರೆ ಅನಿಲೀನ್. ಇದು ಕಲಿದ್ದಲ ಡಾಂಬರಿನ ರಂಗುಗಳು ಅಥವಾ ಅನಿಲೀನ್ ರಂಗುಗಳು ಎನ್ನುವುದು ವಾಡಿಕೆಯಾಯಿತು. ಜರ್ಮನಿಯಲ್ಲಿ ಇವುಗಳ ಉತ್ಪಾದನೆ ಎಷ್ಟು ಬಿರುಸಾಗಿ ನಡೆಯುತ್ತಿತ್ತು ಅಂದರೆ ಅದೊಂದು ವಿಶಿಷ್ಟ ಜರ್ಮನ್ ಕೈಗಾರಿಕೆ ಎನಿಸಿಕೊಂಡಿತ್ತು. ಒಂದನೆಯ ಮಹಾಯುದ್ಧದ ಕಾಲದಲ್ಲಿ (1911-18) ಜರ್ಮನಿ ಇವುಗಳ ನಿರ್ಯಾತ ನಿಲ್ಲಿಸಿದಾಗ ಇತರ ದೇಶಗಳು ಇವುಗಳ ಉತ್ಪಾದನೆಯ ಕಡೆಗೆ ಗಮನಹರಿಸಿದುವು. ಆಗಿನಿಂದ ಅಮೆರಿಕ ಸಂಯುಕ್ತ ಸಂಸ್ಧಾನದಲ್ಲಿ ಉತ್ಪಾದನೆ ಬೆಳೆಯುತ್ತ ಹೋಗಿ 1957ರ ವೇಳೆಗೆ 54 ಉದ್ಯಮಿಗಳು 64,925,000 ಕೆಜಿಗಳಷ್ಟು ರಂಗು ತಯಾರಿಸುತ್ತಿದ್ದರೆಂದು ಅಂದಾಜು ಮಾಡಲಾಗಿತ್ತು.

	ರಂಗುಗಳ ಉತ್ಪಾದನೆಯಲ್ಲಿ ಬಳಸುವ ಕಚ್ಚಾಮಾಲುಗಳು ಸರಳ ಸಂಯುಕ್ತಗಳು. ಬೆನ್ ಜಿûೀನ್, ಟಾಲೀನ್, ನ್ಯಾಫ್ತಲೀನುಗಳಂಥ ಆರೊಮ್ಯಾಟಿಕ್ ಹೈಡ್ರೊಕಾರ್ಬನುಗಳಿಗೆ ನೈಟ್ರೊ, ಅಮೈನೊ, ಹ್ಯಾಲೊಜನ್, ಸಲ್ಫ್ಯಾನಿಕ್ ಆಮ್ಲಗಳಂಥ ರಾಸಾಯನಿಕ ಪುಂಜಗಳನ್ನು ಲಗತ್ತಿಸಿ ರಂಗುಗಳನ್ನು ತಯಾರಿಸುತ್ತಾರೆ. ಈ ಮಧ್ಯವರ್ತಿ ಸಂಯುಕ್ತಗಳನ್ನು ನೈಟ್ರೂಜನ್ ದ್ವಿಗುಣೀಕರಣ (ಡೈ ಆಜೊಟೈಸೇಷನ್) ಯುಗ್ಮನ (ಕಪ್ಲಿಂಗ್), ಸಾಂದ್ರೀಕರಣ (ಕಂಡನ್ಸೇಷನ್), ಸಂಲಯನ (ಫ್ಯೂಷನ್). ಮೊದಲಾದ ಆಗ್ರ್ಯಾನಿಕ್ ರಸಾಯನವಿಜ್ಞಾನದ ವಿಶೇಷ ಪರಿಕರ್ಮಗಳಿಗೆ ಗುರಿಪಡಿಸಿ ಅಂತಿಮ ರಂಗುಗಳನ್ನು ರೂಪಿಸಲಾಗುತ್ತದೆ. ತರುವಾಯ, ಇವಕ್ಕೆ ವಿಶೇಷ ಭೌತಗುಣಗಳು ಪ್ರಾಪ್ತವಾಗುವಂತೆ ಸಂಸ್ಕರಿಸಿ ಪ್ರಬಲತೆಯನ್ನು ಪ್ರಮಾಣೀಕರಿಸಿ, ಶುಷ್ಕಪುಡಿ, ಸರಿ ಅಥವಾ ದ್ರಾವಣ ರೂಪದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.

	ಇದು ತನಕ ಸಂಶ್ಲೇಷಿಸಲಾಗಿರುವ ಸಾವಿರಾರು ರಂಗುಗಳ ಪೈಕಿ ಸುಮಾರು 3,500 ರಂಗುಗಳು ವ್ಯಾಪಕ ಬಳಕೆಯಲ್ಲಿವೆ. ಇವನ್ನು ವರ್ಣಸೂಚಿ (ಕಲರ್‍ಇಂಡೆಕ್ಸ್) ಕ್ರಮದಲ್ಲಿ ಕ್ರೋಡೀಕರಿಸಿದ್ದಾರೆ. ಅದರ ಪ್ರಕಾರ ಪ್ರತಿಯೊಂದು ರಂಗಿಗೂ ಪ್ರತ್ಯೇಕ 5 ಅಂಕೆಗಳುಳ್ಳ ಒಂದು ಸಂಖ್ಯೆ ನೀಡಲಾಗುವುದು. ಇದರ ಉತ್ಪಾದನ ವಿವರ ಗೌಣ. ಈ ಸಂಖ್ಯೆ ರಂಗು ತಜ್ಞರಿಗೆ ನಿರ್ದೇಶನ ಗ್ರಂಥವಿದ್ದಂತೆ. ಆದರೆ ವಾಣಿಜ್ಯ ವ್ಯವಹಾರಗಳಿಗೆ ಅನುಕೂಲಿಸುವಂತೆ ಪ್ರತಿಯೊಬ್ಬ ಉತ್ಪಾದಕನೂ ತನ್ನದೇ ಆದ ವಿಧಾನ ಅನುಸರಿಸುತ್ತಾನೆ. ಸಾಮಾನ್ಯವಾಗಿ ಈ ವ್ಯವಹಾರ ನಾಮಗಳಲ್ಲಿ ಮೂರು ನಾಲ್ಕು ಭಾಗ ಉಂಟು. ಮೊದಲು ಆಯಾ ವರ್ಗದ ವ್ಯಾಪಾರ ಮುದ್ರೆ, ಅನಂತರ ಅದರ ಬಣ್ಣ, ತರುವಾಯ ವರ್ಣಛಾಯೆ ಮತ್ತಿತರ ಲಕ್ಷಣ ಸೂಚಿಸುವ ಪದಗಳು, ಅಕ್ಷರಗಳು ಅಥವಾ ಸಂಖ್ಯೆಗಳು ಮತ್ತು ಅಂತಿಮವಾಗಿ ಅದರ ಪ್ರಬಲತೆ ಅಥವಾ ಭೌತಸ್ಥಿತಿಗಳು. ಉದಾಹರಣೆಗೆ ಈರಿ ಬ್ಲ್ಯಾಕ್ ಖಘಿ ಕಾನ್ಸೆಂಟ್ರೇಟ್ ಪೇಸ್ಟ್ ಎಂಬುದು ಅI 30235 ರಂಗಿನ ವಾಣಿಜ್ಯನಾಮ. ಇದರಿಂದ ಅದು ಒಂದು ಕೆಂಪುಛಾಯೆಯ ಕಪ್ಪುರಂಗು, ವಿಶೇಷ ಗುಣ ಮಟ್ಟದ್ದು, ಸಾರಯುತವಾದದ್ದು ಮತ್ತು ಸರಿಯ ರೂಪದಲ್ಲಿದೆ ಎಂದು ಇಂಗಿತ. ಆದರೆ ರಂಗುಗಳ ರಾಸಾಯನಿಕ ರಚನೆಗಳನ್ನು ಅವಲಂಬಿಸಿ ಮಾಡಿರುವ ವರ್ಗೀಕರಣವೇ ಅತ್ಯಂತ ನಿಷ್ಕøಷ್ಟ ಮತ್ತು ವೈಜ್ಞಾನಿಕ. ಸಂಶೋಧಕನಿಗೂ ಉತ್ಪಾದಕನಿಗೂ ಇದು ಉಪಯುಕ್ತ.

	ವರ್ಣಗ್ರಾಹಿಯನ್ನು ಆಧರಿಸಿಯೂ ರಂಗುಗಳನ್ನು ವರ್ಗೀಕರಿಸಬಹುದೆಂದು ತಿಳಿಸಿದೆಯಷ್ಟೆ. ಅದರ ವಿವರ ಮುಂದೆ ಬರೆದಿದೆ.

	ಬಟ್ಟೆ: ಹತ್ತಿ, ಉಣ್ಣೆ, ರೇಷ್ಮೆ ಮುಂತಾದ ನೈಸರ್ಗಿಕ ನೂಲುಗಳಿಂದ ತಯಾರಿಸಿದ ಬಟ್ಟೆಗಳಿಗೆ ಬಣ್ಣಹಾಕುವುದು ರಂಗುಗಳ ಪ್ರಮುಖ ಉಪಯೋಗ. ಈಗ ಅನೇಕ ಸಂಶ್ಲೇಷಿತ ನೂಲುಗಳಿಂದಾದ ಬಟ್ಟಿಗಳು ಬಂದಿವೆ. ಇವುಗಳ ಈಗ ಅನೇಕ ಸಂಶ್ಲೇಷಿತ ನೂಲುಗಳಿಂದಾದ ಬಟ್ಟೆಗಳು ಬಂದಿವೆ. ಇವುಗಳ ಪೈಕಿ ಪುನರುತ್ಪತ್ತಿಮಾಡಿದ ಸೆಲ್ಯುಲೋಸ್ (ವಿಸ್ಕೋಸ್), ಸೆಲ್ಯುಲೋಸ್ ಅಸಿಟೇಟ್, ನೈಲಾನ್, ಪಾಲಿ ಅಕ್ರಿಲೇಟ್ ಮತ್ತು ಪಾಲಿಸ್ಟರುಗಳು ಮುಖ್ಯವಾದವು. ಹತ್ತಿಗೆ ಹಚ್ಚುವ ರಂಗುಗಳನ್ನೇ ಪುನರುತ್ಪತ್ತಿ ಮಾಡಿದ ಸೆಲ್ಯುಲೋಸಿಗೆ ಕೂಡ ಪ್ರಯೋಗಿಸಬಹುದು. ಇತರ ಸಂಶ್ಲೇಷಿತ ನೂಲುಗಳಿಗಾದರೆ ವಿಶೇಷ ರಂಗುಗಳೇ ಅಗತ್ಯ.

	ಕಾಗದ: ಇದಕ್ಕೆ ಬಣ್ಣಕೊಡಲು ರಂಗುಗಳು ಸೂಕ್ಷ್ಮಕಣ ಸ್ಥಿತಿಯಲ್ಲಿರಬೇಕು ಬಣ್ಣಸೇರಿಸದ ಕಾಗದ ಅಪರೂಪ. ಬಣ್ಣವನ್ನು ತಾಡನ ಹಂತದಲ್ಲೇ ಕೂಡಿಸುವುದು ಸಾಮಾನ್ಯ. ಅನಂತರ ಕಾಗದದ ಹೊರಮೈಗೆ ಯಾವ ಬಣ್ಣವನ್ನಾದರೂ ಹಚ್ಚಿ ನಿರ್ದಿಷ್ಟ ಬಣ್ಣದ ಕಾಗದವನ್ನು ಪಡೆಯಬಹುದು. ಆಮ್ಲೀಯ, ಪ್ರತ್ಯಾಮ್ಲೀಯ. ನೇರ ಅಥವಾ ಗಂಧಕಾನ್ವಿತ ರಂಗುಗಳಲ್ಲಿ ಯಾವುದನ್ನಾದರೂ ಉಪಯೋಗಿಸಬಹುದು. ಸೆಲ್ಯುಲೋಸಿನ ಎಳೆಗಳಿಗೆ ಆಮ್ಲೀಯ ರಂಗುಗಳ ಬಗ್ಗೆ ಒಲವು ಕಡಿಮೆ. ಆದ್ದರಿಂದ ವರ್ಣಸ್ಧಾಪಕಗಳ ಅಗತ್ಯ ಬೀಳುತ್ತದೆ. ತಾಡನ ಹಂತದಲ್ಲೇ ಕಾಗದಕ್ಕೆ ಬಣ್ಣ ಕೊಟ್ಟಿದ್ದರೆ ಸೈಜನ್ನು ಒತ್ತರಿಸಲು ಹಾಕಿದ್ದ ಪಟಿಕವೇ ಸ್ಧಾಪಕವಾಗಿಯೂ ವರ್ತಿಸುವುದು. ಇದೊಂದು ಅನುಕೂಲ. ಕಾಗದದ ಹೊರಮೈಗೆ ಕೊಡುವ ಲೇಪಗಳಲ್ಲಿ ರಂಗುಗಳನ್ನು ಸೇರಿಸುವುದುಂಟು. ಇದಕ್ಕೆ ಡ್ಯೂಪ್ಲಿಕೇಟಿಂಗ್ (ಕಾರ್ಬನ್) ಕಾಗದದ ಮೇಲಿರುವ ಮೇಣರಂಗಿನ ಲೇಪ ನಿದರ್ಶನ.

	ತೊಗಲು: ತೊಗಲಿಗೆ ಬಣ್ಣಹಾಕುವ ವಿಧಾನ ಪ್ರಾಚೀನವಾದುದು. ಇದರ ಸಲುವಾಗಿ ನೈಸರ್ಗಿಕ ರಂಗುಗಳು ಪ್ರಶಸ್ತವೆನೆಸಿದರೂ ಈಗ ಅನೇಕ ಸಂಶ್ಲೇಷಿತ ರಂಗುಗಳನ್ನೂ ಬಳಸುತ್ತಿದ್ದಾರೆ. ರಂಗು ತೊಗಲಿನ ನಿಕಟ ಹೆಣೆಗೆ ರಚನೆಯನ್ನು ಭೇದಿಸಿಕೊಂಡು ಹೋಗಲು ಅಸಮರ್ಥವಾದ್ದರಿಂದ ರಂಗನ್ನು ಅದರ ಮೇಲ್ಮೈಗೆ ಸಿಂಪಡಿಸಿ ಅಥವಾ ಬ್ರಷಿನಿಂದ ಲೇಪಿಸುವುದು ರೂಢಿ.

	ಮರ: ಬೇಕಾದ ರಂಗನ್ನು ನೀರು, ಆಲ್ಕೊಹಾಲ್ ಅಥವಾ ಇನ್ನಾವುದಾದರೂ ಯುಕ್ತ ದ್ರಾವಕದಲ್ಲಿ ವಿಲೀನಮಾಡಲಾಗುವುದು. ಮರವನ್ನು ಈ ದ್ರಾವಣದಲ್ಲಿ ಅದ್ದಿ ತೆಗೆಯಬಹುದು ಇಲ್ಲವೇ ಅದರಿಂದ ಮರಕ್ಕೆ ಬಣ್ಣ ಹಚ್ಚಬಹುದು. ಅನಂತರ ಮರದ ಮೇಲ್ಮೈಯಿಂದ ದ್ರಾವಕ ಅವಿಯಾಗಿ ಹೋಗಿ ಬಣ್ಣ ಉಳಿಯುತ್ತದೆ.

	ವರ್ಣದ್ರವ್ಯಗಳು: ಕೆಲವು ವೇಳೆ ಅನೇಕ ದ್ರಾವ್ಯ ರಂಗುಗಳನ್ನು ಅದ್ರಾವ್ಯ ವರ್ಣದ್ರವ್ಯಗಳಿಗೆ ಪರಿವರ್ತಿಸಬೇಕಾಗುತ್ತದೆ. ಇದಕ್ಕಾಗಿ ರಂಗು ಲವಣದಲ್ಲಿರುವ ಸೋಡಿಯಮ್ಮನ್ನು ಕ್ಯಾಲ್ಸಿಯಮ್ಮಿನಿಂದ ಆದೇಶಿಸಿದರೆ ಸಾಕು. ಇವು ಮೆರುಗೆಣ್ಣೆಗಳು, ರಂಗುಗಳು ಮತ್ತು ಮುದ್ರಣ ಶಾಯಿಗಳ ತಯಾರಿಕೆಗೆ ಉಪಯುಕ್ತ. ಈ ಅದ್ರಾವ್ಯ ಲವಣಕ್ಕೆ ಟೋನರ್ ಎಂದೂ ಹೆಸರುಂಟು. ಇದನ್ನು ಅಲ್ಯೂಮೀನಿಯಮ್ ಹೈಡ್ರಾಕ್ಸೈಡುಗಳಂಥ ಇನಾಗ್ರ್ಯಾನಿಕ್ ಪೂರಕಗಳ (ಫಿಲರ್ಸ್) ಮೇಲೆ ನಿಕ್ಷೇಪಿಸಿ ಕೊಳ್ಳವನ್ನು (ಲೇಕ್) ಉಂಟುಮಾಡಬಹುದು.

	ಆಹಾರಗಳು: ಅನೇಕ ಆಹಾರಪದಾರ್ಥಗಳಿಗೆ ಕೃತಕ ಬಣ್ಣಕೊಟ್ಟು ಅವು ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಬೆಣ್ಣೆ ಮತ್ತು ಮಾರ್ಗರೀನುಗಳಿಗೆ ಹಳದಿ ಬಣ್ಣಕೊಡುವುದು ಪದ್ಧತಿ. ಹಣ್ಣು ವ್ಯಂಜಾನ ಇತ್ಯಾದಿಗಳು ಕೆಡದಿರಲು ಅವನ್ನು ವಿಶಿಷ್ಟ ರಾಸಾಯನಿಕಗಳಲ್ಲಿಟ್ಟು ಸಂರಕ್ಷಿಸುವುದುಂಟು. ಇದರಿಂದ ಅವುಗಳ ಬಣ್ಣ ಮಾಸಿಹೋಗುವುದು ಅನಿವಾರ್ಯ. ಅವನ್ನು ಮತ್ತೆ ಆಕರ್ಷಕವಾಗಿ ಮಾಡಲು ಬಣ್ಣಕಟ್ಟುತ್ತಾರೆ. ಹೀಗೆಯೇ ಮಿಠಾಯಿ ಮತ್ತು ಸೌಮ್ಯಪಾನೀಯಗಳಿಗೆ ಕೂಡಬಣ್ಣಹಾಕುವುದು ವಾಡಿಕೆ. ಇದರ ಸಲುವಾಗಿ ಕೆಲವು ಬಣ್ಣಗಳಿಗೆ ಮಾತ್ರ ವಿನಾಯಿತಿ ಇದೆ ಅಷ್ಟೆ. ಮಾನವನಿಗೆ ನಿರುಪದ್ರವಿಯಾದ ರಂಗುಗಳನ್ನು ಅಮೆರಿಕ ಸಂಯುಕ್ತ ಸಂಸ್ಧಾನದಲ್ಲಿ ಪಟ್ಟಿಮಾಡಿ ಪ್ರಕಟಿಸಿದ್ದಾರೆ. ಇದನ್ನು ಆಗಿಂದಾಗ್ಗೆ ಪರಿಷ್ಕರಿಸಲು ರಾಷ್ಟ್ರೀಯ ಸಮಿತಿಯೂ ಒಂದುಂಟು. ಈ ಪಟ್ಟಿಗೆ ಯಾವುದೇ ಒಂದು ಹೊಸ ಬಣ್ಣವನ್ನು ದಾಖಲು ಮಾಡಿಕೊಳ್ಳುವ ಮುನ್ನ. ಉತ್ಪಾದಕ ಆ ರಂಗಿನ ವಿಷಗುಣ ಮತ್ತಿತರ ಶಾರೀರಕ ಪರಿಣಾಮಗಳ ಬಗ್ಗಿ ಸಂಪೂರ್ಣ ವಿವರಗಳನ್ನು ಒದಗಿಸಲು ಬದ್ಧನಾಗಿರುತ್ತಾನೆ.
	ಎಣ್ಣೆಗಳು: ಕೀಲೆಣ್ಣೆಗಳು ಮತ್ತು ಪೆಟ್ರೋಲಿನ ಚಹರೆಯನ್ನು ಸುಧಾರಿಸಲು ಮತ್ತು ಎಲ್ಯಾಸ್ಟೊಮರುಗಳಿಗೆ ಬಣ್ಣಕೊಡಲು ಅವನ್ನು ರಂಗಿನ ದ್ರಾವಣದಲ್ಲಿ ಅದ್ದಬಹುದು ಅಥವಾ ವರ್ಣದ್ರವ್ಯದ ನಿಲಂಬನವನ್ನು ಉಪಯೋಗಿಸಬಹುದು. ಇಲ್ಲಿ ರಂಗಿಗೂ ಪದಾರ್ಥಕ್ಕೂ ಇರುವ ಒಲವಿನ ಪ್ರಶ್ನೆ ಏಳದು. ದ್ರಾವಣತೆ ವರ್ಣಛಾಯೆ ಮತ್ತು ಬಾಳಿಕೆಗೆ ಆದ್ಯತೆ.

	ಜೀವವೈಜ್ಞಾನಿಕ ಪ್ರತಿಚಯಗಳು: ಜೀವವೈಜ್ಞಾನಿಕ ಮತ್ತು ವೈದ್ಯಕೀಯ ಅಧ್ಯಯನಗಳಲ್ಲಿ ಪ್ರಾಣಿ ಮತ್ತು ಸಸ್ಯ ಸಂಬಂಧವಾದ ಪದಾರ್ಥಗಳ ಜೀವಕೋಶಗಳಿಗೆ ಬಣ್ಣ ಒತ್ತುವುದು ಒಂದು ಮುಖ್ಯ ತಂತ್ರ. ಜೀವರಸಕ್ಕೂ ವಿವಿಧ ರಂಗುಗಳಿಗೂ ಇರುವ ಒಲವು ಬೇರೆ ಬೇರೆ ಆಗಿರುವುದರಿಂದ ಯುಕ್ತರಂಗುಗಳನ್ನು ಆಯ್ದುಕೊಂಡು ಸೂಕ್ಷ್ಮಜೀವಿಗಳಿಗೆ ಮತ್ತು ಕೋಶ ರಚನೆಗಳಿಗೆ ಬೇರೆ ಬೇರೆ ಬಣ್ಣಗಳನ್ನು ಕಟ್ಟಿ ಅವು ಸೂಕ್ಷ್ಮದರ್ಶಕದಲ್ಲಿ ಸ್ಪಷ್ಟವಾಗಿ ಕಾಣುವಂತೆ ಮಾಡುವರು.

	ಛಾಯಾಚಿತ್ರ ಗ್ರಹಣ: ಸಾಮಾನ್ಯ ಛಾಯಾಚಿತ್ರಗ್ರಾಹಕ ಫಲಕಗಳು ಅಥವಾ ಫಿಲ್ಮುಗಳು ರೋಹಿತದ ನೀಲಿ ಮತ್ತು ನೇರಿಳೆ ಬಣ್ಣದ ಕಿರಣಗಳಿಗೆ ಮಾತ್ರ ವಿಶೇಷ ಪ್ರತಿಕ್ರಿಯೆ ತೋರುತ್ತವೆ. ಅವು ರೋಹಿತದ ಎಲ್ಲ ಬಣ್ಣದ ಕಿರಣಗಳಿಂದಲೂ ಪ್ರಭಾವಿತವಾಗುವಂತೆ ಮಾಡಲು ಎಮಲ್ಷನ್ನಿಗೆ ಕೆಲವು ಸಯನೈನ್ ರಂಗುಗಳನ್ನು ಸೇರಿಸುತ್ತಾರೆ. ಇವು ಎಲ್ಲ ಬಣ್ಣದ ಬೆಳಕನ್ನೂ ಹೀರಿಕೊಂಡು ಆ ಪ್ರಭಾಚೈತನ್ಯವನ್ನು ಬೆಳ್ಳಿಯ ಹ್ಯಾಲೈಡುಗಳಿಗೆ ನೀಡುತ್ತವೆ. ಇಂಥ ಮಧ್ಯವರ್ತಿಗಳು ದ್ಯುತಿವಾಹಗಳು. ಈ ಕ್ರಿಯಾವೈಶಿಷ್ಟ್ಯ ದ್ಯುತಿವಹನ. ಹೀಗೆ ಸಂಸ್ಕರಿಸಿದ ಫಲಕಗಳು ಸಕಲ ವರ್ಣಗ್ರಾಹಿಗಳು. ಎಮಲ್ಷನ್ ಪದರದಲ್ಲಿಯೇ ರಂಗು ತನ್ನ ಘಟಕಗಳಿಂದ ಉತ್ಪತ್ತಿಯಾಗುವಂತೆ ಮಾಡಿ ಬಣ್ಣದ ಛಾಯಾಚಿತ್ರ ತೆಗೆಯುತ್ತಾರೆ.

	ಸೂಚಕಗಳು: ಕೆಲವು ರಂಗುಗಳು ಪರಿಸರದ ಯಾವುದೋ ಗುಣದ ಪ್ರಭಾವದಿಂದ ಬಣ್ಣ ಬದಲಾಯಿಸುತ್ತವೆ. ಇದರಿಂದ ವೀಕ್ಷಕನಿಗೆ ಆ ಗುಣದ ಬಗ್ಗೆ ಮಾಹಿತಿ ಸಿಕ್ಕುತ್ತದೆ. ಇವೇ ಸೂಚಕಗಳು. ಆಮ್ಲ ಮತ್ತು ಪ್ರತ್ಯಾಮ್ಲಗಳಿಗೆ ಪ್ರತಿಕ್ರಿಯೆ ತೋರುವ ಲಿಟ್ಮಸ್, ಮೀಥೈಲ್ ಆರಂಜ್, ಮೀಥೈಲ್ ರೆಡ್, ಫೀನಾಲ್ ಫ್ತ್ಯಾಲೈನುಗಳ ಪರಿಚಯ ನಮಗಿದೆ. ಹೀಗೆಯೇ ಉಷ್ಣ, ವಿದ್ಯುತ್, ತೇವಾಂಶ ನೀರಿನ ಗಡಸುತನ, ಉತ್ಕರ್ಷಣ ಮತ್ತು ಅಪಕರ್ಷಣಗಳಿಗೆ ಪ್ರತಿಕ್ರಿಯೆ ತೋರುವ ಸೂಚಕಗಳನ್ನೂ ಕಂಡುಹಿಡಿದಿದ್ದಾರೆ.

	ಇತರಾದಿಗಳು: ಸಾಬೂನು, ಸಂಶ್ಲೇಷಿತ ಮಾರ್ಜಕಗಳು, ಅಂಗರಾಗಗಳು, ಶಾಯಿ, ಕೂದಲು, ತುಪ್ಪುಳು, ಲೋಹಗಳು, ಆನೋಡೀ ಕರಿಸಿದ ಅಲ್ಯೂಮಿನಿಯಮ್ ಮತ್ತು ಇನ್ನೂ ಅನೇಕ ಪದಾರ್ಥಗಳಿಗೆ ಬಗೆಬಗೆಯ ರಂಗುಗಳಿಂದ ಬಣ್ಣಹಾಕುತ್ತಾರೆ. ಸೈನಿಕ ಕಾರ್ಯಾಚರಣೆಗಳಲ್ಲಿ ಬಣ್ಣದ ಧೂಮಗಳನ್ನು ಎಬ್ಬಿಸಿ ಸಂಕೇತ ವಿನಿಮಯಮಾಡಿಕೊಳ್ಳುವುದು ರೂಢಿ.

	ಈಗ ಪ್ರಯೋಗ ವಿಧಾನಗಳನ್ನು ಅವಲಂಬಿಸಿ ರಂಗುಗಳನ್ನು ಹೇಗೆ ವರ್ಗೀಕರಿಸಲಾಗುವುದು ಎಂಬುದನ್ನು ಪರಿಶೀಲಿಸೋಣ. ರಂಗಾರೆಯವನಿಗೆ ಇದು ಮುಖ್ಯ.

	ಆಮ್ಲೀಯ ರಂಗುಗಳು: ಇವು ಆಗ್ರ್ಯಾನಿಕ್ ಆಮ್ಲಗಳ (ಸಲ್ಫಾನಿಕ್ ಮತ್ತು ಕಾರ್ಬಾಕ್ಸಿಲಿಕ್) ಸೋಡಿಯಮ್ ಲವಣಗಳು. ರಂಗಿನ ದ್ರಾವಣತೆಗೆ (ನೀರಿನಲ್ಲಿ) ಈ ಆಮ್ಲೀಯ ಪುಂಜಗಳು ಕಾರಣ. ವಿಲೀನವಾದಾಗ ರಂಗಿನ ಅಣುಗಳು ಅಯಾನೀಭವಿಸುತ್ತವೆ. ಅಂದರೆ ವಿರುದ್ಧ ವಿದ್ಯುದಾವಿಷ್ಟ ಕಣಗಳಿಗೆ ಪ್ರತ್ಯೇಕಿಸುತ್ತವೆ. ರಂಗುರಚನೆ ಅನಯಾನಿಕ್ ಭಾಗದಲ್ಲಿ (ಋಣಾವಿಷ್ಟ ಭಾಗ) ಸೇರಿಕೊಂಡಿರುವುದು. ಈ ರಂಗುಗಳನ್ನು ವಿಶೇಷವಾಗಿ ಉಣ್ಣೆ. ನೈಸರ್ಗಿಕ ರೇಷ್ಮೆ, ಪಾಲಿಅಮೈಡ್ ಮತ್ತು ಪಾಲಿಅಕ್ರಿಲಿಕ್ ನಮೂನೆಯ ಸಂಶ್ಲೇಷಿತ ನೂಲುಗಳು, ತೊಗಲು ಮತ್ತು ಕಾಗದಗಳಿಗೆ ಉಪಯೋಗಿಸುತ್ತಾರೆ. ರಂಗಿನ ದ್ರಾವಣಕ್ಕೆ ಸ್ವಲ್ಪ ಸಲ್ಫ್ಯೂರಿಕ್ ಆಮ್ಲ ಅಥವಾ ಅಸಿಟಿಕ್ ಆಮ್ಲವನ್ನು ಸೇರಿಸಿದ ಹೊರತು ರಂಗು ನೂಲನ್ನು ಕಚ್ಚದ್ದು. ಆದರೆ ಕೆಲವು ಆಮ್ಲೀಯ ರಂಗುಗಳು ತಟಸ್ಥ ಮಾಧ್ಯಮದಲ್ಲೂ ನೂಲಿಗೆ ಅಂಟಿಕೊಳ್ಳಬಲ್ಲವು. ರಂಗಿಸಿದ ಪದಾರ್ಥಗಳನ್ನು ಕ್ರೋಮಿಯಮಿನಂಥ ಲೋಹ ಲವಣಗಳಿಂದ ಸಂಸ್ಕರಿಸಿದರೆ ಬಣ್ಣ ಸ್ಥಿರವಾಗಿ ಉಳಿಯುವುದು ಕಂಡುಬಂದಿದೆ. ಆದ್ದರಿಂದ ತಮ್ಮ ಅನಯಾನಿಕ್ ಭಾಗದಲ್ಲೇ ಲೋಹವುಳ್ಳ ರಂಗುಗಳನ್ನು ತಯಾರಿಸುತ್ತಿದ್ದಾರೆ. ಇಂಥ ಅನಯಾನಿಕ್ ಬಂಧಿತಲೋಹದ ಪರಮಾಣುಗಳು ತಮ್ಮ ಸ್ವಾಭಾವಿಕ ಕ್ರಿಯಾಲಕ್ಷಣಗಳನ್ನು ಪ್ರದರ್ಶಿಸುವುದಿಲ್ಲ. ಆದ್ದರಿಂದ ಅವು ಷೀಲೇಟ್ ಆಗಿವೆ ಎನ್ನುತ್ತಾರೆ. ಇಂಥ ಲೋಹಾನ್ವಿತ ಅಥವಾ ಪೂರ್ವಲೌಹಿತ ರಂಗುಗಳು ವ್ಯಾಟ್‍ಂಗುಗಳಷ್ಟೇ ಸ್ಥಿರ.

	ಕೆಲವು ಆಗ್ರ್ಯಾನಿಕ್ ಸಂಯುಕ್ತಗಳಿಗೆ (ಮುಖ್ಯವಾಗಿ ಸ್ಟಿಲ್ಬೀನ್ ವ್ಯುತ್ಪನ್ನಗಳು) ನೂಲಿನ ಒಲವು ಇದ್ದರೂ ಅವು ಗೋಚರ ರೋಹಿತದಲ್ಲಿ ಬೆಳಕನ್ನು ಹೀರುವುದಿಲ್ಲವಾದ್ದರಿಂದ ಬಣ್ಣವನ್ನು ಪ್ರದರ್ಶಿಸುವುದಿಲ್ಲ. ಆದರೆ ತಾವು ಹೀರುವ ಅತಿನೇರಳೆ ಬೆಳಕಿನ ಒಂದಂಶವನ್ನು ಗೋಚರ ಬೆಳಕಿಗೆ ಪರಿವರ್ತಿಸುತ್ತವೆ. ಪರಿಣಾಮವಾಗಿ ಅವು ಹೆಚ್ಚು ಬಿಳಿ ಬೆಳಕನ್ನು ಪ್ರತಿಫಲಿಸುತ್ತವೆ. ಇದರಿಂದ ನಸುಹಳದಿ ಪದಾರ್ಥಗಳಿಗೆ ನೀಲಿ ಛಾಯೆ ಆರೋಪಿತವಾಗಿ ಅವು ಇನ್ನೂ ಬೆಳ್ಳಗೆ ಕಾಣುತ್ತವೆ. ಇವುಗಳಿಗೆ ಶ್ವೇತರಂಗುಗಳು ಅಥವಾ ದ್ಯುತಿ ಚೆಲುವೆಕಾರಿಗಳು (ಆಪ್ಟಿಕಲ್ ಬ್ಲೀಚರ್ಸ್) ಅಥವಾ ದ್ಯುತಿಪ್ರಕಾಶಗಳು (ಆಪ್ಟಿಕಲ್ ಬ್ರೈಟ್‍ನರ್ಸ್) ಎಂದು ಹೆಸರು. ಇವನ್ನು ವಿಶೇಷವಾಗಿ ಬಟ್ಟೆ ಮತ್ತು ಕಾಗದ ತಯಾರಿಕೆಗೆ ಉಪಯೋಗಿಸುತ್ತಾರೆ.

	ಪ್ರತ್ಯಾಮ್ಲೀಯ ರಂಗುಗಳು: ಇವೂ ಲವಣಗಳೇ. ಆದರೆ ಅಮೈನೊ ಮತ್ತು ಇಮೈನೊ ಪುಂಜಗಳುಳ್ಳ ಅಗ್ರ್ಯಾನಿಕ್ ಪ್ರತ್ಯಾಮ್ಲಗಳ ಲವಣಗಳು. ಅಷ್ಟೇ ವ್ಯತ್ಯಾಸ. ರಂಗನ್ನು ಹೈಡ್ರೊಕ್ಲೋರಿಕ್ ಆಮ್ಲ ಅಥವಾ ಸಲ್ಫ್ಯೂರಿಕ್ ಆಮ್ಲದಂಥ ಬಣ್ಣವಿಲ್ಲದ ಆಮ್ಲದೊಡನೆ ಸೇರಿಸಿ ದ್ರಾವಣ ಮಾಡಿದರೆ ರಂಗುರಚನೆ ಕೇಟಯಾನುಗತವಾಗುತ್ತದೆ. ಈ ರಂಗುಗಳು ಕಾಂತಿಯುತವಾಗಿದ್ದರೂ ಆಕ್ರಿಲಿಕ್ ನೂಲುಗಳ ಹೊರತು ಇತರ ನೂಲುಗಳಲ್ಲಿ ಸ್ಥಿರವಾಗಿ ನಿಲ್ಲುವುದಿಲ್ಲ. ಆದ್ದರಿಂದ ಇವು ಅಕ್ರಿಲಿಕ್ ನೂಲುಗಳು, ಉಣ್ಣೆ, ರೇಷ್ಮೆ, ತೊಗಲು ಮತ್ತು ಕಾಗದಗಳಿಗೆ ಹಚ್ಚಲು ಪ್ರಶಸ್ತ. ಹತ್ತಿಯನ್ನು ಪೂರ್ವಭಾವಿಯಾಗಿ ವರ್ಣ ಸ್ಧಾಪಕಗಳಲ್ಲಿ (ಟ್ಯಾನಿನ್ ಅಂಟಿಮೊನಿ ಲವಣಗಳು ಮತ್ತು ಟ್ಯಾನಿನ್, ಆ್ಯಲಮ್ ಇತ್ಯಾದಿ) ಆದ್ದಿದರೆ ಆಗ ಈ ರಂಗುಗಳು ಅದಕ್ಕೂ ಅಂಟುತ್ತವೆ.	

	ಸ್ಧಾಪಕ ರಂಗುಗಳು: ಕೆಲವು ರಂಗುಗಳಿಗೆ ಕೆಲವು ನೂಲುಗಳನ್ನು ಕಂಡರೆ ಆಗದಷ್ಟೆ. ಅಂಥ ಸಂದರ್ಭಗಳಲ್ಲಿ ಸ್ಧಾಪಕಗಳನ್ನು ಬಳಸಿದರೆ ರಂಗು ನೂಲಿಗೆ ಅಂಟುತ್ತದೆ. ಸ್ಧಾಪಕದೊಡನೆ ರಂಗು ವರ್ತಿಸುವುದರಿಂದ ಬಣ್ಣ ನಿಲ್ಲುವುದು. ಆದ್ದರಿಂದ ಇವನ್ನು ಪರಾವಲಂಬಿ (ಅಡ್ಜೆಕ್ಟಿವ್) ರಂಗುಗಳೆಂದೂ ಕರೆಯುತ್ತಾರೆ. ಹತ್ತಿಗೆ ಪ್ರತ್ಯಾಮ್ಲೀಯ ರಂಗು ಅಂಟಲು ಸ್ಧಾಪಕ ಅಗತ್ಯವಷ್ಟೆ. ಆದರೆ ಅದನ್ನು ಇನ್ನೂ ಪ್ರತ್ಯಾಮ್ಲೀಯ ರಂಗು ಎಂದೇ ಕರೆಯುವುದರಿಂದ ಸ್ಧಾಪಕ ಎನ್ನುವ ವಿಶೇಷಣ ಆಮ್ಲೀಯ ರಂಗುಗಳಿಗೆ ಮತ್ತು ಅಲಿಜರೀನಿಗೆ ಸೀಮಿತವಾಗಿದೆ. ಜನಪ್ರಿಯವಾದ ಸ್ಧಾಪಕಗಳೆಂದರೆ ಕ್ರೋಮಿಯಮ್ ಲವಣಗಳು. ಕ್ರೋಮಿಯಮ್ ಸಂಯುಕ್ತವನ್ನು ಪೂರ್ವಭಾವಿಯಾಗಿ ಅಥವಾ ಬಣ್ಣ ಹಾಕುವಾಗ ರಂಗಿನ ಜೊತೆಯಲ್ಲೇ ಅಥವಾ ಬಣ್ಣಹಾಕಿದ ಅನಂತರ ಪ್ರಯೋಗಿಸುವುದುಂಟು. ಆ ವಿದ್ಯಮಾನವನ್ನು ಅನುಕ್ರಮವಾಗಿ ಮೆಟ, ಮಾನೊ ಅಥವಾ ಆಟೊ ಮತ್ತು ಟಾಪ್ ಅಥವಾ ಆಫ್ಟರ್ ಕ್ರೋಮೀಕರಣ ಎಂದು ವರ್ಣಿಸುತ್ತಾರೆ. ಈ ಸಂಸ್ಕರಣಗಳಿಂದ ಬಣ್ಣದ ಛಾಯೆಯನ್ನೂ ಅದರ ಜಲನಿರೋಧಕ ಮತ್ತು ದ್ಯುತಿನಿರೋಧಕ ಸಾಮಥ್ರ್ಯವನ್ನೂ ಸುಧಾರಿಸಬಹುದು.

	ನೇರ ರಂಗುಗಳು: ಸಾಧಾರಣವಾಗಿ ಇವು ಸಲ್ಫಾನಿಕ್ ಆಮ್ಲಗಳ ಸೋಡಿಯಮ್ ಲವಣಗಳು. ಅಣುವಿನ ಬಣ್ಣ ಅದರ ಆನಯಾನಿನಲ್ಲಿದೆ. ಇವುಗಳಿಗೂ ಹತ್ತಿ ಮತ್ತು ಇತರ ಸೆಲ್ಯುಲೋಸ್ ನೂಲುಗಳಿಗೂ ಒಲವು ಜಾಸ್ತಿ. ಇದೇ ಇವುಗಳಿಗೂ ಆಮ್ಲೀಯ ರಂಗುಗಳಿಗೂ ಇರುವ ವ್ಯತ್ಯಾಸ. ರಂಗಿನ ಬಾತ್‍ಗೆ ಸೋಡಿಯಮ್ ಕ್ಲೋರೈಡ್ ಅಥವಾ ಸೋಡಿಯಮ್ ಸಲ್ಫೇಟ್ ಸೇರಿಸಿದ್ದರೆ ಸಾಕು, ಇವು ನೂಲಿಗೆ ಅಂಟಿಕೊಳ್ಳುತ್ತವೆ. ಕಾಗದ, ತೊಗಲು ಮತ್ತು ರೇಷ್ಮೆಗೆ ಬಣ್ಣಕೊಡಲು ಇವನ್ನು ತುಂಬ ಬಳಸುತ್ತಾರೆ. ಇವನ್ನು ಪ್ರಯೋಗಿಸುವುದು ಸುಲಭವಾದ್ದರಿಂದ ಗೃಹಬಳಕೆಯ ಪ್ಯಾಕೇಜ್ ರಂಗುಗಳು ಬಲುಮಟ್ಟಿಗೆ ಈ ಗುಂಪಿನವು.

	ಅನೇಕ ನೇರ ರಂಗುಗಳನ್ನು ಪ್ರಯೋಗಿಸಿದ ಮೇಲೂ ತಾಮ್ರ ಅಥವಾ ಕ್ರೋಮಿಯಮ್ ಲವಣಗಳು, ಫಾರ್ಮಾಲ್ಡಿಹೈಡ್, ಅಂಟುಗಳು ಮತ್ತು ಕೇಟಯಾನಿಕ್ ಸ್ಧಾಪಕಗಳು ಮೊದಲಾದವುಗಳಿಂದ ಸಂಸ್ಕರಿಸಿ ಬಣ್ಣವನ್ನು ಸುಧಾರಿಸಬಹುದು. ಅಲ್ಲದೆ ರಂಗಿನ ರಚನೆಯನ್ನು ನೂಲಿನ ಮೇಲೆ ಅದು ಇದ್ದ ಹಾಗೆಯೇ ಬದಲಾಯಿಸುವ ಸಾಧ್ಯತೆ ಉಂಟು. ಇದೊಂದು ಸ್ವಾರಸ್ಯ, ಉದಾಹರಣೆಗೆ ಒಂದು ನೇರ ರಂಗಿನಲ್ಲಿ ಅಮೈನೊ ಪುಂಜವಿದೆಯೆನ್ನಿ. ಆಗ ಅದರ ನೈಟ್ರೊಜನ್ನನ್ನು ದ್ವಿಗುಣಗೊಳಿಸಿ ಯುಕ್ತ ಸ್ಫುಟೀಕಾರಕದೊಡನೆ ಸಂಗಮಿಸಿದರೆ, ಬೇರೊಂದು ರಂಗು ಮೈದಳೆಯುತ್ತದೆ. ಇಂಥ ಸಂಸ್ಕರಣಗಳಿಗೆ ಒಗ್ಗುವ ರಂಗುಗಳಿಗೆ ಸ್ಫುಟೀಕರಿಸಿದ ರಂಗುಗಳು (ಡೆವಲಪ್ಡ್ ಡೈಸ್) ಎಂದು ಹೆಸರು.

	ರೂಢಮೂಲ (ಇನ್‍ಗ್ರೇನ್) ರಂಗುಗಳು: ವರ್ಣಗ್ರಾಹಿಯ ಮೇಲೆಯೇ ಕೆಲವೊಂದು ಬಗೆಯ ರಾಸಾಯನಿಕ ಕ್ರಿಯೆ ನಡೆಸಿ ನೇರವಾಗಿ ಉತ್ಪತ್ತಿಮಾಡುವ ರಂಗುಗಳಿಗೆ ಈ ಹೆಸರು. ಅಜೋಯಿಕ್ ಮತ್ತು ಉತ್ಕರ್ಷಣ ರಂಗುಗಳು ಉದಾಹರಣೆಗಳು. ಕೆಲವು ಸಂದರ್ಭಗಳಲ್ಲಿ ಫ್ತ್ಯಾಲೊಸಯನೈನ್ ರಂಗುಗಳನ್ನೂ ಹೀಗೆ ರೂಪಿಸಬಹುದು.

	ಅಜೋಯಿಕ್ ರಂಗುಗಳು ನೀರಿನಲ್ಲಿ ಅದ್ರಾವ್ಯವಾದ ಅಜೋಸಂಯುಕ್ತಗಳು, ಮಧ್ಯವರ್ತಿ ಘಟಕಗಳ ಮಿಲನದಿಂದ ನೇರವಾಗಿ ವರ್ಣಗ್ರಾಹಿಯಲ್ಲಿ ಉತ್ಪತ್ತಿಯಾದವು. ಸಾಮಾನ್ಯವಾಗಿ ಬಟ್ಟೆಯನ್ನು ಒಂದು ಘಟಕವನ್ನು ಒಳಗೊಂಡ (ಹೈಡ್ರಾಕ್ಸಿ ಅಥವಾ ಅಮೈನೊ ಘಟಕ) ದ್ರಾವಣದಲ್ಲಿ ಅದ್ದಿ, ಜಾಲಾಡದೆ ಒಣಗಿಸಿ, ಅನಂತರ ಇನ್ನೊಂದು ಘಟಕದ (ಇದು ಸಾಮಾನ್ಯವಾಗಿ ಬರ್ಫದಿಂದ ತಣಿಸಲ್ಪಟ್ಟ ಡೈಅಜೊ ಸಂಯುಕ್ತ; ಇಲ್ಲದಿದ್ದರೆ ಅದು ವಿಭಜಿಸುತ್ತದೆ; ಆದ್ದರಿಂದ ಇವನ್ನು ಬರ್ಫಬಣ್ಣಗಳೆಂದು ಕರೆಯುತ್ತಾರೆ) ದ್ರಾವಣದಿಂದ ಸಂಸ್ಕರಿಸುವರು. ಆಗ ಕ್ರಿಯೆಯ ಉತ್ಪನ್ನ ನೂಲಿನಲ್ಲೆಲ್ಲ ಸಮವಾಗಿ ನಿಕ್ಷೇಪಿಸುತ್ತವೆ. ಇದು ನೀರಿನಲ್ಲಿ ಅದ್ರಾವ್ಯವಾದ ಬಣ್ಣವಾದ್ದರಿಂದ ವರ್ಣದ್ರವ್ಯವೇ ಹೊರತು ರಂಗಲ್ಲ. ಈ ಬಣ್ಣಗಳನ್ನು ಹತ್ತಿ ಮತ್ತು ರೇಯಾನುಗಳಿಗೂ ವಿಶೇಷವಾಗಿ ಮುತ್ರ್ರಣ ಕಾರ್ಯಕ್ಕೂ ಉಪಯೋಗಿಸುತ್ತಾರೆ. ಕೆಲವು ಆರೊಮ್ಯಾಟಿಕ್ ಅಮೀನುಗಳಿಂದ ಪೂರಿತವಾದ ವರ್ಣಗ್ರಾಹಿಯನ್ನು ಉತ್ಕರ್ಷಣಕ್ಕೆ ಒಳಪಡಿಸಿದಾಗ ಅದರ ಮಏಲೆ ನೇರವಾಗಿ ರೂಪಣೆಯಾಗುವ ರಂಗುಗಳಿಗೆ ಉತ್ಕರ್ಷಣ ರಂಗುಗಳೆಂದು ಹೆಸರು ಅಂತಿಮ ಉತ್ಪನ್ನ ಪ್ರಾಯಶಃ ಒಂದು ವರ್ಣದ್ರವ್ಯವೇ ಹೊರತು ರಂಗಲ್ಲ. ಕೂದಲು ಮತ್ತು ತುಪ್ಪುಳುಗಳನ್ನು ರಂಗಿಸಲು ಇವು ಪ್ರಶಸ್ತ.

	ನಿಲಂಬಿತ ರಂಗುಗಳು (ಡಿಸ್ಪಸ್ರ್ಡ್ ಡೈಸ್): ಸಂಶ್ಲೇಷಿತ ನೂಲಾದ ಸೆಲ್ಯುಲೋಸ್ ಅಸಿಟೇಟಿನ ಮೇಲೆ ಪ್ರಯೋಗಿಸಲು ಇವನ್ನು ಅಭಿವೃದ್ಧಿ ಪಡಿಸಲಾಯಿತು. ಹಿಂದಿನ ಕಾಲದ ರಂಗುಗಳು ಈ ನೂಲಿಗೆ ಹಿಡಿಯುತ್ತಿರಲ್ಲಿಲ್ಲ. ಆದರೆ ಪ್ರತ್ಯಾಮ್ಲೀಯ ಗುಣವುಳ್ಳ ಮತ್ತು ನೀರಿನಲ್ಲಿ ಅತ್ಯಲ್ಪ ದ್ರಾವ್ಯವಾದ ಕೆಲವು ಬಣ್ಣವುಳ್ಳ ವಸ್ತುಗಳು ನೀರಿನಲ್ಲಿ ಅತಿಸೂಕ್ಷ್ಮ ಕಣಸ್ಥಿತಿಯಲ್ಲಿ ನಿಲಂಬಿತವಾಗಿದ್ದರೆ ತಮ್ಮ ಬಣ್ಣವನ್ನು ನೂಲಿಗೆ ವರ್ಗಾಯಿಸುವುದು ಕಂಡುಬಂತು. ರಂಗು ನೂಲಿನಲ್ಲಿ ದ್ರಾವಣವಾಯಿತು. ನಿಲಂಬಿತ ರಂಗುಗಳ ಆವಿಷ್ಕಾರವಾದುದು ಹೀಗೆ. ಸಲ್ಯುಲೋಸ್ ಅಸಿಟೇಟಿನ ತರುವಾಯ ಕಂಡು ಹಿಡಿಯಲಾದ ಇತರ ಸಂಶ್ಲೇಷಿತ ನೂಲುಗಳಿಗೂ ನಿಲಂಬಿತ ರಂಗುಗಳನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ.

	ವ್ಯಾಟ್ ರಂಗುಗಳು: ಇಲ್ಲಿ ಅನುಸರಿಸುವ ರಂಗುಲೇಪನ ವಿಧಾನ ವಿಶಿಷ್ಟವಾದುದು. ನೀರಿನಲ್ಲಿ ಅದ್ರಾವ್ಯವಾಗಿದ್ದ ಬಣ್ಣ ತನ್ನ ವರ್ಣಕಾರದ ಪುಂಜದ ಆಪಕರ್ಷಣದ ದೆಸೆಯಿಂದ ದ್ರಾವ್ಯವಾಗಿ ಬಿಡುತ್ತದೆ.=ಛಿ=0 ಪುಂಜ,(ಅ-ಔಊ ಪುಂಜಕ್ಕೆ ಅಪಕರ್ಷಿತವಾಗುವುದು ಇದಕ್ಕೆ ನಿದರ್ಶನ. ಇದು ಲ್ಯೂಕೊ ಸಂಯುಕ್ತ. ಕ್ಷಾರದ ಸಮ್ಮುಖದಲ್ಲಿ ನೀರಿನಲ್ಲಿ ದ್ರಾವ್ಯವಾದ ಲ್ಯೂಕೊ ಲವಣ(ಛಿ-0-ಂIಏ ಉಂಟಾಗುತ್ತದೆ. ಈ ವ್ಯಾಟ್ ದ್ರಾವಣದ ಬಣ್ಣ ಮೂಲ ಅದ್ರಾವ್ಯ ಪದಾರ್ಥದ ಬಣ್ಣಕ್ಕಿಂತ ಭಿನ್ನ. ಇದಕ್ಕೆ ಹತ್ತಿಯ ಒಲವು. ಆದ್ದರಿಂದ ಅದಕ್ಕೆ ತನ್ನ ಬಣ್ಣವನ್ನು ನೀಡುವುದು ವಾಯುವಿನಿಂದ ಅಥವಾ ಉತ್ಕರ್ಷಣಕಾರಿಗಳಿಂದ ಉತ್ಕರ್ಷಿಸಲ್ಪಟ್ಟಾಗ ಕ್ರಿಯೆ ಪರಾವರ್ತಿಸಿ ಮೂಲ ಅದ್ರಾವ್ಯ ಪದಾರ್ಥದ ಬಣ್ಣಕ್ಕಿಂತ ಭಿನ್ನ. ಇದಕ್ಕೆ ಹತ್ತಿಯ ಒಲವು. ಆದ್ದರಿಂದ ಅದಕ್ಕೆ ತನ್ನ ಬಣ್ಣವನ್ನು ನೀಡುವುದು ವಾಯುವಿನಿಂದ ಅಥವಾ ಉತ್ಕರ್ಷಣಕಾರಿಗಳಿಂದ ಉತ್ಕರ್ಷಿಸಲ್ಪಟ್ಟಾಗ ಕ್ರಿಯೆ ಪರಾವರ್ತಿಸಿ ಮೂಲ ಅದ್ರಾವ್ಯ ರಂಗಿನ ಬಣ್ಣ ಮರುಕಳಿಸುತ್ತದೆ. ಅದು ವರ್ಣದ್ರವ್ಯದ ರೂಪದಲ್ಲಿ ನೂಲಿನೊಳಗೆ ನಿಕ್ಷೇಪಿಸುವುದು. ಒಂದು ಬಗೆಯ ವ್ಯಾಟ್ ಬಣ್ಣಗಳು ವಾಯುವಿನಲ್ಲಿ ಉತ್ಕರ್ಷಿಸಲ್ಪಡುವುದಿಲ್ಲ. ಇವು ಲ್ಯೂಕೊ ಎಸ್ಟರಗಳು ಅಂದರೆ ಲ್ಯೂಕೊ ಸಂಯುಕ್ತ ಮತ್ತು ಸಲ್ಫ್ಯೂರಿಕ್ ಆಮ್ಲದ ಉತ್ಪನ್ನಗಳು. ಇದರಿಂದ ರಂಗಾರೆಯವನಿಗೆ ವ್ಯಾಟಿಂಗ್ ಪರಿಕರ್ಮದ ವೆಚ್ಚ ಮತ್ತು ಶ್ರಮ ತಪ್ಪುತ್ತವೆ. ಅವನು ಬಟ್ಟೆಗೆ ಬಣ್ಣ ಹಚ್ಚಿ. ಆಮ್ಲೀಯಗೊಳಿಸಿ ಉತ್ಕರ್ಪಿಸಿದರೆ ಸಾಕು. ಇಂಡಿಗೊಗಳು ಮತ್ತು ಅಂತ್ರಕ್ವಿನೋನುಗಳು ವ್ಯಾಟ್ ರಂಗುಗಳಲ್ಲಿ ಎರಡು ಪ್ರಮುಖ ವರ್ಗಗಳು. ನೀರು, ಬೆಳಕು ಮತ್ತು ರಾಸಾಯನಿಕಗಳಿಗೆ ಬಗ್ಗದಿರುವುದು ಇವುಗಳ ವೈಶಿಷ್ಟ್ಯ. ಆಂತ್ರಕ್ವಿನೋನ್ ವರ್ಗದ ಪ್ರಪ್ರಥಮ ರಂಗಿನ ಆವಿಷ್ಕಾರ (1901) ಆದ ಆರಭ್ಯ ಈ ವರ್ಗ ರಂಗು ಉದ್ಯಮದಲ್ಲಿ ಪ್ರಾಮುಖ್ಯಗಳಿಸಿದೆ.

	ಗಂಧಕಾನ್ವಿತ ರಂಗುಗಳು: ಇವನ್ನೂ ವ್ಯಾಟ್ ತಂತ್ರದಿಂದಲೇ ಸೆಲ್ಯುಲೋಸ್ ನೂಲುಗಳಿಗೆ ಒಲವುಳ್ಳ ದ್ರಾವ್ಯ ರಂಗುಗಳಾಗಿ ಮಾರ್ಪಡಿಸುತ್ತಾರೆ. ನಾನಾ ಬಗೆಯ ಆಗ್ರ್ಯಾನಿಕ್ ಸಂಯುಕ್ತಗಳನ್ನು ಗಂಧಕ ಮತ್ತು ಸೋಡಿಯಮ್ ಸಲ್ಫೈಡುಗಳೊಡನೆ ವರ್ತಿಸುವಂತೆ ಮಾಡಿ ಈ ರಂಗುಗಳನ್ನು ತಯಾರಿಸುವರು. ಇವುಗಳ ರಾಸಾಯನಿಕ ರಚನೆಗಳ ಬಗ್ಗೆ ಅಷ್ಟಾಗಿ ತಿಳಿಯದು. ಈ ಅದ್ರಾವ್ಯ ರಂಗುಗಳನ್ನು ಕ್ಷಾರೀಯ ಸೋಡಿಯಮ್ ಸಲ್ಫೈಡ್ ದ್ರಾವಣದಲ್ಲಿ ವಿಲೀನಮಾಡುವರು. ಇದು ಅಪಕರ್ಷಣಕಾರಿಯಾಗಿ ವರ್ತಿಸುವುದಲ್ಲದೆ ಕ್ಷಾರವನ್ನೂ ಒದಗಿಸುತ್ತದೆ. ದ್ರಾವ್ಯ ಲ್ಯೂಕೊ ರೂಪವನ್ನು ಹಚ್ಚಿದರೆ ಅದು ಉತ್ಕರ್ಷಣ ಹೊಂದಿ ನೂಲಿನ ಮೇಲೆ ಅದ್ರಾವ್ಯ ರಂಗು ಉತ್ಪತ್ತಿ ಆಗುತ್ತದೆ. ಇವು ಬಲುಮಟ್ಟಿಗೆ ಸ್ಥಿರ ಬಣ್ಣಗಳು. ಅಷ್ಟು ದುಬಾರಿಯೂ ಅಲ್ಲ. ಆದ್ದರಿಂದ ಇವನ್ನು ಬೃಹತ್ ಪ್ರಮಾಣದಲ್ಲಿ ಬಳಸುತ್ತಾರೆ. ಹತ್ತಿ ಮತ್ತು ವಿಸ್ಕೋಸ್ ರೇಯಾನುಗಳಿಗೆ ಇವು ಪ್ರಶಸ್ತ ರಂಗುಗಳು.

	ದ್ರಾವಕ ರಂಗುಗಳು: ಇವು ಬೆನ್‍ಜಿûೀನ್, ಪಟ್ರೋಲ್, ಆಲ್ಕೊಹಾಲ್ ಅಸಿಟೋನ್, ಎಣ್ಣೆಗಳು, ಕೊಬ್ಬುಗಳು ಮತ್ತು ಮೇಣಗಳಂಥ ಆಗ್ರ್ಯಾನಿಕ್ ದ್ರಾವಕಗಳಲ್ಲಿ ವಿಲೀನವಾಗುತ್ತವೆ. ವರ್ಣಗ್ರಾಹಿಯಲ್ಲಿ ಸುಮ್ಮನೆ ದ್ರಾವಣವಾಗುವುದರಿಂದ ಬಣ್ಣ ನೀಡುತ್ತವೆ. ಇವುಗಳಲ್ಲಿ ಎರಡು ಉಪವರ್ಗಗಳು, ಮೊದಲನೆಯದು ಸ್ಪಿರಿಟ್ ದ್ರಾವ್ಯ ರಂಗುಗಳು. ಅಂದರೆ ಪ್ರಧಾನವಾಗಿ ಆಲ್ಕೊಹಾಲಿನಲ್ಲಿ ದ್ರಾವ್ಯವಾದವು. ಎರಡನೆಯದು ಎಣ್ಣೆದ್ರಾವ್ಯರಂಗುಗಳು. ಇವು ಪ್ರಧಾನವಾಗಿ ಬೆನ್‍ಜಿûೀನ್ ಹಾಗೂ ಸಸ್ಯ ಮತ್ತು ಪ್ರಾಣಿ ಮೂಲದ ಎಣ್ಣೆಗಳಲ್ಲಿ ದ್ರಾವ್ಯ ಮೆರುಗೆಣ್ಣೆಗಳು, ಮುದ್ರಣ ಮತ್ತು ಬರಹದ ಶಾಯಿಗಳು, ಬೆಣ್ಣೆ ಮತ್ತು ಮಾರ್ಗರಿನ್ ಪ್ಲಾಸ್ಟಿಕ್ಕುಗಳು, ಅಂಟುಗಳು ಮೊದಲಾದವುಗಳಿಗೆ  ಬಣ್ಣ ಕೊಡಲು ಇವು ಉಪಯುಕ್ತ.

	ನೂಲುಪಟು ರಂಗುಗಳು: ಇವುಗಳ ಅಣುರಚನೆಯಲ್ಲಿರುವ ಕೆಲವು ಕ್ರಿಯಾಶೀಲ ಪುಂಜಗಳು ವರ್ಣಗ್ರಾಹಿಯೊಡನೆ ವರ್ತಿಸಿ ಸಾಂಪ್ರಾದಾಯಿಕ ರಾಸಾಯನಿಕ ಸಂಯೋಗದಿಂದ ಅದಕ್ಕೆ ಬಂಧಿಸಲ್ಪಡುವುವು. ಹೀಗಾಗಲು ವಿಶಿಷ್ಟಪ್ರಯೋಗ ಪರಿಸ್ಥಿತಿಗಳು ಅಗತ್ಯ. ಉತ್ಪತ್ತಿ ಆಗುವ ಬಣ್ಣ ಸ್ಥಿರವಾಗಿದ್ದು ಅತಿಶಯವಾದ ಗುಣಗಳನ್ನು ಹೊಂದಿದ್ದರೆ ಮಾತ್ರ ಈ ಕ್ರಮ ಅನುಷ್ಠಾನಯೋಗ್ಯ. ಇವು 1950ರಲ್ಲಿ ಬಳಕೆಗೆ ಬಂದುವು.

	ಬಣ್ಣಪ್ರದಾನ: ರಂಗಿತೂ ಅದು ಬಣ್ಣಪ್ರದಾನಮಾಡುವ ಪದಾರ್ಥಕ್ಕೂ ಅಂದರೆ ವರ್ಣಗಾಹಿಗೂ ನಡುವೆ ಇರುವ ನಾನಾ ಬಗೆಯ ಆಕರ್ಷಣೆಯನ್ನು ಒಲವು ಎಂಬ ವ್ಯಾಪಕ ಪದದಿಂದ ವರ್ಣಿಸುವುದು ವಾಡಿಕೆ. ಈ ಒಲವಿಗೆ ಕಾರಣಗಳು ಹಲವು. ಆವಿಷ್ಟ ರಂಗಿನ ಕಣಗಳಿಗೂ ವರ್ಣಗ್ರಾಹಿಯಲ್ಲಿರುವ ವಿರುದ್ಧಾವೇಶವುಳ್ಳ ರಂಗು ನಿವೇಶನಗಳಿಗೂ ಇರುವ ಸ್ವಾಭಾವಿಕ ಆಕರ್ಷಣೆ. ನಾನಾ ವಿಧವಾದ ರಾಸಾಯನಿಕ ಆಕರ್ಷಣೆ ರಂಗು ವರ್ಣಗ್ರಾಹಿಯಲ್ಲಿ ಘನದ್ರಾವಣವಾಗುವುದು ಈ ಒಲವಿಗೆ ಕಾರಣವಾಗಿರಬಹುದು. ಒಲವಿನ ಪರಿಣಾಮವಾಗಿ ಬಣ್ಣದಾನ ಒಂದು ಬಹಿರುಷ್ಣಕ ಕ್ರಿಯೆಯಾಗಿರುವುದು ಸಹಜವೆ. ಅದನ್ನು ಸರಳವಾಗಿ ಹೀಗೆ ಸೂಚಿಸಬಹುದು: ದ್ರಾವಣದಲ್ಲಿರುವ ರಂಗು +ರಂಗಿಸದ ಪದಾರ್ಥ(ರಂಗೇರಿದ ಪದಾರ್ಥ+ಉಷ್ಣ. ಆದ್ದರಿಂದಲೇ ತಣ್ಣೀರಿನಲ್ಲಿ ಅದ್ದಿರುವ ಬಟ್ಟಿಗಿಂತ ಬಿಸಿನೀರಿನಲ್ಲಿ ಉನಿಹಾಕಿರುವ ಬಟ್ಟೆ ಬೇಗ ಬಣ್ಣಕಾರಿಕೊಳ್ಳುವುದಾಗಿದೆ. ಎಲ್ಲರ ಅನುಭವವೂ ಇದೆ ಮೇಲಿನ ಸಮೀಕರಣದಿಂದ ಇನ್ನೂ ಒಂದು ವಿಷಯ ಗೊತ್ತಾಗುತ್ತದೆ. ಉನ್ನತೋಷ್ಣತೆಯಲ್ಲೆ ಸಮಾತೋಲ ಸ್ಥಿತಿ ಏರ್ಪಡುವುದರಿಂದ ಪದಾರ್ಥ ನಿಮ್ನೋಷúತೆಯಲ್ಲೆ ಹೆಚ್ಚು ಬಣ್ಣ ಹೀರುವುದು. ಉಷ್ಣತೆ ಏರಿದಂತೆ ಬಣ್ಣದಾನದ ದರ ಗುಣೋತ್ತರ ಪ್ರಮಾಣದಲ್ಲಿ (ಜ್ಯಾಮೆಟ್ರಿಕ್ ಪ್ರಪೋರ್ಶನ್) ಏರಿದರೆ ರಂಗಿನ ಗರಿಷ್ಠ ಅವಶೋಷಣ ಸಮಾಂತರ ಪ್ರಮಾಣದಲ್ಲಿ (ಅರಿತ್‍ಮೆಟಿಕ್ ಪ್ರಪೋರ್ಶನ್) ಇಳಿಯುವುದೆಂದು ಗೊತ್ತಾಗಿದೆ. ಮೇಲಾಗಿ ರಂಗಿನ ಗರಿಷ್ಠ ಅವಶೋಷಣ ಅಗತ್ಯವೆನಿಸುವ ಸಂದರ್ಭಗಳು ವಿರಳ ಮತ್ತು ಅದು ಅಷ್ಟು ಅಪೇಕ್ಷಣೀಯವೂ ಅಲ್ಲ. ಪರಿಣಾಮವಾಗಿ ಇಂದು ಉನ್ನತೋಷ್ಣತೆಯಲ್ಲಿ ಅಲ್ಪಾವಧಿಯಲ್ಲಿ ಬಣ್ಣದಾನ ಮಾಡುವುದು ರೂಢಿಯಾಗಿದೆ. ರಂಗನ್ನು ಒಂದು ಯುಕ್ತ ವಾಹಕದಲ್ಲಿ (ಸಾಮಾನ್ಯವಾಗಿ ನೀರು) ವಿಲೀನಮಾಡಿ ಅಥವಾ ನಿಲಂಬಿಸಿ ವರ್ಣಗ್ರಾಹಿಯ ಸಂಪರ್ಕಕ್ಕೆ ತರುವುದು ಮಾಮೂಲು ಕ್ರಮ. ತತ್‍ಕ್ಷಣ ರಂಗಿನ ಅನೇಕ ಅಣುಗಳು ಪದಾರ್ಥದ ಮೇಲ್ಮೈಗೆ ಅಂಟಿಕೊಳ್ಳುತ್ತವೆ. ಆದರೂ ಅವು ಒಳಮೈಯನ್ನು ಸೇರುವ ತನಕ ಪದಾರ್ಥಕ್ಕೆ ರಂಗೇರದು.

	ರಂಗು ಸಹಾಯಕಗಳು: ಹೆಸರೇ ಹೇಳುವಂತೆ ಇವು ಪದಾರ್ಥಕ್ಕೆ ಯಾವ ಬಣ್ಣವನ್ನೂ ನೀಡವು. ಆದರೆ ಕ್ರಿಯಾವರ್ಧಕಗಳಂತೆ ಬಣ್ಣದಾನದ ದರವನ್ನು ಹೆಚ್ಚು ಕಡಿಮೆ ಮಾಡಬಲ್ಲವು. ಸಾಮಾನ್ಯವಾಗಿ (ಯಾವಾಗಲೂ ಅಲ್ಲ) ಅವುಗಳಿಂದ ರಂಗಿನ ಅಣು ಪ್ರಭಾವಿತವಾಗುತ್ತದೆ. ರಂಗು ಸಹಾಯಕಗಳಲ್ಲಿ ನಾನಾ ಬಗೆ. ಕೆಲವು ನೂಲಿನ ರಚನೆಯನ್ನು ಭೇದಿಸಿ ದಾರಿಮಾಡಿ ರಂಗಿನ ಅಣುಗಳು ಅಥವಾ ಅಣುಸಂಘಟನೆಗಳು ಸರಾಗವಾಗಿ ಒಳಹೊಕ್ಕು ರಂಗು ನಿವೇಶನಗಳ ಸಂಪರ್ಕಕ್ಕೆ ಬರಲು ನೆರವಾಗುತ್ತವೆ. ಇವೇ ಊತಕಾರಕಗಳು (ಸ್ವೆಲ್ಲಿಂಗ್ ಏಜೆಂಟ್ಸ್). ಇನ್ನು ಕೆಲವು ಸಂಘಟಿತ ಅಣುಗಳನ್ನು ವಿಲೀನಮಾಡಿಕೊಳ್ಳುವುದರ ಮೂಲಕ ಅವನ್ನು ಚಿಕ್ಕ ಕಣಗಳಾಗಿ ಒಡೆಯುತ್ತವೆ. ಇವು ವಾಹಕಗಳು, ಸಾಮಾನ್ಯವಾಗಿ ಇವು ನೀರಿನಲ್ಲಿ ಅಲ್ಪದ್ರಾವ್ಯವಾದ ದ್ರಾವಕಗಳು. ಉಂಟಾದ ಸಣ್ಣ ಅಣುಘಟಕಗಳನ್ನು ನೂಲು-ನೀರಿನ ಸಂಧಿ ಸ್ಥಳಕ್ಕೆ ಒಯ್ಯುವುದೂ ಇವುಗಳ ಕೆಲಸವೆ. ಆಗ ನೂಲು ಸಣ್ಣ ಕಣಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಆಗಿಂದಾಗ್ಗೆ ವಾಹಕ ನೂಲನ್ನು ಉಬ್ಬಿಸಿ ಊತಕಾರಕದ ಪಾತ್ರವನ್ನೂ ನಿರ್ವಹಿಸುವುದುಂಟು.

	ರಂಗು ಮಂದಕಗಳು: ಇವೂ ಒಂದು ಬಗೆಯ ರಂಗು ಸಹಾಯಕಗಳು. ಸಾಮಾನ್ಯವಾಗಿ ಆಗ್ರ್ಯಾನಿಕ್ ಅಥವಾ ಇನಾಗ್ರ್ಯಾನಿಕ್ ಲವಣಗಳು. ಬಣ್ಣದಾನದ ದರವನ್ನು ಕಡಿಮೆಮಾಡುವುದು ಇವುಗಳ ಕೆಲಸ. ಆಮ್ಲೀಯ ಸಹಾಯಕದೊಡನೆ ಕಾಪುದ್ರಾವಣವನ್ನು (ಬಫರ್) ಉಂಟುಮಾಡಿ, ಅದರ ಅಯಾನೀಕರಣವನ್ನು ತಗ್ಗಿಸಿ, ರಂಗಿನೊಡನೆ ಕ್ಷಣಿಕ ಸಂಯುಕ್ತಗಳನ್ನು ರೂಪಿಸಿ ಅಥವಾ ರಂಗು ನಿವೇಶನಗಳನ್ನು ಆಕ್ರಮಿಸಿಕೊಂಡು ಅನಂತರ ಆ ಸ್ಧಾನಗಳನ್ನು ರಂಗಿನ ಅಣುಗಳಿಗೆ ನಿಧಾನವಾಗಿ ತೆರವು ಮಾಡಿಕೊಟ್ಟು, ಇವು ಬಣ್ಣ ದಾನದ ದರವನ್ನು ಕುಂಠಿತಗೊಳಿಸಿ ನೆರವಾಗಬಹುದು.

	ಉತ್ತರಕ್ರಿಯಾವರ್ತಿಗಳು (ಆಫ್ಟರ್ ಟ್ರೀಟಿಂಗ್ ಎಜೆಂಟ್ಸ್): ಇವು ಸಾಧಾರಣವಾಗಿ ಲವಣಗಳು ಮತ್ತು ಅಂಟುಗಳು. ಸೆಲ್ಯುಲೋಸ್ ನೂಲುಗಳಿಗೆ ಇವನ್ನು ಪ್ರಯೋಗಿಸುವುದು ವಾಡಿಕೆ. ರಂಗಿಸಿದ ನೂಲುಗಳಿಗೆ ಒಗೆತ, ಬೆವರು, ಓಜೋನ್ ಮತ್ತು ದಹ್ಯಾನಿಲಗಳ ಪರಿಣಾಮಗಳನ್ನು ತಡೆದುಕೊಳ್ಳಲು ಇವು ಸಹಾಯ ಮಾಡುತ್ತವೆ. ಆದರೆ ಇದರಿಂದ ರಂಗಿಸಿದ ನೂಲಿನ ದ್ಯುತಿನಿರೋಧಕ ಸಾಮಥ್ರ್ಯ ಕಡಿಮೆ ಆಗುವುದು ಕಂಡುಬಂದಿದೆ. ಉದಾಹರಣಗೆ ರಂಗಿಸಿದ ನೂಲನ್ನು ತಾಮ್ರದ ಲವಣಗಳಿಂದ ಸಂಸ್ಕರಿಸಿದರೆ ಅದರ ದ್ಯುತಿನಿರೋಧಕ ಸಾಮಥ್ರ್ಯ ವೃದ್ಧಿ ಆಗುತ್ತದೆ. ಅದೇ ತೇವನಿರೋಧಕ ಸಾಮಥ್ರ್ಯವನ್ನು ಹೆಚ್ಚಿಸುವ ಸಲುವಾಗಿ ನಾವು ಪ್ರಯೋಗಿಸುವ ಫಾರ್ಮಾಲ್ಡಿಹೈಡ್-ಯೂರಿಯ ಅಥವಾ ಮೆಲಮೈನ್ ಅಂಟುಗಳಿಂಗ ರಂಗಿಸಿದ ನೂಲಿನ ಸ್ಥಿತಿ ನಿರೋಧಕ ಸಾಮಥ್ರ್ಯ ತಗ್ಗುತ್ತದೆ.

	ಸೆಲ್ಯುಲೋಸ್ ನೂಲುಗಳಿಗೆ ಬಣ್ಣದಾನ: ಹತ್ತಿ ಮತ್ತು ರೇಯಾನುಗಳಿಗೆ ಬಣ್ಣ ಹಾಕಲು ಉಪ್ಪಿನಂಥ ಎಲೆಕ್ಟ್ರೊಲೈಟನ್ನು ಸಹಾಯಕವಾಗಿ ಸೇರಿಸಿರುವ ರಂಗಿನ ದ್ರಾವಣದಲ್ಲಿ ನೆನೆಹಾಕಿ ಅನಂತರ ಅದನ್ನು ಕುದಿಸಲಾಗುವುದು. ಅಣುವಿನಲ್ಲಿರುವ ರಂಗು ನಿವೇಶನಗಳಿಗೂ ಸೆಲ್ಯುಲೋಸಿನ ಹೈಡ್ರಾಕ್ಸಿಲ್ ಪುಂಜಗಳಿಗೂ ಹೈಡ್ರೊಜನ್ ಬಂಧವೇರ್ಪಟ್ಟು ಈ ಒಲವು ಉಂಟಾಗಿರಲು ಸಾಕು. ಇದನ್ನೇ ಸರಳವಾಗಿ ಅಧಿಶೋಷಣ ಎಂದು ಕರೆಯುವುದಾಗಿದೆ. ಇಂಥ ಬಣ್ಣಗಳಿಗೆ ಒಗೆತವನ್ನು ಸಹಿಸುವ ಶಕ್ತಿ ಕನಿಷ್ಠ. ನೂಲಿಗೆ ಬಣ್ಣವನ್ನು ಸರಿಯಾಗಿ ಕುಡಿಸಿದ್ದರೆ, ಅದನ್ನು ಅಂಟುಗಳಿಂದ ಮತ್ತು ತಾಮ್ರದಿಂದ ಸಂಸ್ಕರಿಸಿದಾಗ ಅದರ ದ್ಯುತಿನಿರೋಧಕ ಸಾಮಥ್ರ್ಯ ಅಷ್ಟಾಗಿ ನಷ್ಟವಾಗದೆ, ಒಗೆತ ಸಹಿಸುವ ಶಕ್ತಿಯನ್ನು ವೃದ್ಧಿಪಡಿಸಬಹುದು. ಕೆಲವು ನೇರ ರಂಗುಗಳಲ್ಲಿ ಅಮೈನೊ ಪುಂಜಗಳಂಥ ರಾಸಾಯನಿಕ ಪುಂಜಗಳಿರುವುವು. ಬಣ್ಣದಾನದ ಅನಂತರ ಇವನ್ನು ನೈಟ್ರಸ್ ಆಮ್ಲದ ಪ್ರಯೋಗದಿಂದ (ನೈಟ್ರೊಜನ್ ದ್ವಿಗುಣೀಕರಣ), ತರುವಾಯ ಒಂದು ಫೀನಲ್ ಅಥವಾ ಅಮೀನಿನೊಡನೆ ಸಂಗಮಿಸುವುದರಿಂದ ಮೂಲ ರಂಗಿನ ಅಣುವನ್ನು ಅದಕ್ಕಿಂತ ಇನ್ನೂ ದೊಡ್ಡದಾದ ಮತ್ತು ನೀರಿನಲ್ಲಿ ಇನ್ನೂ ಅದ್ರಾವ್ಯವಾದ ಅಣುಗಳಿಗೆ ಪರಿವರ್ತಿಸಬಹುದು. ಈ ಸಂಸ್ಕರಣದಿಂದ ಉಂಟಾದ ಬಣ್ಣ ಒಗೆತದಿಂದ ಹಾಳಾಗದಿದ್ದರೂ ಸೂರ್ಯ ರಶ್ಮಿಯಿಂದ ಮಾಸಿಹೋಗುವುದಂತೂ ತಪ್ಪದು. ನ್ಯಾಫ್ತಾಲ್ ದ್ರಾವಣದಲ್ಲಿ ನೆನೆಸಿದ ನೆನೆಸಿದ ನೂಲಿಗೆ ಡೈಅಜೊ ಲವಣ (ರಂಗಲ್ಲ) ಪ್ರಯೋಗಿಸುವುದರಿಂದ ನೂಲಿನಲ್ಲಿಯೇ ಅದ್ರಾವ್ಯ ವರ್ಣದ್ರವ್ಯವನ್ನು ಉತ್ಪತ್ತಿಮಾಡುವುದುಂಟು.

	ಸೆಲ್ಯುಲೋಸ್ ನೂಲುಗಳಿಗೆ ವ್ಯಾಟ್ ರಂಗುಗಳಿಂದಲೂ ಬಣ್ಣ ಹಾಕಬಹುದು. ಸಾಮಾನ್ಯವಾಗಿ ಇವು ಅದ್ರಾವ್ಯ ರಂಗುಗಳು. ಆದಾಗ್ಯೂ ಕ್ಷಾರಗಳ ಮತ್ತು ಅಪಕರ್ಷಣಕಾರಿಗಳ ಪ್ರಭಾವದಿಂದ ಅವನ್ನು ನೀರಿನಲ್ಲಿ ದ್ರಾವ್ಯವಾಗುವಂತೆ ಮಾಡಿದರೆ ಆಗ ಅವು ವಿವಿಧ ನೂಲುಗಳಿಗೆ ಒಲವನ್ನು ತೋರುತ್ತವೆ. ಬಣ್ಣದಾನದ ಅನಂತರ ವ್ಯಾಟ್‍ರಂಗುಗಳು ವಾಯುವಿನ ಅಥವಾ ಉತ್ಕರ್ಷಣಕಾರಿಗಳ ಸಂಪರ್ಕದಲ್ಲಿ ತಮ್ಮ ಹಿಂದಿನ ಅದ್ರಾವ್ಯಸ್ಥಿತಿಗೆ ವಾಪಸಾಗುತ್ತವೆ. ಇಂಡಿಗೋ ಒಂದು ವ್ಯಾಟ್ ರಂಗು. ಅದಕ್ಕೆ ನೂಲಿನ ಒಲವಿಲ್ಲ. ನೂಲಿಗೆ ಅದರ ಕ್ಷಾರೀಯ ಅಪಕರ್ಷಿತ ದ್ರಾವಣವನ್ನು ಕುಡಿಸಲು ಅದನ್ನು ಪದೇ ಪದೇ ನೆನೆಸಿ ಉತ್ಕರ್ಪಿಸಿದರೆ ಮಾತ್ರ ಸಾಧ್ಯ. ಸರಿಯಾಗಿ ಪ್ರಯೋಗಿಸಿದ್ದ ಪಕ್ಷದಲ್ಲಿ ವ್ಯಾಟ್‍ರಂಗುಗಳು ಒಗೆತ, ಚಲುವೆ ಕಾರಿಗಳು, ಸೂರ್ಯರಶ್ಮಿ ಮತ್ತು ಬೆವರುಗಳಿಂದ ಮಾಸಿ ಹೋಗುವುದಿಲ್ಲ.

	ನೂಲುಪಟುವಾದ ರಂಗುಗಳಿಂದಲೂ ಸೆಲ್ಯುಲೋಸಿಗೆ ಬಣ್ಣಹಾಕಬಹುದು. ಇವು ನೂಲಿನೊಡನೆ ಈಥರ್ ಅಥವಾ ಎಸ್ಟರ್ ಬಂಧಗಳನ್ನು ಏರ್ಪಡಿಸಿಕೊಂಡು. ಅದನ್ನು ಬೇರೊಂದು ಸಂಯುಕ್ತಕ್ಕೆ ಪರಿವರ್ತಿಸುತ್ತವೆ. ಸೆಲ್ಯುಲೋಸಿಗೆ ಗಂಧಕಾನ್ವಿತ ರಂಗುಗಳನ್ನು ಪ್ರಯೋಗಿಸಲು ಸೋಡಿಯಮ್ ಸಲ್ಫೈಡ್ ದ್ರಾವಣವನ್ನು ಉಪಯೋಗಿಸುತ್ತಾರೆ. ಇದರಿಂದ, ಒಗೆತ ಸಹಿಸುವ ಚಲುವೆಕಾರಿಗಳಿಗೆ ಸುಲಭವಾಗಿ ಮಣಿಯುವ ತಿಳಿ ಬಣ್ಣಗಳು ಉಂಟಾಗುತ್ತವೆ. ಕಾರ್ಮಿಕರು ಮತ್ತು ಆಟಗಾರರು ಬಳಸುವ ಬಟ್ಟೆಗಳಿಗೆ ಇವು ಉಪಯುಕ್ತ. ಸೆಲ್ಯುಲೋಸಿಗೆ ಪ್ರತ್ಯಾಮ್ಲೀಯ ರಂಗುಗಳನ್ನು ಹಚ್ಚಬೇಕಾದರೆ ಅದನ್ನು ಪೂರ್ವಭಾವಿಯಾಗಿ ಸಂಶ್ಲೇಷಿತ ಟ್ಯಾನಿನುಗಳು ಅಥವಾ ಟ್ಯಾನಿಕ್ ಆಮ್ಲ ಮತ್ತು ಟಾರ್ಟಾರ್ ಎಮಟಿಕ್ ವರ್ಣಸ್ಥಾಪಕಗಳಿಂದ ಸಂಸ್ಕರಿಸಿರಬೇಕು. ಆಗ ರಂಗು ಮತ್ತು ಸ್ಧಾಪಕಗಳು ಸೇರಿ ವರ್ಣದ್ರವ್ಯದ ಒಂದು ಕೊಳ್ಳ (ಲೇಕ್) ಏರ್ಪಟ್ಟು ನೂಲಿಗೆ ರಂಗೇರುವುದು. ಈ ಬಗೆಯ ಬಣ್ಣದಾನದಲ್ಲಿ ಸೆಲ್ಯುಲೋಸ್ ಕೇವಲ ವರ್ಣಗ್ರಾಹಿಯಂತೆ ವರ್ತಿಸುವುದು. ಇಂಥ ಬಣ್ಣ ಎದು ಕಾಣುವುದಾದರೂ ಇದರ ದ್ಯುತಿನಿರೋಧಕ ಸಾಮಥ್ರ್ಯ ಕಡಿಮೆ. ಈ ಕಾರಣದಿಂದ ಹತ್ತಿಬಟ್ಟೆಗಳಿಗೆ ಪ್ರತ್ಯಾಮ್ಲೀಯ ರಂಗುಗಳನ್ನು ಹಾಕುವುದು ಕ್ರಮೇಣ ಅಪರೂಪವಾಗುತ್ತಿದೆ.

	ಪ್ರಾಣಿನೂಲುಗಳಿಗೆ ಬಣ್ಣದಾನ: ನೂಲಿನಲ್ಲಿರುವ ಪಟುವಾದ ಧನಾವಿಷ್ಟ ಪುಂಜಗಳು ಮತ್ತು ಅನಯಾನಿಕ ರಂಗುಗಳಲ್ಲಿರುವ ಋಣಾವಿಷ್ಟ ಬಣ್ಣ ಪುಂಜಗಳ ನಡುವೆ ಲವಣ ರೂಪಣೆಯಾಗಿ ಉಣ್ಣೆ, ರೇಷ್ಮೆ ಮತ್ತು ತುಪ್ಪುಳುಗಳಿಗೆ ರಂಗುಗಳು ಕಚ್ಚುತ್ತವೆ. ಜಮಖಾನೆಗಳು ಫೆಲ್ಟ್‍ಟೋಪಿಗಳು ಮೊದಲಾದವುಗಳಲ್ಲಿ ಬಣ್ಣ ಸಮವಾಗಿ ಹಂಚಿಕೆಯಾಗಿರುವುದು ಮುಖ್ಯ. ಒಗೆದಾಗ ಬಣ್ಣ ಸ್ಥಿರವಾಗಿರಬೇಕೆಂಬುದು ಗೌಣ, ಇಂಥ ಸಂದರ್ಭಗಳಲ್ಲಿ ಹೆಚ್ಚು ಪರಿಮಾಣ ಒಂದು ಪ್ರಬಲ ಆಮ್ಲದ ನೆರವಿನಿಂದ ಬಣ್ಣ ಕೆಂದುವಂತೆ ಮಾಡುತ್ತಾರೆ. ಇವು ಮಟ್ಟಸರಂಗುಗಳು (ಲೆವಲ್‍ಡೈಸ್). ಗಿರಣಿ (ಮಿಲ್ಲಿಂಗ್) ರಂಗುಗಳಿಗೆ ಹೆಚ್ಚು ಆಮ್ಲ ಬಳಸಬೇಕಾಗಿಲ್ಲ. ಇವು ಒಗೆದರೂ ಮಾಸವು, ಕಂಬಳಿಗಳಿಗೆ ಮತ್ತು ಸ್ವೆಟರುಗಳಿಗೆ ಇವನ್ನು ಬಳಸುವುದು ವಾಡಿಕೆ. ಉಣ್ಣೆಗೆ ಸ್ಥಿರವಾದ ತಿಳಿ ಬಣ್ಣಗಳನ್ನು ಕೊಡಬೇಕಾದಾಗ ಕ್ರೋಮ್ (ವರ್ಣಸ್ಥಾಪಕ) ರಂಗುಗಳನ್ನು ಉಪಯೋಗಿಸುವರು. ಎದ್ದುಕಾಣುವ ಸ್ಥಿರ ಬಣ್ಣಗಳು ಬರಬೇಕಾದರೆ ವ್ಯಾಟ್‍ರಂಗುಗಳು ಮತ್ತು ವ್ಯಾಟ್ ಎಸ್ಟರಗಳು ಅಗತ್ಯ. ಇವನ್ನು ಸೆಲ್ಯುಲೋಸಿಗೆ ಹಚ್ಚಿದಂತೆಯೇ ಉಣ್ಣೆಗೂ ಹಚ್ಚಬಹುದಾದರೂ ನಿಮ್ನೋಷ್ಣತೆ, ಅಲ್ಪ ಕ್ಷಾರೀಯತೆ ಮತ್ತು ಹೆಚ್ಚು ಪರಿಮಾಣ ಅಪಕರ್ಷಣಕಾರಿ (ಸೋಡಿಯಮ್ ಹೈಡ್ರೊಸಲ್ಪೈಟ್) ಅಪೇಕ್ಷಣೀಯ. ಇತ್ತೀಚೆಗೆ ಉಣ್ಣೆಗೆ ನೂಲಪಟು ರಂಗುಗಳನ್ನು ಅಭಿವೃದ್ಧಿಪಡಿಸಲಾಗಿದೆ.

	ಮಾನವನಿರ್ಮಿತ ನೂಲುಗಳಿಗೆ ಬಣ್ಣದಾನ: ಸಾಮಾನ್ಯವಾಗಿ ಸೆಲ್ಯುಲೋಸ್ ಅಸಿಟೇಟನ್ನು ರಂಗಿಸಲು ದ್ರಾವಕ ರಂಗುಗಳ (ನಿಲಂಬಿತ ಅಸಿಟೇಟ್) ಜಲೀಯ ನಿಲಂಬನದಲ್ಲಿ ಮುಳುಗಿಸುವುದು ರೂಢಿ. ಇವು ನೀರಿನಿಂದ ನೀರುನೂಲುಗಳ ಅಂತರ ಮೇಲ್ಮೈಯನ್ನು ತಲಪಿ ಅಲ್ಲಿಂದ ನೂಲಿನೊಳಕ್ಕೆ ನುಗ್ಗಿ ಅದರಲ್ಲಿ ಘನದ್ರಾವಣಗಳಾಗುವುವೆಂದು ಭಾವಿಸಲಾಗಿದೆ. ಸೆಲ್ಯುಲೋಸನ್ನು ರಂಗಿಸುವಾಗ, ನೈಟ್ರೊಜನ್ನನ್ನು ದ್ವಿಗುಣೀಕರಿಸಿ ಅನಂತರ ರಂಗನ್ನು ಅಭಿವೃದ್ಧಿ ಪಡಿಸಿದಂತೆ, ಇಲ್ಲೂ ಹೆಚ್ಚು ಕಡಿಮೆ ಅದೇ ತಂತ್ರವನ್ನು ಹೂಡಬಹುದು. ಅಂದರೆ ನೀರಿನಲ್ಲಿ ಅದ್ರಾವ್ಯವಾದ ರಂಗು ಪೂರ್ವಜಗಳನ್ನು (ಪ್ರಿಕರ್ಸರ್ಸ್) ಸೆಲ್ಯುಲೋಸ್ ಅಸಿಟೇಟಿಗೆ ಪ್ರಯೋಗಿಸುವರು. ಸೋಡಿಯಮ್ ನೈಟ್ರೈಟ್ ಮತ್ತು ಆಮ್ಲದಿಂದ ನೈಟ್ರೋಜನ್ ದ್ವಿಗುಣೀಕರಣವನ್ನು ಸಾಧಿಸಲಾಗುವುದು. ನೂಲಿನೊಳಗೆ ಬಣ್ಣವನ್ನು ಒತ್ತರಿಸಲು (- ಹೈಡ್ರಾಕ್ಸಿನ್ಯಾಫ್ತೋಯಿಕ್ ಆಮ್ಲ ಅಥವಾ ಹೈಡ್ರಾಕ್ಸ ನೀಲುಗಳನ್ನು ಸೇರಿಸುತ್ತಾರೆ. ಆಲ್ಕೊಹಾಲ್-ನೀರು ಅಥವಾ ಫಾರ್ಮಿಕ್ ಆಮ್ಲ-ನೀರು ಮಿಶ್ರಣದಲ್ಲಿ ದ್ರಾವಣವಾಗಿರುವ ಆಮ್ಲೀಯ ರಂಗುಗಳಿಂದಲೂ ಸೆಲ್ಯುಲೆಸ್ ಅಸಿಟೇಟಿಗೆ ಬಣ್ಣದಾನ ಮಾಡಬಹುದು.

	ಉಣ್ಣೆಯನ್ನು ರಂಗಿಸಿದಂತೆಯೇ ಪಾಲಿಅಮೈಡ್ (ನೈಲಾನ್) ನೂಲುಗಳನ್ನೂ ಆಮ್ಲೀಯ, ಲೋಹಾನ್ವಿತ ಆಮ್ಲೀಯ ತಟಸ್ಥ ಲೋಹಾನ್ವಿತ, ನೂಲುಪಟು ಮತ್ತು ಸ್ಥಾಪಕ ರಂಗುಗಳಿಂದ ರಂಗಿಸಬಹುದು. ವ್ಯಾಟ್ ರಂಗುಗಳಾದರೆ ರಂಗಿಸುವ ಕ್ರಮ ಹತ್ತಿಗೆ ಮಾಡಿದಂತೆ. ಆದರೆ ಉನ್ನತೋಷ್ಣತೆ ಅಗತ್ಯ, ಆರ್ಥೋಫೀನೈಲ್ ಫೀನಾಲಿನಂಥ ಊತಕಾರಕಗಳಿರಬೇಕು. ನೈಲಾನ್ ಒಳ ಉಡುಪುಗಳಾದರೆ ದ್ಯುತಿನಿರೋಧಕ ಮತ್ತು ಒಗೆತ ಸಹಿಸುವ ಲಕ್ಷಣಗಳು ಅಷ್ಟು ಮುಖ್ಯವಲ್ಲ. ಆದ್ದರಿಂದ ಅವುಗಳಿಗೆ ನಿಲಂಬಿತ ರಂಗುಗಳನ್ನು ಪ್ರಯೋಗಿಸುವುದು ವಾಡಿಕೆ.

	ಅಕ್ರಿಲಿಕ್ ನೂಲುಗಳಾದ ಒರ್ಲಾನ್ ಮತ್ತು ಅಕ್ರಿಲಾನ್-16ಗಳಿಗೆ ಉನ್ನತೋಷ್ಣತೆಗಳಲ್ಲಿ ನಿಲಂಬಿತ (ಅಸಿಟೇಟ್) ರಂಗುಗಳಿಂದ ತಿಳಿ ಬಣ್ಣಗಳನ್ನು ಕೊಡುವುದು ರೂಢಿ. ಅಕ್ರಿಲಿಕುಗಳು ತಮ್ಮ ಋಣಾವೇಶದ ಫಲವಾಗಿ ಕೇಟಯಾನಿಕ್ (ಧನಾವಿಷ್ಟ) ರಂಗುಗಳಿಂದ ದಟ್ಟ ಬಣ್ಣಗಳನ್ನು ಪಡೆಯುತ್ತವೆ. ಏಕಕಾಲದಲ್ಲಿ ತಾಮ್ರದ ಲವಣಗಳನ್ನೂ ಅಪಕರ್ಷಣಕಾರಿಗಳಾದ ಲವಣಗಳನ್ನೂ ಉಪಯೋಗಿಸುವುದರಿಂದ ಅಕ್ರಿಲಿಕುಗಳಿಗೆ ಅನಯಾನಿಕ್‍ರಂಗುಗಳನ್ನೂ ಪ್ರಯೋಗಿಸಬಹುದು. ಇದಕ್ಕೆ ಕ್ಯುಪ್ರಸ್ ಅಯಾನ್ ವಿಧಾನ ಎಂದು ಹೆಸರು. ಋಣಾವಿಷ್ಟರಂಗಿನ ಅಣು ಮತ್ತು ಋಣಾವಿಷ್ಟ ನೂಲಿನ ಅಣುಗಳ ನಡುವೆ ಧನಾವಿಷ್ಟ ಕ್ಯುಪ್ರಸ್ ಅಯಾನ್ ಕೊಂಡಿಯಂತಿರುವುದು.

	ಮಾರ್ಪಡಿಸಿದ ಅಕ್ರಿಲಿಕುಗಳಾದ ಅಕ್ರಿಲಾನ್, ಜೆಫ್ರಾನ್, ಕ್ರೆಸ್ಲಾನ್ ಇತ್ಯಾದಿಗಳು ನಿಲಂಬಿತ, ಪ್ರತ್ಯಾಮ್ಲೀಯ ಮತ್ತು ನೈಸರ್ಗಿಕ ನೂಲುಗಳಿಗೆ ಸಾಮಾನ್ಯವಾಗಿ ಹಾಕುವ ರಂಗುಗಳಿಗೆ ಸುಲಭವಾಗಿ ಮಣಿಯುತ್ತವೆ. ಪ್ರತ್ಯಾಮ್ಲೀಯ ಪದಾರ್ಥಗಳನ್ನು ಉಣಿಸುವುದರಿಂದ ಅನಯಾನಿಕ್ ರಂಗುಗಳಿಗೆ ರಂಗು ನಿವೇಶನಗಳನ್ನು ಒದಗಿಸಿದಂತಾಗುತ್ತದೆ. ನೂಲನ್ನು ಮಾರ್ಪಡಿಸುವುದು ಅಂದರೆ ಇದೇ ಅರ್ಥ.

	ಡೆಕ್ರಾನ್, ಟೆರಿಲಿನ್ ಮತ್ತು ಕೊಡಲುಗಳು ಪಾಲಿಎಸ್ಟರ್ ನೂಲುಗಳು. ಇವುಗಳಿಗೆ ನಿಲಂಬಿತ ರಂಗುಗಳಿಂದ ಉನ್ನತೋಷ್ಣತೆಯಲ್ಲಿ ಬಣ್ಣಹಾಕುತ್ತಾರೆ ನಿಮ್ನೋಷ್ಣತೆಗಳಲ್ಲಾದರೆ ಊತಕಾರಕಗಳು ಮತ್ತು ಸ್ಯಾಲಿಸಿಲಿಕ್ ಆಮ್ಲ ಅಥವಾ ಕ್ಲೋರೀನೀಕರಿಸಿದ ದ್ರಾವಕಗಳಂಥ ವಾಹಕಗಳು ಆವಶ್ಯಕ, ಉನ್ನತೋಷ್ಣತೆ ಮತ್ತು ಒತ್ತಡಗಳಲ್ಲಿ ಲ್ಯೂಕೊ ವ್ಯಾಟ್‍ಎಸ್ಟರುಗಳೂ ಇವುಗಳಿಗೆ ಬಣ್ಣದಾನ ಮಾಡುತ್ತವೆ. ಇಲ್ಲವೇ ಈ ರಂಗುಗಳನ್ನು ಹಚ್ಚಿ ಒಣಗಿಸಿ ಬಿಸಿಹೊಗೆ ಕೊಳವೆಯ ಮೂಲಕವೊ 205(ಅ ಉಷ್ಣತೆಯಲ್ಲಿರುವ ಬಿಸಿ ಉರುಳೆಗಳ ಮೇಲೆ ಹಾಯಿಸಿದರೂ ನಿರೀಕ್ಷಿತ ಫಲ ದೊರೆಯುತ್ತದೆ. ಇದಕ್ಕೆ ಥರ್ಮೊಸಾಲ್ ವಿಧಾನ ಎಂದು ಹೆಸರು, ಪಾಲಿ ಇಥಲೀನ್ ನೂಲುಗಳಿಗೆ ಬಣ್ಣದಾನ ಮಾಡಲು ಇಥಲೀನ್ ಗ್ಲೈಕಾಲ್, ನೀರು ಮತ್ತು ಟಾಲೀನುಗಳ ಮಿಶ್ರಣದಲ್ಲಿ ವಿಲೀನಗೊಳಿಸಿರುವ ಆಯ್ದ ದ್ರಾವಕ-ದ್ರಾವ್ಯ ರಂಗುಗಳು ಬೇಕು. ವರ್ಣದ್ರವ್ಯದಿಂದ ಬಣ್ಣ ದಾನ: ಯುಕ್ತ ಬಂಧಕದಲ್ಲಿ ನಿಲಂಬಿಸಲ್ಪಟ್ಟಿರುವ ವರ್ಣದ್ರವ್ಯಗಳಿಂದ ಎಲ್ಲ ಬಗೆಯ ನೂಲುಗಳಿಗೂ ಬಣ್ಣದಾನ ಮಾಡಬಹುದು. ಇಲ್ಲಿ ಒಲವಿನ ಪ್ರಶ್ನೆ ಇಲ್ಲ. ನಿಜ ಬಣ್ಣದಾನ ನಡೆಯದು. ಇದರಿಂದ ನಾನಾಬಣ್ಣ ಛಾಯೆಗಳನ್ನು ಸಾಧಿಸಬಹುದು. ಆದರೆ ಬಂಧಕ ಕೆಲವು ಸಂದರ್ಭಗಳಲ್ಲಿ ಪದಾರ್ಥವನ್ನು ಗಡಸು ಮಾಡುತ್ತದೆ. ಇದೊಂದು ನ್ಯೂನತೆ.

	ಡೋಪ್ ಅಥವಾ ಸಿನ್ ಬಣ್ಣದಾನ : ನೈಲಾನ್, ಡೆಕ್ರಾನ್, ಡೈನೆಲ್ ನೂಲುಗಳನ್ನು ಹೊಸೆದು ದ್ರವಿಸಿ ಬಂದ ರಾಶಿಗೇ ಬಣ್ಣವಿಕ್ಕುವುದು ಇಲ್ಲಿಯ ಕ್ರಮ. ಬಣ್ಣ ಪಡೆದ ದ್ರವವನ್ನು ತಂತುಕಗಳ ಮೂಲಕ ಹೊರಚೆಲ್ಲಿದಾಗ ಧಾರೆಗಳು ಹೆಪ್ಪುಗಟ್ಟುತ್ತವೆ. ಇವನ್ನು ಸಂಗ್ರಹಿಸಿ ಬಟ್ಟೆಯನ್ನು ಹೆಣೆಯುತ್ತಾರೆ. ಸೆಲ್ಯುಲೋಸ್ ಅಸಿಟೇಟ್, ಅಕ್ರಿಲಿಕುಗಳು ಮತ್ತು ವಿಸ್ಕೋಸ್ ರೇಯಾನುಗಳ ದ್ರಾವಣಗಳನ್ನು ಬಿಸಿ ಗಾಳಿಗೊ ಗರಣೆಗಟ್ಟಿಸುವ ನೀರಿನ ಬಾತ್‍ಗೊ ಧಾರಾಕಾರವಾಗಿ ಹೊರಚೆಲ್ಲಿ ಈ ನೂಲುಗಳನ್ನು ತಯಾರಿಸುತ್ತಾರಷ್ಟೆ. ಈ ಡೋಪುಗಳನ್ನು ಹೊರ ಚೆಲ್ಲುವುದಕ್ಕೆ ಮುಂಚೆಯೇ ಬಣ್ಣಕೊಟ್ಟು, ಅನಂತರ ಗರಣೆಗಟ್ಟಿಸಿ, ಬಂದ ನೂಲನ್ನು ಕಲೆ ಹಾಕಿ ಬಟ್ಟೆಯಾಗಿ ನೇಯುವರು.

	ಬಣ್ಣದಾನದ ಯಾಂತ್ರಿಕ ವಿವರಗಳು: ಬಟ್ಟೆಗೆ ಬಣ್ಣದಾನ ಮಾಡುವ ವಿಧಾನಗಳಲ್ಲಿ ಮೂಲಭೂತವಾದ ಎರಡು ಬಗೆಗಳಿವೆ. ಬಣ್ಣ ಪಡೆಯಲಿರುವ ಪದಾರ್ಥ ಸ್ಥಿರವಾಗಿದ್ದು ಅದರ ಮೂಲಕ ರಂಗಿನ ದ್ರಾವಣ ಹಾಯಿಸುವುದು ಒಂದು ಕ್ರಮ. ದ್ರಾವಣ ಅಚಲವಾಗಿದ್ದು ಅದರ ಮೂಲಕ ಪದಾರ್ಥ ಹಾಯಿಸುವುದು ಇನ್ನೊಂದು ಕ್ರಮ. ತೊಟ್ಟಿಯಲ್ಲಿ (ಇವುಗಳಿಗೆ ಕೀರ್‍ಗಳೆಂದು ಹೆಸರು) ನೂಲನ್ನು ಅಳ್ಳಕವಾಗಿ ಪೇರಿಸಿ ಬಿಸಿಯಾದ ರಂಗಿನ ದ್ರಾವಣವನ್ನು ಅದರ ಮೂಲಕ ಹಾಯಿಸುತ್ತಾರೆ. ದ್ರಾವಣದ ಉಷ್ಣತೆ ಅದರ ಕುದಿಬಿಂದುವನ್ನು ಮುಟ್ಟಬಹುದು. ನೂಲು ಸಹಿಸಬಲ್ಲುದಾದರೆ ಒತ್ತಡಲ್ಲಿ 270oಅ ಉಷ್ಣತೆಯಿದ್ದರೂ ಬಾಧಕವಿಲ್ಲ. ಸರಂಧ್ರ ಉರುಳೆಯೊಂದಕ್ಕೆ ಪದಾರ್ಥ ಸುತ್ತಿ, ಅದನ್ನು ಇಡಿಯಾಗಿ ಒತ್ತಡ ಕೋಶದಲ್ಲಿಟ್ಟು 135 oಅ ಮೀರಿದ ಉಷ್ಣತೆಯಲ್ಲಿರುವ ರಂಗಿನ ದ್ರಾವಣವನ್ನು ಪದಾರ್ಥದ ಮೂಲಕ ರೇಚಿಸುತ್ತಾರೆ.

	ನಿರಂತರ ಬಣ್ಣದಾನ ಕ್ರಮದಲ್ಲಿ ಬಟ್ಟೆಗೆ ರಂಗನ್ನು ಉಣಿಸಿ ಅದನ್ನು ಕ್ರಮವಾಗಿ ಸ್ಫುಟೀಕರಣ, ಮಾರ್ಜನ ಮತ್ತು ಶುಷ್ಕಕಾರ ವಿಭಾಗಗಳ ಮೂಲಕ ಹಾಯಿಸಿ ಕೊನೆಯಲ್ಲಿ ಒಂದು ಉರುಳೆಗೆ ಸುತ್ತಿಕೊಳ್ಳುವಂತೆ ಮಾಡಿರುತ್ತಾರೆ. ಇನ್ನೊಂದು ಕ್ರಮದಲ್ಲಿ ರಂಗಿನಿಂದ ಪರ್ಯಾಪ್ತವಾದ ಪದಾರ್ಥವನ್ನು ದ್ರವಿತ ವುಡ್ಸ್‍ಮಿಶ್ರಲೋಹ ಅಥವಾ ಬಿಸಿ ಎಣ್ಣೆಯ ಮೂಲಕ ಹಾಯಿಸಿ ಸ್ಫುಟೀಕರಿಸುವುದುಂಟು.

	ಒತ್ತೆಹಬೆ ವ್ಯವಸ್ಥೆಯಲ್ಲಿ ಹಲವು ಉರುಳೆಗಳಿವೆ. ಪದಾರ್ಥಕ್ಕೆ ರಂಗು ಮತ್ತಿತರ ಅಗತ್ಯ ರಾಸಾಯನಿಕಗಳನ್ನು ಹಚ್ಚುವುದು ಇವುಗಳ ಕೆಲಸ. ಹಬೆಕೋಶದ ಮೂಲಕ ಪದೇ ಪದೇ ಹಾಯಿಸುವುದರಿಂದ ರಂಗು ಸ್ಫುಟಗೊಳ್ಳುವುದು. ಒತ್ತೆ ಉರುಳೆ ವ್ಯವಸ್ಥೆಯ ಪ್ರಕಾರ ಒಲೆಯಲ್ಲಿ ರಂಗಿನ ದ್ರಾವಣದಿಂದ ಪರ್ಯಾಪ್ತಗೊಳಿಸಿರುವ ಪದಾರ್ಥದ ದೊಡ್ಡ ಉಂಡೆ ನೂಲಿಗೆ ರಂಗು ಹಿಡಿಯುವ ತನಕ ನಿಧಾನವಾಗಿ ತಿರುಗುತ್ತಿರುವುದು. ಜಿಗ್ ಯಂತ್ರದಲ್ಲಾದರೆ ಪದಾರ್ಥ ಒಂದು ಉರುಳೆಯಿಂದ ಮತ್ತೊಂದಕ್ಕೆ ಸುತ್ತಿಕೊಳ್ಳುತ್ತ ಮತ್ತು ಬಿಚ್ಚಿಕೊಳ್ಳುತ್ತ ರಂಗಿನ ದ್ರಾವಣದಲ್ಲಿ ಹಿಂದಕ್ಕೆ ಮುಂದಕ್ಕೆ ಓಡಾಡುತ್ತಿರುವುದರಿಂದ ಬಣ್ಣದಾನ ಚೊಕ್ಕವಾಗಿ ಜರಗುತ್ತದೆ. ಬೆಕ್ ಯಾಂತ್ರಿಕ ವಿನ್ಯಾಸದಲ್ಲಿ, ರಂಗಿನ ದ್ರಾವಣದಿಂದ ನಿರಂತರ ಎಳೆಗಳಾಗಿ ಹೊರಬೀಳುವ ಪದಾರ್ಥವನ್ನು ಮೊಟ್ಟೆ ಆಕಾರದ ರೀಲು ಮತ್ತು ದ್ರಾವಣದೊಳಕ್ಕೆ ಎಳೆದುಕೊಂಡು ಜಡೆಯಾಗಿ ಹೆಣೆಯುತ್ತದೆ. ಬಣ್ಣದಾನ ಪೂರ್ತಿಯಾಗುವ ತನಕ ಇದು ಮುಂದುವರಿಯುತ್ತದೆ.

	ಯಾವುದೇ ಲೋಹಕ್ಕೆ, ಉದಾಹರಣೆಗೆ ಅಲ್ಯೂಮಿನಿಯಮಿಗೆ, ಬಣ್ಣದಾನ ಹೇಗೆ ಮಾಡುವರೆಂಬುದನ್ನು ಈಗ ಪರಿಶೀಲಿಸೋಣ. ಮೊದಲು ಲೋಹದ ಮೇಲೆ ವಿದ್ಯುದ್ವಿಧಾನದಿಂದ ಅಲ್ಯೂಮಿನಿಯಮ್ ಆಕ್ಸೈಡಿನ ಪದರ ರೂಪಿಸಲಾಗುವುದು. ಇದಕ್ಕೆ ಆನೋಡೀಕರಣ ಎಂದು ಹೆಸರು. ಬಟ್ಟೆಗೆ ಬಣ್ಣ ತರಿಸುವ ರಂಗುಗಳೆಲ್ಲವೂ ಆನೋಡೀಕರಿಸಿದ ಅಲ್ಯೂಮಿನಿಯಮ್ಮಿಗೂ ಬಣ್ಣದಾನ ಮಾಡುತ್ತವೆ. ಪ್ರಾಪ್ತವಾಗುವ ಬಣ್ಣಗಳ ಮಾರ್ಜನ ಮತ್ತು ದ್ಯುತಿನಿರೋಧಕ ಸಾಮಥ್ರ್ಯ ಅತಿಶಯ. ಲೋಹಕ್ಕೆ ಬಣ್ಣ ಪ್ರಾಪ್ತವಾಗಲು ಆಕ್ಸೈಡಿನ ಪದರ ರಂಗಿನ ಅಣುಗಳೊಡನೆ ಲವಣಗಳನ್ನು ಉಂಟುಮಾಡುವುದು ಕಾರಣವೆಂದು ಹಿಂದೆ ನಂಬಲಾಗಿತ್ತು. ಆದರೆ ಲವಣ ಜನಕ ಪುಂಜಗಳೇ ಇಲ್ಲದಿರುವ ರಂಗುಗಳೂ ಆನೋಡೀಕರಿಸಿದ ಅಲ್ಯೂಮಿನಿಯಮ್ಮಿಗೆ ಬಣ್ಣದಾನ ಮಾಡುವುದುಂಟು. ಹಾಗಾದರೆ ಬಣ್ಣದಾನದ ಕ್ರಿಯಾತಂತ್ರ ಬೇರೆ ಆಗಿರಬೇಕು. ಪ್ರಚಲಿತ ಸಿದ್ಧಾಂತದ ಪ್ರಕಾರ, ಲೋಹದ ಮೈಮೇಲೆ ಶಂಕ್ವಾಕಾರದ ಕೊಳ್ಳಗಳುಂಟು. ರಂಗಿನ ಅಣುಗಳು ಅದರಲ್ಲಿ ಬಿದ್ದು ಸೆರೆಹಿಡಿಯಲ್ಪಡುವುವು. ಅನಂತರ ನೀರಿನಲ್ಲಿ ಅಥವಾ ಲವಣಗಳ ದ್ರಾವಣಗಳೊಡನೆ ಕುದಿಸಿದಾಗ ಆಕ್ಸೈಡಿನ ಅಣುಗಳು ಜಲಸಂಯೋಜಿತವಾಗಿ ಬೆಳೆಯುತ್ತವೆ. ಇದರಿಂದ ಕೊಳ್ಳಗಳು ಕಿರಿದಾಗಿ ಬಾಯಿ ಮುಚ್ಚಿಕೊಳ್ಳುವುದರಿಂದ ರಂಗಿನ ಅಣುಗಳು ಹೊರಬೀಳಲಾರದೆ ಅಲ್ಲೇ ಬಂಧಿತವಾಗುವುವು.

	ಮರ : ನೀರು, ಇತರ ದ್ರಾವಕಗಳು ಮತ್ತು ಮೆರುಗೆಣ್ಣೆಗಳಲ್ಲಿ ನಿಲಂಬಿಸಲಾಗಿರುವ ವರ್ಣದ್ರವ್ಯಗಳಿಂದ ಅಥವಾ ವಿಲೀನಮಾಡಲಾಗಿರುವ ರಂಗುಗಳಿಂದ ಮರಕ್ಕೆ ಬಣ್ಣದಾನ ಮಾಡುವುದು ಪದ್ಧತಿ. ಇದರ ಪ್ರಯುಕ್ತ ಚದರ ಸೆಂಮೀಗೆ 7 ಕೆಜಿಗಳಷ್ಟು ಒತ್ತಡ ಮತ್ತು ಉನ್ನತೋಷ್ಣತೆಗಳು ಆವಶ್ಯಕ. ಆಗ ತಾನೆ ಕಡಿದ ಮರಗಳಾದರೆ ರಂಗಿನ ದ್ರಾವಣವನ್ನು ಲಾಂಬಿಯ ಮೂಲಕ ಹಾಯಿಸುವರು. ಆಗ ರಂಗು ಮರದಲ್ಲಿದ್ದ ಜೀವರಸ ಮತ್ತು ತೇವಾಂಶಗಳನ್ನು ಪಲ್ಲಟಿಸಿ ನೆಲೆನಿಲ್ಲುವುದು. ಆಲ್ಕೊಹಾಲ್ ಪಾನೀಯಗಳನ್ನು ತುಂಬಿರುವ ಸೀಸೆಗಳಿಗೆ ವಿಶೇಷ ರೀತಿಯ ಬಿರಡೆಗಳನ್ನು ಹಾಕಿರುತ್ತಾರೆ. ಕಾರ್ಕಿನ ಬಿರಡೆಗೆ ಮರದ ಹಲ್ಲೆಯನ್ನು ಬೆಸೆದಿರುವರು. ಇಂಥ ಮರಕ್ಕೆ ಗಂಧಕಾನ್ವಿತ ರಂಗುಗಳಿಂತ ಬಣ್ಣಹಾಕಿರಬೇಕು. ಇಲ್ಲದಿದ್ದರೆ ಆಲ್ಕೊಹಾಲ್ ಅದರೊಡನೆ ವರ್ತಿಸದೆ ಬಿಡದು.

	ತೊಗಲು: ವ್ಯಾಟ್ ಮತ್ತು ನ್ಯಾಫ್ತಾಲ್ ರಂಗುಗಳನ್ನು ಬಿಟ್ಟು, ಉಳಿದ ಎಲ್ಲ ಹತ್ತಿ ಮತ್ತು ಉಣ್ಣೆ ರಂಗುಗಳಿಂದಲೂ ತೊಗಲಿಗೆ ನಿಮ್ನೋಷ್ಣತೆಯಲ್ಲೇ ಬಣ್ಣ ಕೊಡಬಹುದು. ರಂಗಿನ ಪೂರ್ಣ ವಿನಿಯೋಗಕ್ಕೆ ಸಹಾಯಕವಾಗಿ ಫಾರ್ಮಿಕ್ ಆಮ್ಲವನ್ನು ಬಳಸುತ್ತಾರೆ. ನೈಸರ್ಗಿಕ ರಂಗುಗಳಾದ ಕ್ವೆರ್‍ಸಿಟ್ರಾನ್, ಲಾಗ್‍ವುಡ್ ಇತ್ಯಾದಿಗಳಿಂದಲೂ ತೊಗಲನ್ನು ರಂಗಿಸಬಹುದು.

	ಆಹಾರಗಳು: ಕೃತಕ ಬಣ್ಣಗಳುಳ್ಳ ಹೆಚ್ಚಿನ ಆಹಾರ ಪದಾರ್ಥಗಳಿಗೆ ನಿಜವಾಗಿ ರಂಗುಗಳನ್ನು ಪ್ರಯೋಗಿಸಿರುವುದೇ ಇಲ್ಲ. ಆದರೆ ಸಿಟ್ರಸ್ ಹಣ್ಣುಗಳು ಕಲ್ಲಂಗಡಿ ಹಣ್ಣಿನ ಹಲ್ಲೆಗಳು ಇತ್ಯಾದಿಗಳನ್ನು ಯುಕ್ತ ಆಹಾರ ರಂಗನ್ನು ಒಳಗೊಂಡಿರುವ ಸಕ್ಕರೆ ಪಾಕದಲ್ಲಿ ದೀರ್ಘ ಕಾಲದ ತನಕ ಉನಿಹಾಕಿ ತೆಗೆದಿರುತ್ತಾರೆ. ಈಸ್ಟರ್ ಹಬ್ಬದಲ್ಲಿ ಸ್ನೇಹಿತರಿಗೆ ಉಪಚಾರವಾಗಿ ಕೊಡುವ ಬಣ್ಣಹಾಕಿದ ಮೊಟ್ಟೆ ಆಕಾರದ ಮಿಠಾಯಿಗಳು ಚಿರಪರಿಚಿತ.

	ತುಪ್ಪುಳು : ಇದಕ್ಕೆ ಅಮೀನುಗಳಂಥ ಆಗ್ರ್ಯಾನಿಕ್ ಮಧ್ಯವರ್ತಿಗಳನ್ನು ಉಣಿಸಿ, ಅನಂತರ ಪರಾಕ್ಸೈಡುಗಳಿಂದ ಅವನ್ನು ಉತ್ಕರ್ಷಿಸಿದರೆ ಅಜೀನುಗಳಂಥ ವರ್ಣದ್ರವ್ಯಗಳು ಉಂಟಾಗುತ್ತವೆ. ವರ್ಣದ್ರವ್ಯದ ರೂಪಣೆ ಪೂರ್ತಿಯಾಗದಿದ್ದ ಪಕ್ಷದಲ್ಲಿ ಅವನ್ನು ಧರಿಸಿದವರ ಮೇಲೆ ದುಷ್ಪರಿಣಾಮಗಳಾಗುವ ಸಂಭವ ಉಂಟು. ಆದ್ದರಿಂದ ಬಣ್ಣ ಹಾಕಿದ ತುಪ್ಪುಳುವಿನಲ್ಲಿ ಅಮೀನ್ ನಿಶ್ಯೇಷವಾಗಿ ಹೋಗಿರುವಂತೆ ಎಚ್ಚರಿಕೆ ವಹಿಸುವುದು ಅಗತ್ಯ.

	ಮಾನವ ರೋಮ : ಇದು ಒಂದು ವಿಧವಾದ ನೂಲು. ಕೂದಲಿಗೆ ಬಣ್ಣ ಕೊಡುವ ಕೆಲಸ ನಿಮ್ನೋಷ್ಣತೆಯಲ್ಲಿ ನಡೆಯಬೇಕಾದದ್ದು ಸಹಜವೆ. ರೋಮ ಮುಕ್ಕಳಿಕೆಗಳಲ್ಲಿ (ರಿನ್ಸಸ್) ಆಹಾರ ರಂಗುಗಳೂ ಸಿಟ್ರಿಕ್ ಆಮ್ಲ ಅಥವಾ ಮ್ಯಾಲಿಕ್ ಆಮ್ಲಗಳೂ ಸೇರಿರುತ್ತವೆ. ಇತರ ಕೆಲವು ಮುಕ್ಕಳಿಕೆಗಳು ಬಟ್ಟೆ ಬಣ್ಣಗಳ ಜೊತೆಗೆ ಲವಣಗಳು, ಮಾರ್ಜಕಗಳು, ಮ್ಯಾಲಿಕ್ ಆಮ್ಲ, ಸಿಟ್ರಿಕ್ ಆಮ್ಲ ಅಥವಾ ಟಾರ್ಟಾರಿಕ್ ಆಮ್ಲ ಮೊದಲಾದ ರಿಕ್ತಕಗಳನ್ನು (ಡೈಲ್ಯೂಯೆಂಟ್ಸ್) ಒಳಗೊಂಡಿರುವುವು. ನರೆತ ಅಥವಾ ಬಿಳಿ ಕೂದಲಿನ ತಿಳಿ ಹಳದಿ ಛಾಯೆಯನ್ನು ಮುಚ್ಚಲು ನೀಲಿ ಅಥವಾ ನೇರಿಳೆ ಬಣ್ಣದ ಆಹಾರ ಅಥವಾ ಬಟ್ಟೆ ರಂಗುಗಳನ್ನು ಉಪಯೋಗಿಸುತ್ತಾರೆ. ಇದರ ಜೊತೆಗೆ ದ್ಯುತಿ ಚಲುವೆಕಾರಿಗಳನ್ನೂ ಸೇರಿಸುವುದು ವಾಡಿಕೆ. ಇವು ಸ್ವಯಂ ಬಣ್ಣವಿಲ್ಲದ ಪದಾರ್ಥಗಳು. ಆದರೆ ಅಗೋಚರ ಅತಿನೇರಿಳೆ ಬೆಳಕನ್ನು ಗ್ರಹಿಸಿ ಅದನ್ನು ನೀಲಿ ಅಥವಾ ನೇರಿಳೆ ಕಿರಣ ಸ್ಫುರಣವಾಗಿ ನಮ್ಮ ಕಣ್ಣಿಗೆ ಪ್ರತಿಫಲಿಸಬಲ್ಲವು.

	(ಎಚ್.ಜಿ.ಎಸ್.)

	ನೈಸರ್ಗಿಕ ಬಣ್ಣಗಳು : ಸುಮಾರು ಇಪ್ಪತ್ತು ಸಾವಿರ ವರ್ಷಗಳ ಹಿಂದಿನಿಂದ ಆದಿಕಾಲದ ಮಾನವ ತಾನು ಮೈಗೆ ಸುತ್ತಿಕೊಳ್ಳುತ್ತಿದ್ದ ಚರ್ಮಗಳ ಮೇಲೂ ತೊಗಟೆಗಳ ಮೇಲೂ ಬಣ್ಣಬಣ್ಣದ ನಕಾಶೆಗಳನ್ನು ಬಿಡಿಸಲು ಒರಟಾದ ಅಚ್ಚುಹಾಕುವ ವಿಧಾನ ಉಪಯೋಗಿಸಿದ್ದು ಕಂಡುಬರುತ್ತದೆ. ನವಶಿಲಾಯುಗದ ಮಾನವ ಉಪಯೋಗಿಸುತ್ತಿದ್ದ ಒರಟಾದ ನಾರುಬಟ್ಟೆಗಳಲ್ಲಿಯೂ ಬಣ್ಣಗಳ ಉಪಯೋಗ ಕಂಡುಬಂದಿದೆ. ಈಜಿಪ್ಟ್ ದೇಶದಲ್ಲಿ ಪುರಾತನಕಾಲದ (ಸುವಾಸನೆಯ ರಾಸಾಯನಿಕ ಮುಲಾಮು ಹಚ್ಚಿ ಕೊಳೆಯದಂತೆ ರಕ್ಷಿಸಿಟ್ಟ) ಮೃತದೇಹಗಳ (ಮಮ್ಮಿಗಳ) ಸುತ್ತು ಹೊದಿಕೆಬಟ್ಟೆಗಳ ಬಣ್ಣಗಳು ಇಂದಿಗೂ ಅಷ್ಟೊಂದು ಮಾಸದಿರುವುದು ಆಶ್ಚರ್ಯ ಉಂಟುಮಾಡುತ್ತದೆ. ನೀಲಿಯ (ಇಂಡಿಗೋ) ಬಣ್ಣ ಹಾಕುವ ವಿಧಾನ ಇಂದಿಗೂ ಕಷ್ಟತರವಾಗಿರುವಾಗ ಸಾವಿರಾರು ವರ್ಷಗಳ ಹಿಂದೆ ಈ ಬಣ್ಣ ಉಪಯೋಗಿಸುತ್ತಿದ್ದರೆಂಬುದು ಅಚ್ಚರಿಯ ಸಂಗತಿ. ಕಾಲವೂ ಶ್ರಮವೂ ಬೇಡುವ ಮತ್ತು ಕಷ್ಟಸಾಧ್ಯವಾದ ಬಣ್ಣ ಹಾಕುವ ಕಲೆ ಬಹಳ ಗುಟ್ಟಾಗಿ ರಕ್ಷಿಸಲ್ಪಟ್ಟ ಕಸಬುದಾರರ ವಂಶಪಾರಂಪರ್ಯವಾಗಿ ನಡೆದುಬಂದಿತು. ಪುರಾತನ ಕಾಲದಿಂದಲೂ ಭಾರತದಲ್ಲಿ ಈ ವಿದ್ಯೆ ಮುಂದುವರಿದಿದ್ದು ಇತರ ದೇಶಗಳಿಗೂ ಹರಡಿತು. ಮೊದಮೊದಲು ಪ್ರಕೃತಿಯಲ್ಲಿಯೇ ಸುಲಭವಾಗಿ ಸಿಗುವ ಎಲೆ, ಹೂವು, ಹಣ್ಣು, ಮರದ ತೊಗಟೆ ಇವುಗಳ ರಸದಲ್ಲಿ ಅದ್ದಿ ತೆಗೆದು ಬಟ್ಟೆಗಳನ್ನು ರಂಗಿಸುತ್ತಿದ್ದರು. ರಮ್ಯವಾದ ಗಟ್ಟಿ ಬಣ್ಣಗಳನ್ನು ಹಾಕುವುದು ಕಷ್ಟಸಾಧ್ಯವಾದ್ದರಿಂದ ಸಾಮಾನ್ಯ ಜನ ಬಣ್ಣ ಹಾಕಿದ ಬಟ್ಟೆಗಳನ್ನು ಹಾಕುವುದು ಕಷ್ಟಸಾಧ್ಯವಾದ್ದರಿಂದ ಸಾಮಾನ್ಯ ಜನ ಬಣ್ಣ ಹಾಕಿದ ಬಟ್ಟೆಗಳನ್ನು ಉಪಯೋಗಿಸುವಂತಿರಲಿಲ್ಲ. ಪ್ರಖ್ಯಾತವಾದ ರಾಜಯೋಗ್ಯವಾದ (ಟ್ಯಾರಿಯನ್ ಪರ್ಪಲ್) ಕೆಂಪು ನೀಲಿ ಮಿಶ್ರಿತ ಊದಾ ಬಣ್ಣವಂತೂ ರಾಜರಿಗೂ ಮತಧರ್ಮಾಧಿಕಾರಿಗಳಿಗೂ ಮೀಸಲಾಗಿತ್ತು. ಇತರರು ಈ ಬಣ್ಣವನ್ನು ಉಪಯೋಗಿಸುವುದು ನಿಷೇಧಿಸಲ್ಪಟ್ಟಿತ್ತು. ನೂರಾ ಎಂಬತ್ತು ವರ್ಷಗಳಾದರೂ ಸ್ವಲ್ಪವೂ ಬಣ್ಣಗೆಡದ ಈ ಬಣ್ಣದ ವಿಷಯ ಪ್ಲೂ ಟಾರ್ಕನಿಂದ ತಿಳಿದು ಬರುವುದು. ಭೂಮಧ್ಯ ಸಮುದ್ರದಲ್ಲಿರುವ ಒಂದು ತರಹ ಮೃದ್ವಂಗಿಗಳಿಂದ (ಮಾಲಸ್ಕ್) ಈ ಬಣ್ಣವನ್ನು ಸಂಸ್ಕರಿಸಲಾತ್ತಿತ್ತು. (ಹನ್ನೆರಡುಸಾವಿರ ಜೀವಿಗಳಿಂದ ಕೇವಲ ಒಂದೂವರೆ ಗ್ರಾಮ್ ಬಣ್ಣಸಿಗುವುದು. ಇದು ನೀಲಿಗೆ ಸಂಬಂಧಿಸಿದ ಡ್ಯಾಬ್ರೋಮೊ ಇಂಡಿಗೊ ಬಣ್ಣ.) ರಸಾಯನವಿಜ್ಞಾನದ ಬೆಳೆವಣಿಗೆಯ ಪರಿಣಾಮವಾಗಿ ಕೆಲವೇ ಮಿನಿಟುಗಳಲ್ಲಿ ಹಾಕಬಹುದಾದ ರಮ್ಯವಾದ ಗಟ್ಟಿ ಬಣ್ಣಗಳನ್ನು ಶೋಧಿಸಿರುವುದರಿಂದ ಕ್ರಮೇಣ ನೈಸರ್ಗಿಕ ಬಣ್ಣಗಳ ಬಳಕೆ ಕಡಿಮೆ ಆಗುತ್ತದೆ. ನೈಸರ್ಗಿಕ ಬಣ್ಣಗಳ ರಾಸಾಯನಿಕ ವಿಶ್ಲೇಷಣೆಯಿಂದ ಕೃತಕ ಬಣ್ಣಗಳ ಬೆಳೆವಣಿಗೆ ತುಂಬ ಸಹಾಯವಾಯಿತು.

	ಕಾವಿಯಂಥ ಅಯಸ್ಸಿಂಧೂರಗಳಿಂದ ಕೂಡಿದ ಮಣ್ಣುಗಳೂ ಅದುರುಗಳ ಪುಡಿಗಳೂ ಉಪಯೋಗಿಸಲ್ಪಡುತ್ತಿದ್ದುವು. ಸೈನಿಕರು ಧರಿಸುವ ಪೋಷಾಕುಗಳಿಗೆ ಹಾಕುವ ಖನಿಜ ಖಾಕಿ (ಮಿನರಲ್ ಖಾಕಿ) ಇಂಥ ಬಣ್ಣಗಳಿಂದ ಪ್ರೇರಿತವಾದುದು. 1856ರಲ್ಲಿ ಪರ್ಕಿನ್ ಎಂಬ ಪ್ರಸಿದ್ಧ ರಸಾಯನವಿಜ್ಞಾನಿ ಶೋಧಿಸಿದ ಉಜ್ಜ್ವಲ ಕೋಮಲ ಧೂಮ್ರದಿಂದ (ಮಾವ್) ಮೊದಲ್ಗೊಂಡು ಕೃತಕ ಬಣ್ಣಗಳು ಮುಂದಕ್ಕೆ ಬಂದುವು. ಮ್ಯಾಡರ್ ಎಂಬ ನಸುಹಳದಿಬಣ್ಣದ ಹೂಬಿಡುವ ಒಂದು ಜಾತಿಯ ಅಡರುಬಳ್ಳಿಯಿಂದ ತಯಾರುಮಾಡಿದ ಬಣ್ಣ ಉಪಯೋಗಿಸಿ, ಎಣ್ಣೆಯನ್ನೂ ಪಟಕ ಮತ್ತು ಸುಣ್ಣವನ್ನೂ ಬಣ್ಣಗಚ್ಚಾಗಿ ಉಪಯೋಗಿಸಿ ಮಾಡುತ್ತಿದ್ದ ಟರ್ಕಿ ರೆಡ್ ಎಂದು ಹೆಸರಾದ ಉಜ್ಜ್ವಲ ರಮ್ಯವಾದ ಬೆಳಕಿಗೆ ಗಟ್ಟಿಯಾದ ಕೆಂಪು ಬಣ್ಣವನ್ನು ಕೃತಕವಾಗಿ ತಯಾರಿಸಲು ಅನೇಕ ವರ್ಷಗಳು ಬೇಕಾದುವು. ಮತ್ತೊಂದು ಹೆಸರುವಾಸಿಯಾದ ಬಣ್ಣ ಅರಗುಬಣ್ಣ (ಲಾಕ್ಷಾ). ರಂಗಿಸಬೇಕಾದ ಬಟ್ಟೆಗಳನ್ನು (ಮುಖ್ಯವಾಗಿ ರೇಷ್ಮೆ, ಮತ್ತು ಉಣ್ಣೆ) ಮೊದಲು ತವರಲವಣ (ತೃಪ್ಯಲವಣ) ಅಥವಾ ಪಟಕದ ಬಣ್ಣಗಚ್ಚಿನ ನೀರಿನಲ್ಲಿ ಚೆನ್ನಾಗಿ ಅದ್ದಿ ತೆಗೆದು ಹಿಂಡಿ ಅನಂತರ ಅರನ್ನು ಕ್ಷಾರದ್ರಾವಣಗಳಲ್ಲಿ ಬೇಯಿಸಿತೆಗೆದ ಕಷಾಯದಲ್ಲಿ ಅದ್ದಿದರೆ ಗಾಢ ರಕ್ತವರ್ಣ ಉಂಟಾಗುವುದು. ಮೆಕ್ಸಿಕೊ ಮುಂತಾದ ದೇಶಗಳಲ್ಲಿ ಪಾಪಾಸುಕಳ್ಳಿಯ ಜಾತಿಯಗಿಡಗಳ ಮೇಲೆ ಬೆಳೆಯುವ ಕೊಚಿನೀಲ್ ಎಂಬ ಹುಳುಗಳ ಒಣ ಒಡಲುಗಳಿಂದಲೂ ಓಕ್ ಮರದ ಎಲೆಗಳ ಮೇಲೆ ಜೀವಿಸುವ ಕರ್ಮಿನ್ ಎಂಬ ಹುಳುಗಳ ಒಡಲುಗಳಿಂದಲೂ ಪ್ರಖ್ಯಾತವಾದ ಕೆಂಪು ಬಣ್ಣಗಳನ್ನು ಮಾಡುತ್ತಿದ್ದರು.

	ಹಳದಿಬಣ್ಣವನ್ನು ಅರಿಶಿನ, ವೆಲ್ಡ್ ಎಂಬ ಕಳೆಗಿಡಗಳು, ಫಸ್ಟಿಕ್ ಮರಗಳು, ತೆರತೆರನಾದ ಕಲ್ಲುಹೂಗಳು ಇವುಗಳಿಂದ ಪಡೆಯುತ್ತಿದ್ದರು. ಅನಾಟೋಮರದ ಬೀಜಗಳು, ಕುಸುಬೆಹೂ ದಳಗಳು ಮುಂತಾದವುಗಳಿಂದ ಕಿತ್ತಳೆ ಬಣ್ಣ ಸಿಗುತ್ತಿತ್ತು. ಕಡ್‍ಬೇರ್ ಎಂಬ ಕಲ್ಲೂಹೂವನ್ನು ನೇರಿಳೆ ಬಣ್ಣಕ್ಕಾಗಿ ಉಪಯೋಗಿಸುತ್ತಿದ್ದರು. ನೀಲಿಬಣ್ಣಕ್ಕಾಗಿ ಭಾರತದಲ್ಲಿ ಪುರಾತನಕಾಲದಿಂದಲೂ ಪ್ರಖ್ಯಾತವಾದ ನೀಲಿಯ ಗಿಡ (ಇಂಡಿಗೊ), ವೋಡ್, ಕ್ಯಾಮ್‍ವುಡ್ ಮುಂತಾದವನ್ನು ಬಳಸುತ್ತಿದ್ದರು. ಲಾಗ್‍ವುಡ್, ಅಳಲೆಕಾಯಿ ಮುಂತಾದವು ಕಪ್ಪು ಬಣ್ಣ ಕಟ್ಟಲು ಸಹಾಯವಾಗುತ್ತಿದ್ದುವು. ಈ ಬಣ್ಣಗಳನ್ನು ಕೆಲವು ವೇಳೆ ನೇರವಾಗಿ ಇಲ್ಲವೇ ಗಟ್ಟಿಯಾದ ಬಣ್ಣಗಳನ್ನು ಪಡೆಯಲು ಬಣ್ಣಗಚ್ಚುಗಳ ಸಹಾಯವನ್ನು ಪಡೆದು ಉಪಯೋಗಿಸುತ್ತಿದ್ದರು. ಬಟ್ಟೆಯ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಬಣ್ಣಗಚ್ಚುಗಳ (ಮಾರ್ಡೆಂಟ್) ಬಳಕೆಯಿಂದ ಅನಂತರ ಒಂದೇ ಬಣ್ಣದಲ್ಲಿ ಅದ್ದಿ ವಿವಿಧ ಬಣ್ಣಗಳುಳ್ಳ ಬಟ್ಟೆಯನ್ನು 

ತಯಾರುಮಾಡಲಾಗುತ್ತಿತ್ತು.

ಎರಡನೆಯ ಮಹಾಯುದ್ಧದ ಕಾಲದಲ್ಲಿ ಭಾರತದಲ್ಲಿ ಸೈನಿಕರ ಉಡುಪುಗಳಿಗೂ ಗುಡಾರಗಳಿಗೂ ಅಳಿಲೆಕಾಯಿಯ ಕಷಾಯ, ಅನ್ನಭೇದಿ ಇದನ್ನೇ ಮುಖ್ಯವಾಗಿ ಉಪಯೋಗಿಸಿ ಬರುವ ವೆಜಿಟೆಬಲ್ ಖಾಕಿಯನ್ನು ದೊಡ್ಡ ಪರಿಮಾಣದಲ್ಲಿ ಉಪಯೋಗಿಸಲಾಯಿತು. ಗುಡಾರ ಮುಂತಾದವುಗಳಿಗೆ ಕಾಚು (ಖದಿರ) ಮತ್ತು ಮೈಲುತುತ್ತ ಇವುಗಳಿಂದಾಗುವ ಸಸ್ಯದ ಬಣ್ಣ ಹಾಕಿದರೆ ಅವುಗಳಿಗೆ ಸುಲಭವಾಗಿ ಮುಗ್ಗು ಹಿಡಿಯುವುದಿಲ್ಲ. ಬಣ್ಣಹಾಕುವ ಕಲೆಯನ್ನು ಭಾರತದಲ್ಲಿ ಗುಟ್ಟಾಗಿ ರಕ್ಷಿಸಿಟ್ಟ ಪರಿಣಾಮವಾಗಿ ಬಣ್ಣ ಸಂಬಂಧವಾದ ವಿಷಯ ಸಂಗ್ರಹಗಳಲ್ಲಿ ಬೇರೆ ದೇಶಗಳಲ್ಲಿ ಉಪಯೋಗದಲ್ಲಿದ್ದ ಸಸ್ಯಾದಿಗಳ ಉಲ್ಲೇಖಗಳೇ ಹೆಚ್ಚು.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ